ಪಶ್ಚಿಮ ದೇಶಗಳ ಬೆಂಬಲಿಗರಿಂದ ಬ್ಯಾರೆಲ್ ಗೆ 60 ಯುಎಸ್ ಡಿ ಮಿತಿ: ರಷ್ಯಾ ಎಚ್ಚರಿಕೆ ಏನು ಗೊತ್ತೇ?

ರಷ್ಯಾ ಪೂರೈಕೆ ಮಾಡುತ್ತಿರುವ ಇಂಧನಕ್ಕೆ ಪಶ್ಚಿಮದ ದೇಶಗಳು ಹಾಗೂ ಅದರ ಬೆಂಬಲಿಗ ದೇಶಗಳು ಪ್ರತಿ ಬ್ಯಾರೆಲ್ ಗೆ 60 ಯುಎಸ್ ಡಿ ಬೆಲೆಯ ಮಿತಿಯನ್ನು ವಿಧಿಸಿಕೊಳ್ಳಲು ಮುಂದಾಗಿವೆ. 
ರಷ್ಯಾ ಇಂಧನ (ಸಂಗ್ರಹ ಚಿತ್ರ)
ರಷ್ಯಾ ಇಂಧನ (ಸಂಗ್ರಹ ಚಿತ್ರ)

ಮಾಸ್ಕೋ: ರಷ್ಯಾ ಪೂರೈಕೆ ಮಾಡುತ್ತಿರುವ ಇಂಧನಕ್ಕೆ ಪಶ್ಚಿಮದ ದೇಶಗಳು ಹಾಗೂ ಅದರ ಬೆಂಬಲಿಗ ದೇಶಗಳು ಪ್ರತಿ ಬ್ಯಾರೆಲ್ ಗೆ 60 ಯುಎಸ್ ಡಿ ಬೆಲೆಯ ಮಿತಿಯನ್ನು ವಿಧಿಸಿಕೊಳ್ಳಲು ಮುಂದಾಗಿವೆ. 

ಈ ರೀತಿಯಾಗಿ ಬೆಲೆಗೆ ತಾವಾಗಿಯೇ ಮಿತಿ ವಿಧಿಸಿಕೊಳ್ಳುವ ಹಾಗೂ ಅದನ್ನು ಅನುಮೋದಿಸುವ ರಾಷ್ಟ್ರಗಳಿಗೆ ಇಂಧನ ಪೂರೈಕೆಯನ್ನು ಸ್ಥಗಿತಗೊಳಿಸುವುದಾಗಿ ರಷ್ಯಾ ಎಚ್ಚರಿಕೆ ನೀಡಿದೆ.
 
ಆಸ್ಟ್ರೇಲಿಯಾ, ಬ್ರಿಟನ್, ಕೆನಡಾ, ಜಪಾನ್, ಅಮೇರಿಕಾ ಹಾಗೂ ಯುರೋಪಿಯನ್ ಯೂನಿಯನ್ ನ 27 ರಾಷ್ಟ್ರಗಳು, ರಷ್ಯಾ ಇಂಧನಕ್ಕೆ ಪ್ರತಿ ಬ್ಯಾರೆಲ್ ಗೆ 60 ಡಾಲರ್ ಮಾತ್ರ ಪಾವತಿಸುವುದಾಗಿ ಮಿತಿ ವಿಧಿಸಿಕೊಳ್ಳುವುದಕ್ಕೆ ನಿರ್ಧರಿಸಿರುವ ರಾಷ್ಟ್ರಗಳಾಗಿವೆ.

ಸೋಮವಾರದಿಂದ ಈ ರಾಷ್ಟ್ರಗಳು ಸ್ವಯಂ ಘೋಷಿತವಾಗಿ ನಿಗದಿಪಡಿಸಿರುವ ಮಿತಿ ಜಾರಿಗೆ ಬರಲಿದೆ. 

ಈ ಬಗ್ಗೆ ರಷ್ಯಾದ ವಕ್ತಾರ ಡಿಮಿಟ್ರಿ ಪೆಸ್ಕೋವ್ ಮಾತನಾಡಿದ್ದು, ರಷ್ಯಾ ನಿರ್ದಿಷ್ಟ ಪ್ರತಿಕ್ರಿಯೆ ನೀಡುವುದಕ್ಕೂ ಮುನ್ನ ಪರಿಸ್ಥಿತಿಯನ್ನು ವಿಶ್ಲೇಷಿಸಬೇಕಿದೆ. ಆದರೆ ಬೆಲೆ ಮಿತಿಯನ್ನು ರಷ್ಯಾ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. 

ವಿಯೆನ್ನಾ, ಮಿಖಾಯಿಲ್, ಉಲಿಯಾನೋವ್ ಗಳಲ್ಲಿರುವ ರಷ್ಯಾದ ಶಾಶ್ವತ ಪ್ರತಿನಿಧಿಗಳು ಯುರೋಪಿಯನ್ ಬೆಂಬಲಿಗರಿಗೆ ಎಚ್ಚರಿಕೆ ನೀಡಿದ್ದಾರೆ.
 
"ಈ ವರ್ಷದಿಂದ ಯುರೋಪ್ ರಷ್ಯಾದ ಇಂಧನವಿಲ್ಲದೇ ಜೀವಿಸಲಿದೆ ಎಂದು ಉಲಿಯಾನೋವ್ ಟ್ವೀಟ್ ಮಾಡಿದ್ದಾರೆ. ಮಾರುಕಟ್ಟೆ ವಿರೋಧಿ ಮಿತಿಗಳನ್ನು ಬೆಂಬಲಿಸುವ ರಾಷ್ಟ್ರಗಳಿಗೆ ಇಂಧನ ಪೂರೈಕೆ ಮಾಡುವುದಿಲ್ಲ ಎಂದು ಮಾಸ್ಕೋ ಈಗಾಗಲೇ ಸ್ಪಷ್ಟಪಡಿಸಿದೆ. ರಷ್ಯಾ ಇಂಧನವನ್ನು ಅಸ್ತ್ರವನ್ನಾಗಿ ಪ್ರಯೋಗಿಸುತ್ತಿದೆ ಎಂದು ಯುರೋಪಿಯನ್ ಯೂನಿಯನ್ ಶೀಘ್ರವೇ ಆರೋಪಿಸಲಿದೆ ಎಂದು ಉಲಿಯಾನೋವ್ ಟ್ವೀಟ್ ನಲ್ಲಿ ಎಚ್ಚರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com