ಉಕ್ರೇನ್ ಮೇಲೆ ಮತ್ತೊಂದು ಪ್ರಮುಖ ಕ್ಷಿಪಣಿ ದಾಳಿ ನಡೆಸಿದ ರಷ್ಯಾ

ಉಕ್ರೇನ್ ಮೇಲೆ ರಷ್ಯಾ ಶುಕ್ರವಾರ (ಡಿ.16 ರಂದು) ಪ್ರಮುಖ ಕ್ಷಿಪಣಿ ದಾಳಿ ನಡೆಸಿದ್ದು, ಕನಿಷ್ಟ ಮೂರು ನಗರಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. 
ಉಕ್ರೇನ್
ಉಕ್ರೇನ್

ಕೀವ್: ಉಕ್ರೇನ್ ಮೇಲೆ ರಷ್ಯಾ ಶುಕ್ರವಾರ (ಡಿ.16 ರಂದು) ಪ್ರಮುಖ ಕ್ಷಿಪಣಿ ದಾಳಿ ನಡೆಸಿದ್ದು, ಕನಿಷ್ಟ ಮೂರು ನಗರಗಳಲ್ಲಿ ಸ್ಫೋಟ ಸಂಭವಿಸಿದೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಬರೆದಿರುವ ಸ್ಥಳೀಯ ಅಧಿಕಾರಿಗಳು ರಾಜಧಾನಿ ಕೀವ್,  ಬಳಿ ಸ್ಫೋಟ ಸಂಭವಿಸಿರುವುದರ ಬಗ್ಗೆ ವರದಿ ಮಾಡಿದ್ದು, ಕ್ರಿವಿ ರಿಹ್ ಮತ್ತು ಈಶಾನ್ಯ ಖಾರ್ಕಿವ್ ಗಳಲ್ಲಿ ದಾಳಿ ನಡೆದಿದೆ ಎಂದು ಹೇಳಿದ್ದಾರೆ.

ಟೆಲಿಗ್ರಾಮ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿರುವ ಉಕ್ರೇನ್ ಅಧಿಕಾರಿ ಖಾರ್ಕಿವ್ ಮೇಯರ್ ಇಹೋರ್ ತೆರೆಖೋವ್ ಇಡೀ ನಗರ ವಿದ್ಯುತ್ ಇಲ್ಲದೇ ಕತ್ತಲಲ್ಲಿ ಮುಳುಗಿದೆ ಎಂದು ಹೇಳಿದ್ದಾರೆ. ಖಾರ್ಕಿವ್ ಮೇಯರ್ ಪ್ರಾದೇಶಿಕ ಗೌರ್ನರ್ ಓಲೆಹ್ ಸಿನಿಹುಬೊವ್ ನಗರದ ಪ್ರಮುಖ ಮೂಲಸೌಕರ್ಯಗಳ ಮೇಲೆ ಮೂರು ದಾಳಿಗಳು ನಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com