ಎನ್‌ಜಿಒಗಳಲ್ಲಿ ಮಹಿಳಾ ಸಿಬ್ಬಂದಿ ಕೆಲಸ ಮಾಡುವುದನ್ನು ನಿಷೇಧಿಸಿದ ತಾಲಿಬಾನ್ ಸರ್ಕಾರ

ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಮಹಿಳೆಯರು ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್‌ಜಿಒ) ಕೆಲಸ ಮಾಡುವುದನ್ನು ನಿಷೇಧಿಸಿದೆ. ಈ ಕ್ರಮವು ವಿಶ್ವಸಂಸ್ಥೆ, ಮಾನವ ಹಕ್ಕುಗಳ ಸಂಸ್ಥೆಗಳು ಮತ್ತು ವಿಶೇಷವಾಗಿ ಲಿಂಗ ತಾರತಮ್ಯದ ವಿರುದ್ಧ ಹೋರಾಡುವವರಿಂದ ವ್ಯಾಪಕ ಖಂಡನೆಗೆ ಒಳಗಾಗಿದೆ|
ಅಫ್ಘಾನಿಸ್ತಾನದ ಕಾಬುಲ್‌ನಲ್ಲಿರುವ ಕಾಬುಲ್ ವಿಶ್ವವಿದ್ಯಾನಿಲಯದ ಗೇಟ್‌ಗಳಲ್ಲಿ ಆಫ್ಘನ್ ಮಹಿಳಾ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಅಫ್ಘಾನಿಸ್ತಾನದ ಕಾಬುಲ್‌ನಲ್ಲಿರುವ ಕಾಬುಲ್ ವಿಶ್ವವಿದ್ಯಾನಿಲಯದ ಗೇಟ್‌ಗಳಲ್ಲಿ ಆಫ್ಘನ್ ಮಹಿಳಾ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತಿದ್ದಾರೆ.

ಕಾಬುಲ್: ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವು ಮಹಿಳೆಯರು ಸರ್ಕಾರೇತರ ಸಂಸ್ಥೆಗಳಲ್ಲಿ (ಎನ್‌ಜಿಒ) ಕೆಲಸ ಮಾಡುವುದನ್ನು ನಿಷೇಧಿಸಿದೆ. ಈ ಕ್ರಮವು ವಿಶ್ವಸಂಸ್ಥೆ, ಮಾನವ ಹಕ್ಕುಗಳ ಸಂಸ್ಥೆಗಳು ಮತ್ತು ವಿಶೇಷವಾಗಿ ಲಿಂಗ ತಾರತಮ್ಯದ ವಿರುದ್ಧ ಹೋರಾಡುವವರಿಂದ ವ್ಯಾಪಕ ಖಂಡನೆಗೆ ಒಳಗಾಗಿದೆ|

ಮಹಿಳಾ ಸಿಬ್ಬಂದಿಯನ್ನು ವಜಾಗೊಳಿಸುವಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಎನ್‌ಜಿಒಗಳಿಗೆ ಶನಿವಾರ ಅಫ್ಘಾನಿಸ್ತಾನದ ಆರ್ಥಿಕ ಸಚಿವಾಲಯ ಪತ್ರ ಬರೆದಿದ್ದು, ವಿಫಲವಾದರೆ, ಅವರ ಪರವಾನಗಿಯನ್ನು ರದ್ದುಗೊಳಿಸುವುದಾಗಿ ಹೇಳಿರುವುದಾಗಿ ಟೋಲೋ ನ್ಯೂಸ್ ವರದಿ ಮಾಡಿದೆ.

ಎನ್‌ಜಿಒಗಳಲ್ಲಿ ಕೆಲಸ ಮಾಡುವ ಮಹಿಳಾ ಸಿಬ್ಬಂದಿ ಹಿಜಾಬ್ ಧರಿಸದೆ ವಸ್ತ್ರ ಸಂಹಿತೆಯನ್ನು ಮುರಿದಿದ್ದರಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ತಾಲಿಬಾನ್ ಸರ್ಕಾರ ತಿಳಿಸಿದೆ.

ವಿಶ್ವಸಂಸ್ಥೆಯ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಈ ಕ್ರಮವನ್ನು ಟೀಕಿಸಿದ್ದು, ಇದು 'ಆಫ್ಘನ್ ಜನರಿಗೆ ವಿನಾಶಕಾರಿ' ಮತ್ತು 'ಲಕ್ಷಾಂತರ ಜನರಿಗೆ ಪ್ರಮುಖ ಮತ್ತು ಜೀವ ಉಳಿಸುವ ಸಹಾಯಕ್ಕೆ ಅಡ್ಡಿಪಡಿಸುತ್ತದೆ' ಎಂದಿರುವುದಾಗಿ ಬಿಬಿಸಿ ವರದಿ ಮಾಡಿದೆ.

'ಪ್ರಪಂಚದಾದ್ಯಂತ ಮಾನವೀಯ ಕಾರ್ಯಾಚರಣೆಗಳಲ್ಲಿ ಮಹಿಳೆಯರು ಕೇಂದ್ರವಾಗಿದ್ದಾರೆ. ಈ ನಿರ್ಧಾರವು ಆಫ್ಘನ್ ಜನರಿಗೆ ವಿನಾಶಕಾರಿಯಾಗಬಹುದು' ಎಂದು ಬ್ಲಿಂಕೆನ್ ಹೇಳಿದರು.

ತಾಲಿಬಾನ್ ಸರ್ಕಾರ ಈ ನಡೆಯು 'ಮಾನವೀಯ ತತ್ವಗಳ ಸ್ಪಷ್ಟ ಉಲ್ಲಂಘನೆ' ಎಂದು ವಿಶ್ವಸಂಸ್ಥೆಯ ಅಧಿಕಾರಿಯೊಬ್ಬರು ಬಣ್ಣಿಸಿದ್ದಾರೆ.

'ತಾಲಿಬಾನ್ ಆರ್ಥಿಕ ಸಚಿವಾಲಯವು ಅಫ್ಘಾನಿಸ್ತಾನದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಎನ್‌ಜಿಒಗಳಲ್ಲಿನ ಎಲ್ಲಾ ಮಹಿಳಾ ಉದ್ಯೋಗಿಗಳನ್ನು ಅಮಾನತುಗೊಳಿಸಿರುವುದು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸ್ಥಳಗಳಿಂದ ಮಹಿಳೆಯರನ್ನು ಅಳಿಸುವ ಮತ್ತೊಂದು ಶೋಚನೀಯ ಪ್ರಯತ್ನವಾಗಿದೆ' ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಟ್ವಿಟರ್ ಖಾತೆಯಲ್ಲಿ ಬರೆಯಲಾಗಿದೆ.

ಈ ಹಿಂದೆ ತಾಲಿಬಾನ್ ಆಡಳಿತವು ವಿದ್ಯಾರ್ಥಿನಿಯರನ್ನು ವಿಶ್ವವಿದ್ಯಾಲಯಗಳಿಂದ ನಿಷೇಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com