ಲಂಡನ್: ಬೋರಿಸ್ ಜಾನ್ಸನ್ ನಂತರ ಯುಕೆ ಪ್ರಧಾನಿಯಾಗಲು ಪ್ರಯತ್ನ ಆರಂಭಿಸಿದ ರಿಷಿ ಸುನಕ್!

ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗಿ  ಕನ್ಸರ್ವೇಟಿವ್ ಪಕ್ಷದ ಹೊಸ ನಾಯಕ ಮತ್ತು ಭವಿಷ್ಯದ ಬ್ರಿಟಿಷ್ ಪ್ರಧಾನಿಯಾಗಲು ಯುಕೆ ಮಾಜಿ ಚಾನ್ಸೆಲರ್ ರಿಷಿ ಸುನಕ್ ಶುಕ್ರವಾರ ಔಪಚಾರಿಕವಾಗಿ ತಮ್ಮ ನಾಯಕತ್ವದ ಪ್ರಯತ್ನವನ್ನು ಪ್ರಾರಂಭಿಸಿದ್ದಾರೆ. 
ರಿಷಿ ಸುನಕ್
ರಿಷಿ ಸುನಕ್

ಲಂಡನ್: ಬೋರಿಸ್ ಜಾನ್ಸನ್ ಅವರ ಉತ್ತರಾಧಿಕಾರಿಯಾಗಿ  ಕನ್ಸರ್ವೇಟಿವ್ ಪಕ್ಷದ ಹೊಸ ನಾಯಕ ಮತ್ತು ಭವಿಷ್ಯದ ಬ್ರಿಟಿಷ್ ಪ್ರಧಾನಿಯಾಗಲು ಯುಕೆ ಮಾಜಿ ಚಾನ್ಸೆಲರ್ ರಿಷಿ ಸುನಕ್ ಶುಕ್ರವಾರ ಔಪಚಾರಿಕವಾಗಿ ತಮ್ಮ ನಾಯಕತ್ವದ ಪ್ರಯತ್ನವನ್ನು ಪ್ರಾರಂಭಿಸಿದ್ದಾರೆ. 

ಈ ವಾರದ ಆರಂಭದಲ್ಲಿ ಜಾನ್ಸನ್ ಕ್ಯಾಬಿನೆಟ್‌ಗೆ ರಾಜೀನಾಮೆ ನೀಡಿದ ಬ್ರಿಟಿಷ್ ಭಾರತೀಯ ಸಚಿವ ರಿಷಿ ಸುನಕ್, ನಾಯಕತ್ವದ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಯಾರಾದರೂ ಈ ಕ್ಷಣವನ್ನು ಹಿಡಿದಿಟ್ಟುಕೊಳ್ಳಬೇಕು ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಾಕಲಾಗಿರುವ ವೀಡಿಯೊದಲ್ಲಿ ಹೇಳಿದ್ದಾರೆ.

42 ವರ್ಷದ ಸಂಸದ ಮತ್ತು ಇನ್ಫೋಸಿಸ್ ಸಹ-ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ ಕನ್ಸರ್ವೇಟಿವ್ ಪಕ್ಷದ ಗಮನಾರ್ಹ ಭಾಗದ ಬೆಂಬಲವನ್ನು ಗಳಿಸಿದ್ದು, ಅವರ ಅಭ್ಯರ್ಥಿಯಾಗುವ ಸಾಧ್ಯತೆಯಿದೆ.

ಇದು ಬ್ರಿಟಿಷ್ ಭಾರತೀಯ ಕಥೆಯ ಅಂತ್ಯವಲ್ಲ ಎಂದು ನಾವು ಖಚಿತಪಡಿಸಿಕೊಳ್ಳಬೇಕು. ನಾವು ಸಾಧಿಸಲು ಇನ್ನೂ ಬಹಳಷ್ಟು ಇದೆ. ನಾವು ಇನ್ನೂ ಹೆಚ್ಚಿನದನ್ನು ಮಾಡಬಹುದು. ಮತ್ತು ಭವಿಷ್ಯದ ಬಗ್ಗೆ ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ ಎಂದು ಅವರು ಕಳೆದ ವಾರ ಸುದ್ದಿಗಾರರಿಗೆ ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com