ಶಿಂಜೋ ಅಬೆ ಸಾವಿನ ಬೆನ್ನಲ್ಲೇ ರಾಜಕಾರಣಿಗಳಿಗೆ ಭದ್ರತೆ ಬಿಗಿಗೊಳಿಸಿ ಜಪಾನ್ ಪ್ರಧಾನಿ ಆದೇಶ

ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಅಕಾಲಿಕ ಸಾವಿನ ಬೆನ್ನಲ್ಲೇ ಜಪಾನ್ ಪ್ರಧಾನಿ ಕಿಶಿಡಾ ಫ್ಯೂಮಿಯೊ ಅವರು, ಜಪಾನ್ ರಾಜಕಾರಣಿಗಳಿಗೆ ಭದ್ರತೆ ಬಿಗಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ಜಪಾನ್ ಪ್ರಧಾನಿ
ಜಪಾನ್ ಪ್ರಧಾನಿ

ಟೋಕಿಯೋ: ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಅಕಾಲಿಕ ಸಾವಿನ ಬೆನ್ನಲ್ಲೇ ಜಪಾನ್ ಪ್ರಧಾನಿ ಕಿಶಿಡಾ ಫ್ಯೂಮಿಯೊ ಅವರು, ಜಪಾನ್ ರಾಜಕಾರಣಿಗಳಿಗೆ ಭದ್ರತೆ ಬಿಗಿಗೊಳಿಸಿ ಆದೇಶ ಹೊರಡಿಸಿದ್ದಾರೆ.

ಕ್ಯಾಬಿನೆಟ್ ಮಂತ್ರಿಗಳು ಮತ್ತು ಇತರ ರಾಜಕಾರಣಿಗಳಿಗೆ ಭದ್ರತೆಯನ್ನು ಬಿಗಿಗೊಳಿಸುವಂತೆ ಜಪಾನ್ ಪ್ರಧಾನಿ ಕಿಶಿಡಾ ಫ್ಯೂಮಿಯೊ ಸೂಚನೆ ನೀಡಿದ್ದಾರೆ ಎಂದು ಜಪಾನ್‌ನ ಸಾರ್ವಜನಿಕ ಪ್ರಸಾರಕ ಸುದ್ದಿಸಂಸ್ಥೆ ಎನ್‌ಎಚ್‌ಕೆ ವರ್ಲ್ಡ್ ವರದಿ ಮಾಡಿದೆ.

ಶುಕ್ರವಾರ ಮಧ್ಯಾಹ್ನ ಸುಮಾರು 20 ನಿಮಿಷಗಳ ಕಾಲ ರಾಷ್ಟ್ರೀಯ ಸಾರ್ವಜನಿಕ ಸುರಕ್ಷತಾ ಆಯೋಗದ ಅಧ್ಯಕ್ಷ ನಿನೋಯು ಸತೋಶಿ, ನ್ಯಾಯ ಸಚಿವ ಫುರುಕಾವಾ ಯೋಶಿಹಿಸಾ ಮತ್ತು ಇತರರೊಂದಿಗೆ ದಾಳಿಯ ಪ್ರತಿಕ್ರಿಯೆಗಳನ್ನು ಕಿಶಿದಾ ಚರ್ಚಿಸಿದ್ದು, ಹಿಂಸಾಚಾರ ಮತ್ತು ಭಯೋತ್ಪಾದನೆಗೆ ಎಂದಿಗೂ ಮಣಿಯಬೇಡಿ ಎಂದು ಕಿಶಿದಾ ಅಧಿಕಾರಿಗಳಿಗೆ ಹೇಳಿದರು. 

ಭಾನುವಾರ ನಡೆಯಲಿರುವ ಮೇಲ್ಮನೆ ಚುನಾವಣೆಗೆ ಪೂರ್ವಭಾವಿಯಾಗಿ ಕ್ಯಾಬಿನೆಟ್ ಮಂತ್ರಿಗಳು ಮತ್ತು ಇತರರಿಗೆ ಭದ್ರತೆಯನ್ನು ಬಿಗಿಗೊಳಿಸುವಂತೆ ಅವರು ಅವರಿಗೆ ನಿರ್ದೇಶನ ನೀಡಿದರು. ಈ ವೇಳೆ ಮಾತನಾಡಿ ಕಿಶಿಡಾ 'ಚುನಾವಣೆಗಳು ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಶಿಂಜೋ ಅಬೆ ಮೇಲಿನ ದಾಳಿಯು ಆಡಳಿತದಲ್ಲಿ ವಿಳಂಬಕ್ಕೆ ಕಾರಣವಾಗದಂತೆ ನೋಡಿಕೊಳ್ಳಲು ಎಲ್ಲಾ ಸರ್ಕಾರಿ ವಲಯಗಳು ಎಲ್ಲ ರೀತಿಯಲ್ಲೂ ಹೋಗಬೇಕು ಎಂದು ಕಿಶಿದಾ ಸೂಚನೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com