ಕೊಲೊಂಬೊ: ದುಬೈನಿಂದ ಶ್ರೀಲಂಕಾಗೆ ಮರಳಿದ್ದ 20 ವರ್ಷದ ಯುವಕನಲ್ಲಿ ಮಂಕಿಪಾಕ್ಸ್ ಪತ್ತೆಯಾಗಿದೆ ಎಂದು ಶ್ರೀಲಂಕಾದ ಆರೋಗ್ಯ ಸಚಿವ ಕೆಹೆಲಿಯಾ ರಂಬುಕ್ವೆಲ್ಲಾ ಮಾಹಿತಿ ನೀಡಿದ್ದಾರೆ.
ಮಂಕಿಪಾಕ್ಸ್ ಸೋಂಕಿತ ಯುವಕ ದೇಶಕ್ಕೆ ಮಂಗಳವಾರ ಆಗಮಿಸಿದ್ದ ಎಂದು ಆರೋಗ್ಯ ಸಚಿವಾಲಯದ ಸಾಂಕ್ರಾಮಿಕ ರೋಗ ಘಟಕ ಮಾಹಿತಿ ನೀಡಿರುವುದಾಗಿ ಕೆಹೆಲಿಯಾ ತಿಳಿಸಿದ್ದಾರೆ.
ಮಂಕಿಪಾಕ್ಸ್, ವೈರಸ್ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಕಾಯಿಲೆಯಾಗಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಮಂಕಿಪಾಕ್ಸ್ ಒಂದು ವೈರಲ್ ಸೋಂಕು ಆಗಿದ್ದು, ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಮನುಷ್ಯರಿಂದ ಇತರ ಮನುಷ್ಯರಿಗೆ ಮತ್ತು ಪರಿಸರದಿಂದ ಮನುಷ್ಯರಿಗೆ ಹರಡಬಹುದು ಎಂದಿದೆ.
ಈ ವರೆಗೆ ಈ ಮಂಕಿಪಾಕ್ಸ್ 109 ರಾಷ್ಟ್ರಗಳಲ್ಲಿ 73,080 ಪ್ರಕರಣಗಳು ಪತ್ತೆಯಾಗಿವೆ. ಜಾಗತಿಕವಾಗಿ ಈ ವರ್ಷದ ಮೊದಲ ಪ್ರಕರಣ ಮೇ ತಿಂಗಳಲ್ಲಿ ವರದಿಯಾಗಿತ್ತು.
Advertisement