ಜಿ-20 ಶೃಂಗಸಭೆಯ ಭೋಜನದಲ್ಲಿ ಮೋದಿ-ಷಿ ಜಿನ್ಪಿಂಗ್ ಮುಖಾಮುಖಿ; ಹಸ್ತಲಾಘವ, ಲಘು ಸಂಭಾಷಣೆ

ಜಿ-20 ಶೃಂಗಸಭೆಯ ಭೋಜನದ ವೇಳೆ ಪ್ರಧಾನಿ ನರೇಂದ್ರ ಮೋದಿ- ಷಿ ಜಿನ್ಪಿಂಗ್ ಮುಖಾಮುಖಿಯಾಗಿದ್ದು, ಹಸ್ತಲಾಘವ ನೀಡಿದ್ದಾರೆ ಹಾಗೂ ಲಘು ಸಂಭಾಷಣೆಯಲ್ಲಿ ತೊಡಗಿದ್ದರು. 
ಜಿ-20 ಶೃಂಗಸಭೆಯ ಭೋಜನದಲ್ಲಿ ಮೋದಿ-ಷಿ ಜಿನ್ಪಿಂಗ್ ಮುಖಾಮುಖಿ
ಜಿ-20 ಶೃಂಗಸಭೆಯ ಭೋಜನದಲ್ಲಿ ಮೋದಿ-ಷಿ ಜಿನ್ಪಿಂಗ್ ಮುಖಾಮುಖಿ

ಬಾಲಿ: ಜಿ-20 ಶೃಂಗಸಭೆಯ ಭೋಜನದ ವೇಳೆ ಪ್ರಧಾನಿ ನರೇಂದ್ರ ಮೋದಿ- ಷಿ ಜಿನ್ಪಿಂಗ್ ಮುಖಾಮುಖಿಯಾಗಿದ್ದು, ಹಸ್ತಲಾಘವ ನೀಡಿದ್ದಾರೆ ಹಾಗೂ ಲಘು ಸಂಭಾಷಣೆಯಲ್ಲಿ ತೊಡಗಿದ್ದರು. 

2 ವರ್ಷಗಳ ಹಿಂದೆ ಭಾರತ-ಚೀನಾ ಗಡಿಯಲ್ಲಿ ಉಂಟಾಗಿದ್ದ ಸಂಘರ್ಷದಿಂದ ಉಭಯ ದೇಶಗಳ ಸಂಬಂಧ ಹದಗೆಟ್ಟ ಬಳಿಕ ಪ್ರಧಾನಿ ಮೋದಿ- ಷಿ ಜಿನ್ಪಿಂಗ್ ಮುಖಾಮುಖಿಯಾಗಿದ್ದಾರೆ. 

ಜಿ-20 ಸಭೆಯಲ್ಲಿ ಭಾಗಿಯಾಗಿದ್ದ ನಾಯಕರಿಗೆ ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ ಆಯೋಜಿದ್ದ ಔತಣಕೂಟದಲ್ಲಿ  ಇಬ್ಬರೂ ನಾಯಕರು ಭೇಟಿ ಮಾಡಿರುವ ವಿಡೀಯೋ ತುಣುಕು ಬಹಿರಂಗವಾಗಿದೆ. 

ಜಿ-20 ಶೃಂಗಸಭೆಯಲ್ಲಿ ಉಭಯ ನಾಯಕರೂ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂಬ ಊಹಾಪೋಹಗಳಿದೆ. ಆದರೆ ಉಭಯ ದೇಶಗಳೂ ಈಗಾಗಲೇ ಬಿಡುಗಡೆ ಮಾಡಿರುವ ಅಜೆಂಡಾಗಳಲ್ಲಿ ಅಂತಹ ಯಾವುದೇ ಉಲ್ಲೇಖಗಳೂ ಇಲ್ಲ. 2020 ರಲ್ಲಿ ಗಲ್ವಾನ್ ಕಣಿವೆಯಲ್ಲಿ ಉಂಟಾದ ಸಂಘರ್ಷದ ಬಳಿಕ ಭಾರತ-ಚೀನಾ ನಾಯಕರ ನಡುವೆ ಸಭೆಗಳು ನಡೆದಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com