ಚೀನಾದಲ್ಲಿ ಲಾಕ್ ಡೌನ್: ಆಪಲ್ ನ ಅತಿ ದೊಡ್ಡ ಐಫೋನ್ ಕಾರ್ಖಾನೆಯಲ್ಲಿ ಪ್ರತಿಭಟನೆ 

ಫಾಕ್ಸ್‌ಕಾನ್‌ನ ಅತಿ ದೊಡ್ಡ ಐಫೋನ್ ಕಾರ್ಖಾನೆಯಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆ ನಡೆದಿರುವ ಘಟನೆ ಚೀನಾದ ಝೆಂಗ್ಝೌ ನಲ್ಲಿ ವರದಿಯಾಗಿದೆ. 
ಆಪಲ್ ನ ಅತಿ ದೊಡ್ಡ ಐಫೋನ್ ಕಾರ್ಖಾನೆಯಲ್ಲಿ ಪ್ರತಿಭಟನೆ
ಆಪಲ್ ನ ಅತಿ ದೊಡ್ಡ ಐಫೋನ್ ಕಾರ್ಖಾನೆಯಲ್ಲಿ ಪ್ರತಿಭಟನೆ

ಬೀಜಿಂಗ್: ಫಾಕ್ಸ್‌ಕಾನ್‌ನ ಅತಿ ದೊಡ್ಡ ಐಫೋನ್ ಕಾರ್ಖಾನೆಯಲ್ಲಿ ಬೃಹತ್ ಪ್ರಮಾಣದ ಪ್ರತಿಭಟನೆ ನಡೆದಿರುವ ಘಟನೆ ಚೀನಾದ ಝೆಂಗ್ಝೌ ನಲ್ಲಿ ವರದಿಯಾಗಿದೆ. 

ವೈಬೋ ಮತ್ತು ಟ್ವಿಟರ್ ನಲ್ಲಿ ಪ್ರತಿಭಟನೆಯ ಚಿತ್ರಗಳು ವೈರಲ್ ಆಗತೊಡಗಿದ್ದು, ಬೀಜಿಂಗ್‌ನ ಪಟ್ಟುಬಿಡದ ಶೂನ್ಯ-ಕೋವಿಡ್ ನೀತಿಯಿಂದ ಕಾರ್ಖಾನೆಗಳಲ್ಲಿ ಹಾಗೂ ವಿವಿಗಳಲ್ಲೇ ಮಂದಿಯನ್ನು ಹಲವು ವಾರಗಳಿಂದ ಲಾಕ್ ಡೌನ್ ಮಾಡಿರುವುದರ ಪರಿಣಾಮ ಜನರಲ್ಲಿ ಅಸಹನೆ ಮತ್ತು ಅಸಮಾಧಾನವನ್ನು ಉಂಟುಮಾಡಿದೆ. ಪರಿಣಾಮವಾಗಿ ಈ ಪ್ರತಿಭಟನೆ ನಡೆದಿದೆ.

ಹಗಲಿನ ವೇಳೆ ಈ ಕಾರ್ಖಾನೆಯ ಬಳಿ ಸಾವಿರಾರು ನೌಕರರು ನಡೆದು ಬರುತ್ತಿರುವುದು ಹಾಗೂ ಪೊಲೀಸರನ್ನು ಎದುರುಗೊಳ್ಳುತ್ತಿರುವುದು ವೀಡಿಯೋದಲ್ಲಿ ಬಹಿರಂಗವಾಗಿದೆ.

ಕಾರ್ಖಾನೆಯ ಪಕ್ಕದ ಅಪಾರ್ಟ್ ಮೆಂಟ್ ನ ವ್ಯಕ್ತಿಯೋರ್ವ ಈ ವೀಡಿಯೋವನ್ನು ಸೆರೆ ಹಿಡಿದಿದ್ದಾರೆ. ಮತ್ತೊಂದು ವೀಡಿಯೋ ಕ್ಲಿಪ್ ನಲ್ಲಿ ಹಲವು ಮಂದಿ ಭದ್ರತಾ ಸಿಬ್ಬಂದಿಗಳು ಕಾರ್ಮಿಕರನ್ನು ಎಳೆದೊಯ್ಯುತ್ತಿರುವುದು ಕಂಡುಬಂದಿದ್ದು, ರಸ್ತೆಯ ಮೇಲೆ ಬಿದ್ದಿದ್ದ ಕಾರ್ಮಿಕರನ್ನು ಒದೆಯುತ್ತಿರುವ ದೃಶ್ಯಗಳು ದಾಖಲಾಗಿವೆ.

ಮತ್ತೊಂದು ಪ್ರತ್ಯೇಕ ನೇರ ಪ್ರಸಾರದ ವೀಡಿಯೋದಲ್ಲಿ ಹಲವು ನೌಕರರನ್ನು ಪೊಲೀಸರು ಹಿಡಿಯಲು ಆಗಮಿಸಿದಾಗ ನಮ್ಮ ಹಕ್ಕುಗಳನ್ನು ಕಾಪಾಡಿ ಎಂಬ ಘೋಷಣೆಗಳು ಕೇಳಿಬರುತ್ತಿವೆ. ಪ್ರತಿಭಟನೆಗಳ ಬಗ್ಗೆ ಪ್ರತಿಕ್ರಿಯೆ ಕೇಳಿದ ಎಎಫ್ ಪಿಯ ಪ್ರಶ್ನೆಗಳಿಗೆ ಸಂಸ್ಥೆ ಈ ವರೆಗೂ ಪ್ರತಿಕ್ರಿಯೆ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com