
ವಾಷಿಂಗ್ ಟನ್: ಅಮೇರಿಕಾದಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಯನ್ನು ಹತ್ಯೆಯಾಗಿದ್ದು, ಆತನ ಕೊರಿಯನ್ ಕೊಠಡಿ ಸಹವಾಸಿಯನ್ನು ವಶಕ್ಕೆ ಪಡೆಯಲಾಗಿದೆ.
ಪರ್ಡ್ಯೂ ವಿಶ್ವವಿದ್ಯಾಲಯದ ವರುಣ್ ಮನೀಷ್ ಚೆಡ್ಡಾ ಹತ್ಯೆಗೀಡಾಗಿರುವ ವಿದ್ಯಾರ್ಥಿಯಾಗಿದ್ದು ಕ್ಯಾಂಪಸ್ ನಲ್ಲಿ ಆತನ ಶವ ಪತ್ತೆಯಾಗಿದೆ. ಇದೇ ವಿವಿಯ ಮತ್ತೋರ್ವ ವಿದ್ಯಾರ್ಥಿಯನ್ನು ಹತ್ಯೆ ಮಾಡಿರುವ ಆರೋಪದಡಿ ಬಂಧಿಸಲಾಗಿದ್ದು, ಎನ್ ಬಿಸಿ ನ್ಯೂಸ್ ಈ ಕುರಿತು ವರದಿ ಪ್ರಕಟಿಸಿದೆ.
ಜಿ-ಮಿನ್-ಜಿಮ್ಮಿ ಎಂಬ ವಿದ್ಯಾರ್ಥಿ ಕೊರಿಯಾ ಮೂಲದ ವಿದ್ಯಾರ್ಥಿ 911 ಕ್ಕೆ ಕರೆ ಮಾಡಿ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ. ಕರೆಯ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಾಗಿದೆ. ಅಧಿಕಾರಿಗಳ ಪ್ರಕಾರ, ಮೆಕ್‌ಕಟ್ಚಿಯಾನ್ ಹಾಲ್ ನಲ್ಲಿ ಈ ಘಟನೆ ನಡೆದಿದ್ದು, ಹತ್ಯೆಯಾಗಿರುವ ಚೆಡ್ಡಾ ವಿವಿಯಲ್ಲಿ ಡೇಟಾ ಸೈನ್ಸ್ ಅಧ್ಯಯನ ಮಾಡುತ್ತಿದ್ದರು.
Advertisement