ಚೀನಾದ ಕಮ್ಯುನಿಸ್ಟ್ ಪಾರ್ಟಿ 20ನೇ ಕಾಂಗ್ರೆಸ್ ಅಧಿವೇಶನ: 3ನೇ ಅವಧಿಗೆ ಕ್ಸಿ ಜಿನ್ ಪಿಂಗ್ ಗೆಲ್ಲುವ ಲಕ್ಷಣ

ಚೀನಾದಲ್ಲಿ ಕಳೆದೆರಡು ದಶಕಗಳಿಂದ ಬೃಹತ್ ಕಮ್ಯುನಿಸ್ಟ್ ಪಕ್ಷದ ಸಮ್ಮೇಳನ ಭಾನುವಾರ ಆರಂಭಗೊಂಡಿದೆ. ಇದರಲ್ಲಿ ಅದರ ನಾಯಕ ಕ್ಸಿ ಜಿನ್‌ಪಿಂಗ್ ಮೂರನೇ ಬಾರಿಗೆ ಅಧ್ಯಕ್ಷ ಪಟ್ಟ ವಹಿಸುವ ನಿರೀಕ್ಷೆಯಿದೆ. ಚೀನಾದಲ್ಲಿ ಮಾವೋ ಝೆಡಾಂಗ್ ನಂತರ ಅತ್ಯಂತ ಶಕ್ತಿಶಾಲಿ ಚೀನೀ ರಾಜಕಾರಣಿ ಎಂಬ ಪಟ್ಟ ಕ್ಸಿ ಜಿನ್ ಪಿಂಗ್ ಗೆ ಸಿಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.
ಕ್ಸಿ ಜಿನ್ ಪಿಂಗ್
ಕ್ಸಿ ಜಿನ್ ಪಿಂಗ್

ಬೀಜಿಂಗ್: ಚೀನಾದಲ್ಲಿ ಕಳೆದೆರಡು ದಶಕಗಳಿಂದ ಬೃಹತ್ ಕಮ್ಯುನಿಸ್ಟ್ ಪಕ್ಷದ ಸಮ್ಮೇಳನ ಭಾನುವಾರ ಆರಂಭಗೊಂಡಿದೆ. ಇದರಲ್ಲಿ ಅದರ ನಾಯಕ ಕ್ಸಿ ಜಿನ್‌ಪಿಂಗ್ ಮೂರನೇ ಬಾರಿಗೆ ಅಧ್ಯಕ್ಷ ಪಟ್ಟ ವಹಿಸುವ ನಿರೀಕ್ಷೆಯಿದೆ. ಚೀನಾದಲ್ಲಿ ಮಾವೋ ಝೆಡಾಂಗ್ ನಂತರ ಅತ್ಯಂತ ಶಕ್ತಿಶಾಲಿ ಚೀನೀ ರಾಜಕಾರಣಿ ಎಂಬ ಪಟ್ಟ ಕ್ಸಿ ಜಿನ್ ಪಿಂಗ್ ಗೆ ಸಿಗುವ ಎಲ್ಲಾ ಲಕ್ಷಣಗಳು ಕಾಣುತ್ತಿದೆ.

ಇಂದಿನ ಸಭೆಯ ಆರಂಭ ನಂತರ ಕ್ಸಿ ಜಿನ್ ಪಿಂಗ್ ಅವರು ತಮ್ಮ ಸರ್ಕಾರದ ಕಳೆದ 5 ವರ್ಷಗಳ ಸಾಧನೆಯ ವರದಿಯನ್ನು ಸಮ್ಮೇಳನದಲ್ಲಿ ಮಂಡಿಸಿದರು. ದೇಶದ ಪುನರುಜ್ಜೀವನಕ್ಕೆ ಬೇಕಾದ ಅಂಶಗಳನ್ನು ಸಾಧಿಸಲು ಆಧುನೀಕರಣದ ಗುರಿಗಳನ್ನು ಈಡೇರಿಸಲು ಪಕ್ಷ ಪಣತೊಟ್ಟು ಕೆಲಸ ಮಾಡಲಿದೆ ಎಂದು ಹೇಳಿದರು.

ನಮ್ಮ ಭವಿಷ್ಯ ಉಜ್ವಲವಾಗಿದೆ. ಆದರೂ ನಮ್ಮ ಈ ಪ್ರಯಾಣದಲ್ಲಿ ಬಹುದೂರ ಸಾಗಬೇಕಿದೆ ಎಂದು 2 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದರು. ನಮ್ಮಲ್ಲಿನ ಉದ್ದೇಶ ದೃಢವಾಗಿರಬೇಕು. ನಾವು ಇಡೀ ಪಕ್ಷದಲ್ಲಿ ಮತ್ತು ಚೀನೀ ಜನರಲ್ಲಿ ದೃಢವಾದ ಉದ್ದೇಶ, ಧೈರ್ಯ ಮತ್ತು ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳಬೇಕು, ಹಾಗೆಂದು ತಪ್ಪು ಮಾಡುವುದಿಲ್ಲವೆಂದಲ್ಲ. ಬೆದರಿಕೆಗಳು, ಒತ್ತಡಗಳು ಕೂಡ ಬರುತ್ತಿರಬಹುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com