ಉಗಾಂಡಾದಲ್ಲಿ ಆತಂಕಕಾರಿ ರೀತಿಯಲ್ಲಿ ಎಬೋಲಾ ಪ್ರಕರಣಗಳ ಹೆಚ್ಚಳ

ಉಗಾಂಡಾದ ರಾಜಧಾನಿಯಲ್ಲಿ ಶುಕ್ರವಾರದಿಂದ ಇನ್ನೂ 11 ಎಬೋಲಾ ಪ್ರಕರಣಗಳು ವರದಿಯಾಗಿವೆ ಎಂದು ಅದಿಕಾರಿಗಳು ತಿಳಿಸಿದ್ದಾರೆ. ಪೂರ್ವ ಆಫ್ರಿಕಾದ ದೇಶದಲ್ಲಿ ಕಳೆದ ಒಂದು ತಿಂಗಳಿನಿಂದೀಚೆಗೆ ಸೋಂಕಿನ ಪ್ರಮಾಣ ಆತಂಕಕಾರಿಯಾಗಿ ಹೆಚ್ಚಳವಾಗಿದೆ.
ಎಂಟೆಬ್ಬೆ ಪ್ರಾದೇಶಿಕ ರೆಫರಲ್ ಆಸ್ಪತ್ರೆಯ ಪ್ರತ್ಯೇಕ ವಿಭಾಗದಲ್ಲಿ ರೋಗಿಯನ್ನು ಭೇಟಿ ಮಾಡಲು ತಯಾರಾಗುತ್ತಿವ ವೈದ್ಯರು
ಎಂಟೆಬ್ಬೆ ಪ್ರಾದೇಶಿಕ ರೆಫರಲ್ ಆಸ್ಪತ್ರೆಯ ಪ್ರತ್ಯೇಕ ವಿಭಾಗದಲ್ಲಿ ರೋಗಿಯನ್ನು ಭೇಟಿ ಮಾಡಲು ತಯಾರಾಗುತ್ತಿವ ವೈದ್ಯರು
Updated on

ಕಂಪಾಲಾ: ಉಗಾಂಡಾದ ರಾಜಧಾನಿಯಲ್ಲಿ ಶುಕ್ರವಾರದಿಂದ ಇನ್ನೂ 11 ಎಬೋಲಾ ಪ್ರಕರಣಗಳು ವರದಿಯಾಗಿವೆ ಎಂದು ಅದಿಕಾರಿಗಳು ತಿಳಿಸಿದ್ದಾರೆ. ಪೂರ್ವ ಆಫ್ರಿಕಾದ ದೇಶದಲ್ಲಿ ಕಳೆದ ಒಂದು ತಿಂಗಳಿನಿಂದೀಚೆಗೆ ಸೋಂಕಿನ ಪ್ರಮಾಣ ಆತಂಕಕಾರಿಯಾಗಿ ಹೆಚ್ಚಳವಾಗಿದೆ.

ಕಂಪಾಲಾ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಭಾನುವಾರದಂದು ಇನ್ನೂ ಒಂಬತ್ತು ಜನರಲ್ಲಿ ಎಬೋಲಾಗೆ ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಜೇನ್ ರುತ್ ಅಸೆಂಗ್ ಸೋಮವಾರ ಹೇಳಿದ್ದಾರೆ.

ಆಫ್ರಿಕಾದಲ್ಲಿನ ವಿಶ್ವ ಆರೋಗ್ಯ ಸಂಸ್ಥೆಯ (WHO) ಉನ್ನತ ಅಧಿಕಾರಿಯೊಬ್ಬರು, ಕಳೆದ ವಾರ ಉಗಾಂಡಾದ ಎಬೋಲಾ ಏಕಾಏಕಿ 'ವೇಗವಾಗಿ ವಿಕಸನಗೊಳ್ಳುತ್ತಿದೆ'. ಇದು ಆರೋಗ್ಯ ಕಾರ್ಯಕರ್ತರಿಗೆ ಸವಾಲಿನ ಪರಿಸ್ಥಿತಿ ಎಂದು ಹೇಳಿದ್ದರು.

ಉಗಾಂಡಾದ ಆರೋಗ್ಯ ಅಧಿಕಾರಿಗಳು ಸೆಪ್ಟೆಂಬರ್ 20 ರಿಂದ 75 ಎಬೋಲಾ ಪ್ರಕರಣಗಳನ್ನು ದೃಢಪಡಿಸಿದ್ದಾರೆ. ಈ ಪೈಕಿ 28 ಜನರು ಸಾವಿಗೀಡಾಗಿದ್ದು, 19 ಸಕ್ರಿಯ ಪ್ರಕರಣಗಳಿವೆ.

ಎಬೋಲಾ ಹರಡಬಹುದೆಂಬ ಭಯದಿಂದಾಗಿ ಎಬೋಲಾ ಪ್ರಕರಣಗಳನ್ನು ವರದಿ ಮಾಡಿದ್ದ ಕೇಂದ್ರಬಿಂದುವಾಗಿದ್ದ ಐದು ಜಿಲ್ಲೆಗಳ ಪೈಕಿ ಎರಡರಲ್ಲಿ ರಾತ್ರಿಯ ಕರ್ಫ್ಯೂ ಸೇರಿದಂತೆ ಲಾಕ್‌ಡೌನ್ ವಿಧಿಸಲಾಗಿದೆ. ಎಬೋಲಾ ಸೋಂಕಿತ ವ್ಯಕ್ತಿಯೊಬ್ಬರು ಕಂಪಾಲಾದಲ್ಲಿ ಚಿಕಿತ್ಸೆ ಪಡೆದು ಆಸ್ಪತ್ರೆಯಲ್ಲಿ ಮೃತಪಟ್ಟ ನಂತರ ಈ ಕ್ರಮಗಳನ್ನು ಕೈಗೊಳ್ಳಲಾಯಿತು.

ಸೋಮವಾರ ವರದಿಯಾದ ಒಂಬತ್ತು ಹೊಸ ಪ್ರಕರಣಗಳಲ್ಲಿ ಇವರೆಲ್ಲರೂ ಎಬೋಲಾ ಹಾಟ್‌ಸ್ಪಾಟ್‌ನಿಂದ ಪ್ರಯಾಣಿಸಿದ ಮತ್ತು ಮುಲಾಗೋ ಎಂದು ಕರೆಯಲ್ಪಡುವ ಕಂಪಾಲಾದ ಉನ್ನತ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಎಬೋಲಾ ಸೋಂಕಿತ ರೋಗಿಯ ಸಂಪರ್ಕಕ್ಕೆ ಬಂದಿದ್ದರು.

ಉಗಾಂಡಾದಲ್ಲಿ ಕಂಡುಬರುತ್ತಿರುವ ಎಬೋಲಾದ ಸೋಂಕಿಗೆ ಸದ್ಯ ಯಾವುದೇ ಲಸಿಕೆ ಇಲ್ಲ.
ಗುರುವಾರದ ವೇಳೆಗೆ ಉಗಾಂಡಾದ ಅಧಿಕಾರಿಗಳು 1,800 ಕ್ಕೂ ಹೆಚ್ಚು ಎಬೋಲಾ ಸಂಪರ್ಕಗಳನ್ನು ಪತ್ತೆಮಾಡಿದ್ದಾರೆ. ಅವರಲ್ಲಿ 747 ಜನರು ರೋಗದ ಸಂಭವನೀಯ ಲಕ್ಷಣಗಳನ್ನು ಹೊಂದಿದ್ದು, 21 ದಿನಗಳ ಮೇಲ್ವಿಚಾರಣೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಆಫ್ರಿಕಾ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ಪ್ರಿವೆನ್ಷನ್ ತಿಳಿಸಿದೆ.

ಎಬೋಲಾದಂತಹ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ತಡೆಯಲು ಸಂಪರ್ಕಗಳನ್ನು ಪತ್ತೆಹಚ್ಚುವುದು ಪ್ರಮುಖವಾಗಿದೆ.

ಸೋಂಕಿತ ವ್ಯಕ್ತಿಯ ದೈಹಿಕ ದ್ರವಗಳು ಅಥವಾ ಕಲುಷಿತ ವಸ್ತುಗಳ ಸಂಪರ್ಕದಿಂದ ಎಬೋಲಾ ಹರಡುತ್ತದೆ. ಜ್ವರ, ವಾಂತಿ, ಅತಿಸಾರ, ಸ್ನಾಯು ನೋವು ಮತ್ತು ಕೆಲವೊಮ್ಮೆ ಆಂತರಿಕ ಮತ್ತು ಬಾಹ್ಯ ರಕ್ತಸ್ರಾವವಾಗುವುದು ಇದರ ರೋಗಲಕ್ಷಣಗಳಾಗಿವೆ.

ವಿಜ್ಞಾನಿಗಳಿಗೆ ಎಬೋಲಾದ ನೈಸರ್ಗಿಕ ಮೂಲ ಯಾವುದೆಂದು ತಿಳಿದಿಲ್ಲ. ಆದರೆ, ವ್ಯಕ್ತಿಗೆ ಸೋಂಕಿತ ಪ್ರಾಣಿಯ ಸಂಪರ್ಕದ ಮೂಲಕ ಅಥವಾ ಅದರ ಕಚ್ಚಾ ಮಾಂಸವನ್ನು ತಿನ್ನುವ ಮೂಲಕ ವೈರಸ್ ಬಂದಿರುವ ಸಾಧ್ಯತೆ ಇದೆ ಎಂದು ಅವರು ಶಂಕಿಸಿದ್ದಾರೆ. ಉಗಾಂಡಾದಲ್ಲಿ ಏಕಾಏಕಿ ಪತ್ತೆಯಾದ ಸೋಂಕಿನ ಮೂಲದ ಬಗ್ಗೆ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ.

ಉಗಾಂಡಾವು ಅನೇಕ ಬಾರಿ ಎಬೋಲಾ ಸೋಂಕಿನ ಏಕಾಏಕಿ ಉಲ್ಬಣಗಳನ್ನು ಕಂಡಿದ್ದು, 2000 ರಲ್ಲಿ 200ಕ್ಕೂ ಹೆಚ್ಚು ಜನರನ್ನು ಕೊಂದಿದೆ. ಪಶ್ಚಿಮ ಆಫ್ರಿಕಾದಲ್ಲಿ 2014-16ರಲ್ಲಿ ಎಬೋಲಾ ಏಕಾಏಕಿ 11,000 ಕ್ಕೂ ಹೆಚ್ಚು ಜನರನ್ನು ಕೊಂದಿದೆ. ಇದು ರೋಗದ ಅತಿದೊಡ್ಡ ಸಾವಿನ ಸಂಖ್ಯೆ.

ಎಬೋಲಾವನ್ನು 1976 ರಲ್ಲಿ ದಕ್ಷಿಣ ಸುಡಾನ್ ಮತ್ತು ಕಾಂಗೋದಲ್ಲಿ ಏಕಕಾಲದಲ್ಲಿ ಕಂಡುಹಿಡಿಯಲಾಯಿತು. ಇದು ಎಬೋಲಾ ನದಿಯ ಸಮೀಪವಿರುವ ಹಳ್ಳಿಯಲ್ಲಿ ಪತ್ತೆಯಾಗಿದ್ದರಿಂದ ನಂತರ ರೋಗವನ್ನು ಎಬೋಲಾ ಎಂದೇ ಹೆಸರಿಸಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com