ಪಾಕಿಸ್ತಾನ: ಪೋಲಿಯೊ ಲಸಿಕೆ ತಂಡದ ಕಾವಲು ಕಾಯುತ್ತಿದ್ದ ಪೋಲೀಸ್ ಅಧಿಕಾರಿಯನ್ನು ಕೊಂದ ಶಂಕಿತ ಉಗ್ರರು

ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಮಂಗಳವಾರ ಪೋಲಿಯೊ ಲಸಿಕೆ ತಂಡವನ್ನು ಕಾವಲು ಕಾಯುತ್ತಿದ್ದಾಗ ಶಂಕಿತ ಉಗ್ರಗಾಮಿಗಳು ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ್ದಾರೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಕ್ವೆಟ್ಟಾ: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಮಂಗಳವಾರ ಪೋಲಿಯೊ ಲಸಿಕೆ ತಂಡವನ್ನು ಕಾವಲು ಕಾಯುತ್ತಿದ್ದಾಗ ಶಂಕಿತ ಉಗ್ರಗಾಮಿಗಳು ಪೊಲೀಸ್ ಅಧಿಕಾರಿಯನ್ನು ಹತ್ಯೆ ಮಾಡಿದ್ದಾರೆ.

ಬೆಳಿಗ್ಗೆ ಪಿಶಿನ್ ಪ್ರದೇಶದಲ್ಲಿ ಪೋಲಿಯೊ ಲಸಿಕೆ ಹಾಕುವ ತಂಡದ ಮೇಲೆ ದಾಳಿ ಇಬ್ಬರು ಶಂಕಿತ ಉಗ್ರರು ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸ್ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಪಿಶಿನ್ ಡೆಪ್ಯುಟಿ ಕಮಿಷನರ್ ಮುಹಮ್ಮದ್ ಯಾಸಿರ್ ಹೇಳಿದ್ದಾರೆ.

ಪೊಲೀಸ್‌ ಸಿಬ್ಬಂದಿಗೆ ಗುಂಡು ಹಾರಿಸಿದ ಕೂಡಲೇ ದಾಳಿಕೋರರು ಸ್ಥಳದಿಂದ ಓಡಿಹೋಗಿದ್ದಾರೆ. ಪೋಲಿಯೊ ಲಸಿಕೆ ತಂಡದ ಸದಸ್ಯರು ಗಾಯಗೊಳ್ಳದೆ ಪಾರಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಪೋಲಿಯೊ ಲಸಿಕೆ ನೀಡುವ ತಂಡಗಳ ಮೇಲೆ ಉಗ್ರರು ದಾಳಿ ನಡೆಸುತ್ತಿರುವುದು ಇದೇ ಮೊದಲಲ್ಲ. ಬಲೂಚಿಸ್ತಾನ್, ಖೈಬರ್ ಪಖ್ತುಂಖ್ವಾ (ಕೆಪಿಕೆ) ಪ್ರಾಂತ್ಯಗಳಲ್ಲಿ ಮತ್ತು ಕಾಸ್ಮೋಪಾಲಿಟನ್ ನಗರವಾದ ಕರಾಚಿಯಲ್ಲಿ ಈ ಮೊದಲು ಇಂತಹ ದಾಳಿಗಳು ನಡೆದಿವೆ.

ಕಟ್ಟುನಿಟ್ಟಾದ ಭದ್ರತಾ ಕ್ರಮಗಳ ಕಾರಣದಿಂದಾಗಿ ಆಗಸ್ಟ್‌ನಲ್ಲಿ ಕೆಪಿಕೆಯ ಟ್ಯಾಂಕ್ ಜಿಲ್ಲೆಯಲ್ಲಿ ಕೊನೆಯ ಬಾರಿಗೆ ನಡೆದ ದಾಳಿಯಲ್ಲಿ ತಂಡವನ್ನು ಕಾಪಾಡುತ್ತಿದ್ದ ಇಬ್ಬರು ಪೊಲೀಸರು ಸಾವಿಗೀಡಾಗಿದ್ದರು ಎಂದು ಯಾಸಿರ್ ಹೇಳಿದರು.

ಈ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿಲ್ಲ.
ಸರ್ಕಾರವು ಬಲೂಚಿಸ್ತಾನದ 19 ಜಿಲ್ಲೆಗಳಲ್ಲಿ ಐದು ದಿನಗಳ ಪೋಲಿಯೊ ವಿರೋಧಿ ಅಭಿಯಾನವನ್ನು ಪ್ರಾರಂಭಿಸಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿನ ಉಗ್ರರು ಮತ್ತು ಧಾರ್ಮಿಕ ಉಗ್ರಗಾಮಿಗಳು ಭಯಾನಕ ರೋಗವನ್ನು ತಡೆಗಟ್ಟಲು ಮಕ್ಕಳಿಗೆ ಲಸಿಕೆ ನೀಡುವುದರ ವಿರುದ್ಧ ಅಭಿಯಾನವನ್ನು ನಡೆಸುತ್ತಾರೆ.

ಲಸಿಕೆ ಪಡೆದಿದ್ದರಿಂದ ತಮ್ಮ ಮಕ್ಕಳಲ್ಲಿ ಬಂಜೆತನ ಉಂಟಾಗಿದೆ ಎಂದು ಉಗ್ರಗಾಮಿಗಳು ಸಾರ್ವಜನಿಕರನ್ನು ಹೆದರಿಸುತ್ತಿದ್ದಾರೆ. ಅಫ್ಘಾನಿಸ್ತಾನ ಮತ್ತು ಮೊಜಾಂಬಿಕ್ ಜೊತೆಗೆ ಪಾಕಿಸ್ತಾನವು ಪೋಲಿಯೊವೈರಸ್ ಪ್ರಕರಣಗಳು ಇನ್ನೂ ವರದಿಯಾಗುತ್ತಿರುವ ಮೂರು ದೇಶಗಳಾಗಿವೆ. ಈ ವರ್ಷ ಪಾಕಿಸ್ತಾನದಲ್ಲಿ ಈವರೆಗೆ 19 ಪೋಲಿಯೋವೈರಸ್ ಪ್ರಕರಣಗಳು ಪತ್ತೆಯಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com