ರಶ್ದಿಯನ್ನು ಟಾರ್ಗೆಟ್ ಮಾಡಲು ಬಹುಮಾನ ಘೋಷಿಸಿದ್ದ ಇರಾನ್ ಸಂಘಟನೆಗೆ ಅಮೇರಿಕ ಆರ್ಥಿಕ ನಿರ್ಬಂಧ
ವಾಷಿಂಗ್ ಟನ್: ಅಮೇರಿಕನ್ ಲೇಖಕ ಸಲ್ಮಾನ್ ರಶ್ದಿಯನ್ನು ಟಾರ್ಗೆಟ್ ಮಾಡಿ ಅಪಾಯ ಉಂಟುಮಾಡಲು ಹಣ ಸಂಗ್ರಹಿಸಿ ಬಹುಮಾನ ಘೋಷಿಸಿದ್ದ ಇರಾನ್ ಸಂಘಟನೆಗೆ ಅಮೇರಿಕ ಆರ್ಥಿಕ ನಿರ್ಬಂಧ ವಿಧಿಸಿದೆ.
ರಶ್ದಿ ಮೇಲೆ ಆಗಸ್ಟ್ ತಿಂಗಳಲ್ಲಿ ಕಾರ್ಯಕ್ರಮವೊಂದರಲ್ಲಿ ಮಾರಣಾಂತಿಕ ಹಲ್ಲೆ ನಡೆದಿತ್ತು. ಅಮೇರಿಕಾದ ವಿದೇಶಿ ಆಸ್ತಿ ನಿಯಂತ್ರಣದ ಖಜಾನೆ ಕಚೇರಿ, ರಶ್ದಿಯನ್ನು ಹತ್ಯೆ ಮಾಡುವುದಕ್ಕಾಗಿ ಬಹುಕೋಟಿ ಡಾಲರ್ ಬಹುಮಾನ ಘೋಷಿಸಿದ್ದ 15 ಖೋರ್ದಾದ್ ಫೌಂಡೇಶನ್ ಗೆ ನಿರ್ಬಂಧ ವಿಧಿಸಿದೆ.
ಸಲ್ಮಾನ್ ರಶ್ದಿ ಬರೆದ ದಿ ಸಟಾನಿಕ್ ವರ್ಸಸ್ ನ್ನು ಕೆಲವು ಮುಸ್ಲಿಮರು ಧರ್ಮನಿಂದೆ ಎಂದು ಪರಿಗಣಿಸುತ್ತಾರೆ. ಅಮೇರಿಕಾ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ 2012 ರಲ್ಲಿ 15 ಖೋರ್ದಾದ್ ಫೌಂಡೇಶನ್ ರಶ್ದಿ ತಲೆಗೆ ಬಹುಮಾನವನ್ನು 3.3 ಮಿಲಿಯನ್ ಡಾಲರ್ ಗೆ ಏರಿಕೆ ಮಾಡಿತ್ತು. ಇದು 1979 ರಲ್ಲಿ ಪ್ರಾರಂಭವಾಗಿರುವ ಸಂಘಟನೆಯಾಗಿದೆ.
ಇನ್ನು ಇತ್ತೀಚೆಗಷ್ಟೇ ಮಾರಣಾಂತಿಕ ದಾಳಿಗೆ ಗುರಿಯಾಗಿದ್ದ ರಶ್ದಿ, ದಾಳಿಯಲ್ಲಿ ತಮ್ಮ ಒಂದು ಕಣ್ಣು ಹಾಗೂ ಕೈನ ಸ್ವಾಧೀನ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ