ಮಾರಣಾಂತಿಕ ದಾಳಿ: ಒಂದು ಕಣ್ಣಿನ ದೃಷ್ಟಿ, ಕೈ ಸ್ವಾಧೀನ ಕಳೆದುಕೊಂಡ ಲೇಖಕ ಸಲ್ಮಾನ್ ರಶ್ದಿ

ಇತ್ತೀಚೆಗಷ್ಟೇ ದಾಳಿಗೆ ಒಳಗಾಗಿದ್ದ ಲೇಖಕ ಸಲ್ಮಾನ್ ರಶ್ದಿ ಒಂದು ಕಣ್ಣಿನ ದೃಷ್ಟಿ ಹಾಗೂ ಒಂದು ಕೈ ಸ್ವಾಧೀನ ಕಳೆದುಕೊಂಡಿದ್ದಾರೆ.
ಸಲ್ಮಾನ್ ರಶ್ದಿ
ಸಲ್ಮಾನ್ ರಶ್ದಿ

ಮ್ಯಾಡ್ರಿಡ್: ಇತ್ತೀಚೆಗಷ್ಟೇ ದಾಳಿಗೆ ಒಳಗಾಗಿದ್ದ ಲೇಖಕ ಸಲ್ಮಾನ್ ರಶ್ದಿ ಒಂದು ಕಣ್ಣಿನ ದೃಷ್ಟಿ ಹಾಗೂ ಒಂದು ಕೈ ಸ್ವಾಧೀನ ಕಳೆದುಕೊಂಡಿದ್ದಾರೆ.

ಅಮೇರಿಕಾದ ನ್ಯೂ ಯಾರ್ಕ್ ಸ್ಟೇಟ್ ನಲ್ಲಿ ಉಪನ್ಯಾಸ ನೀಡುತ್ತಿದ್ದ ವೇಳೆ, ರಶ್ದಿ ವಿರುದ್ಧ ದಾಳಿ ನಡೆದಿತ್ತು.  1980 ರಲ್ಲಿ ಸೆಟಾನಿಕ್ ವರ್ಸಸ್ ಪುಸ್ತಕ ಬರೆದಿದ್ದ ರಶ್ದಿ ಅವರಿಗೆ ಇರಾನ್ ನಿಂದ ಆಗಾಗ್ಗೆ ಬೆದರಿಕೆ ಕರೆಗಳು ಬರುತ್ತಿದ್ದವು. ಆ.12 ರಂದು ಚೌಟಕ್ವಾ ಸಂಸ್ಥೆಯಲ್ಲಿ ಉಪನ್ಯಾಸ ನೀಡುತ್ತಿದ್ದ ರಶ್ದಿ ಅವರ ಮೇಲೆ ವೇದಿಕೆಯಲ್ಲೇ ಮಾರಣಾಂತಿಕ ದಾಳಿ ನಡೆದಿತ್ತು. 

ಈಗಿನವರೆಗೂ ರಶ್ದಿ ಅವರಿಗೆ ಉಂಟಾಗಿರುವ ಗಾಯದ ಪ್ರಮಾಣ ಸ್ಪಷ್ಟವಾಗಿಲ್ಲ ಎಂದು ತಿಳಿದುಬಂದಿದೆ. "ರಶ್ದಿ ಅವರಿಗೆ ಆಳವಾದ ಗಾಯಗಳಾಗಿದ್ದು, ತೋಳುಗಳಲ್ಲಿನ ನರಗಳು ಕತ್ತರಿಸಿಹೋಗಿವೆ. ಎದೆಯ ಭಾಗದಲ್ಲೇ 15 ಗಾಯಗಳಾಗಿವೆ ಎಂದು ದಿ ಗಾರ್ಡಿಯನ್ ವರದಿ ಪ್ರಕಟಿಸಿದೆ. 

ದಿ ಗಾರ್ಡಿಯನ್ ವರದಿಯಲ್ಲಿ ಏಜೆಂಟ್ ಒಬ್ಬರನ್ನು ಉಲ್ಲೇಖಿಸಲಾಗಿದ್ದು, ರಶ್ದಿ ಆಸ್ಪತ್ರೆಯಲ್ಲಿದ್ದಾರೋ ಇಲ್ಲವೋ ಎಂಬ ಬಗ್ಗೆಯೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com