ಅನಾರೋಗ್ಯ, ವೈದ್ಯರ ನಿಗಾವಣೆಯಲ್ಲಿ ಬ್ರಿಟನ್ ರಾಣಿ ಎಲಿಜಬೆತ್!

ಅನಾರೋಗ್ಯಕ್ಕೀಡಾಗಿರುವ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಸ್ಕಾಟ್ಲೆಂಡ್ ನ ಬಲ್ ಮೊರಲ್ ಕ್ಯಾಸಲ್ ನಿವಾಸದಲ್ಲಿ ವೈದ್ಯರ ನಿಗಾವಣೆಯಲ್ಲಿರುವುದಾಗಿ ಬಕಿಂಗ್ ಹ್ಯಾಮ್ ಅರಮನೆ ತಿಳಿಸಿದೆ.
ರಾಣಿ ಎಲಿಜಬೆತ್
ರಾಣಿ ಎಲಿಜಬೆತ್

ಲಂಡನ್: ಅನಾರೋಗ್ಯಕ್ಕೀಡಾಗಿರುವ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಸ್ಕಾಟ್ಲೆಂಡ್ ನ ಬಲ್ ಮೊರಲ್ ಕ್ಯಾಸಲ್ ನಿವಾಸದಲ್ಲಿ ವೈದ್ಯರ ನಿಗಾವಣೆಯಲ್ಲಿರುವುದಾಗಿ ಬಕಿಂಗ್ ಹ್ಯಾಮ್ ಅರಮನೆ ತಿಳಿಸಿದೆ. ರಾಣಿಯ ಪುಕ್ರ ಪ್ರಿನ್ಸ್ ಚಾರ್ಲ್ಸ್, ಅವರ ಪತ್ನಿ ಕ್ಯಾಮಿಲ್ಲಾ ಹಾಗೂ ಮೊಮ್ಮಗ ಪ್ರಿನ್ಸ್ ವಿಲಿಯಂ ಅವರು ಎಲಿಜಬೆತ್ ಜೊತೆಗಿದ್ದಾರೆ ಎಂದು ತಿಳಿದುಬಂದಿದೆ.

96 ವರ್ಷ ವಯಸ್ಸಿನ ಎಲಿಜಬೆತ್ ರಾಣಿ ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಇಂದು ಬೆಳಗ್ಗೆ ವೈದ್ಯರು ತಪಾಸಣೆ ನಡೆಸಿದ ನಂತರ, ವೈದ್ಯಕೀಯ ಮೇಲ್ವಿಚಾರಣೆಯಲ್ಲಿರುವ ಶಿಫಾರಸು ಮಾಡಿದ್ದಾರೆ ಎಂದು  ಬಕಿಂಗ್ ಹ್ಯಾಮ್ ಅರಮನೆ ತಿಳಿಸಿದೆ.

ಅನಾರೋಗ್ಯ ಸಮಸ್ಯೆಯಿಂದಾಗಿಯೇ ಈ ವಾರದ ಆರಂಭದಲ್ಲಿ ನಡೆದ ನೂತನ ಪ್ರಧಾನಿ ಲಿಜ್ ಟ್ರಸ್ ನೇಮಕ ಕಾರ್ಯಕ್ರಮದಲ್ಲೂ ರಾಣಿ ಎಲಿಜಬೆತ್ ಪಾಲ್ಗೊಂಡಿರಲಿಲ್ಲ. ಬಕಿಂಗ್ ಹ್ಯಾಮ್ ಅರಮನೆಯಿಂದ ಬರುವ ಸುದ್ದಿಯಿಂದ ಇಡೀ ದೇಶವು ತೀವ್ರವಾಗಿ ಕಳವಳಗೊಂಡಿದೆಎಂದು ಟ್ರಸ್ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com