ಪ್ರಮೋಷನ್ ಕೊಡಲಿಲ್ಲ ಎಂದು ಬಾಸ್ ಕುಟುಂಬದ ನಾಲ್ವರ ಬರ್ಬರ ಹತ್ಯೆ: 8 ವರ್ಷದ ಬಳಿಕ ಆರೋಪಿ ಬಂಧನ

ಬುಲೆಟ್ ಹೊಕ್ಕಿದ್ದ ನಾಲ್ವರ ಶವಗಳು ಪ್ರತ್ಯೇಕವಾಗಿ ಮಲಗುವ ಕೋಣೆಯಲ್ಲಿ ಪತ್ತೆಯಾಗಿದ್ದವು. ಇಡೀ ಕುಟುಂಬವೇ ಈ ವೇಳೆ ನಾಶವಾಗಿತ್ತು. ಈ ಪ್ರಕರಣದ ಹಿನ್ನೆಲೆಯನ್ನು ಹಾಗೂ ಹತ್ಯೆಯ ಹಿಂದಿನ ಉದ್ದೇಶವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.
ಫಾಂಗ್ ಲು
ಫಾಂಗ್ ಲು
Updated on

ಹೂಸ್ಟನ್‌: ಎಂಟು ವರ್ಷಗಳ ಹಿಂದೆ ಯುನೈಟೆಡ್ ಸ್ಟೇಟ್ಸ್ ನ ಹೂಸ್ಟನ್‌ನಲ್ಲಿ ತನ್ನ ಬಾಸ್‌ನ ಇಡೀ ಕುಟುಂಬವನ್ನು ಕೊಂದ ವ್ಯಕ್ತಿಯನ್ನು ಬಂಧಿಸಲಾಗಿದೆ. 

ಹೂಸ್ಟನ್ ಕ್ರಾನಿಕಲ್ ಪ್ರಕಾರ ಚೀನಾದಿಂದ ಬಂದ ಕೆಲವೇ ಕ್ಷಣಗಳಲ್ಲಿ ಆರೋಪಿ ಫಾಂಗ್ ಲು ಅವರನ್ನು ಸೆಪ್ಟೆಂಬರ್ 11ರಂದು ಬಂಧಿಸಲಾಯಿತು. ಪ್ರಕರಣದ ಹತ್ಯಾಕಾಂಡವು 2014ರ ಜನವರಿ 30ರಂದು ನಡೆದಿತ್ತು. ಮಾಯೋ ಸನ್, (50), ಮೆಕ್ಸಿ ಸನ( 49) ತಿಮೋತಿ ಸನ್ (9)  ಮತ್ತು ಟೈಟಸ್ ಸನ್( 7) ಅವರಿಗೆ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು.

ಬುಲೆಟ್ ಹೊಕ್ಕಿದ್ದ ನಾಲ್ವರ ಶವಗಳು ಪ್ರತ್ಯೇಕವಾಗಿ ಮಲಗುವ ಕೋಣೆಯಲ್ಲಿ ಪತ್ತೆಯಾಗಿದ್ದವು. ಇಡೀ ಕುಟುಂಬವೇ ಈ ವೇಳೆ ನಾಶವಾಗಿತ್ತು. ಈ ಪ್ರಕರಣದ ಹಿನ್ನೆಲೆಯನ್ನು ಹಾಗೂ ಹತ್ಯೆಯ ಹಿಂದಿನ ಉದ್ದೇಶವನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ತನ್ನ ಮೇಲಧಿಕಾರಿಯಾಗಿದ್ದ ಮಾಯೋ ಸನ್ ತನ್ನನ್ನು ಕೆಲಸದಲ್ಲಿ ಬಡ್ತಿಗೆ ಶಿಫಾರಸು ಮಾಡಲಿಲ್ಲ ಎಂದು ಆರೋಪಿ ಬಾಸ್ ನ ಇಡೀ ಕುಟುಂಬವನ್ನೇ ಹತ್ಯೆ ಮಾಡಿರುವುದು ಬಯಲಾಗಿದೆ.

ಪೊಲೀಸರು ಸಲ್ಲಿಸಿದ ನ್ಯಾಯಾಲಯದ ದಾಖಲೆಗಳ ಪ್ರಕಾರ, ಫಾಂಗ್ ಕೆಲಸ ಮಾಡುತ್ತಿದ್ದ ಕಂಪನಿಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗಕ್ಕೆ ವರ್ಗಾಯಿಸಲು ಬಯಸಿದ್ದರು. ಇದಕ್ಕಾಗಿ ಮಾಯೊಗೆ ತಮ್ಮ ಬಗ್ಗೆ ಉತ್ತಮ ಅಭಿಪ್ರಾಯದೊಂದಿಗೆ ಶಿಫಾರಸು ಮಾಡಲು ಕೇಳಿಕೊಂಡಿದ್ದನು. ಆದರೆ ಕಚೇರಿಯಲ್ಲಿ ಆತನ ವರ್ತನೆಯನ್ನು ಗಮನಿಸಿದ್ದ ಬಾಸ್ ಪ್ರಮೋಷನ್ ನೀಡಲಿಲ್ಲ. ಇದೇ ಕೊಲೆಗೆ  ಕಾರಣ ಎನ್ನಲಾಗಿದೆ.

ಡಿಎನ್ಎಯಿಂದ ಸಿಕ್ತು ಅಂತಿಮ ಕ್ಲೂ
ಈ ಘಟನೆಯ ಬಗ್ಗೆ ಮಾಯೋ ಮೇಲೆ ಕೋಪಗೊಂಡಿದ್ದಾಗಿ ಫಾಂಗ್ ತನಿಖಾಧಿಕಾರಿಗಳಿಗೆ ತಿಳಿಸಿದ್ದನು. ಆದರೆ ಹತ್ಯೆಗಳಲ್ಲಿ ತನ್ನ ಪಾತ್ರವಿಲ್ಲ ಎಂದು ನಿರಾಕರಿಸುತ್ತಲೇ ಇದ್ದ. ಮಾಯೋ ಮನೆಯಿಂದ ಫೋರೆನ್ಸಿಕ್ ತಂಡವು ಡಿಎನ್‌ಎ ಸ್ಯಾಂಪಲ್ಸ್ ಸಂಗ್ರಹಿಸಿತ್ತು. ಡಿಎನ್ ಎ ಮಾದರಿಗಳು ಫಾಂಗ್‌ನೊಂದಿಗೆ ಹೊಂದಿಕೆಯಾಯಿತು.  ಆದರೆ ಫಲಿತಾಂಶಗಳು ಬರುವ ಹೊತ್ತಿಗೆ  ಆತ ಚೀನಾಕ್ಕೆ ತೆರಳಿದ್ದ. ತನಿಖಾಧಿಕಾರಿಗಳು ಫಾಂಗ್ ಅನ್ನು ಎಂದಿಗೂ ಬಂಧಿಸಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿದ್ದರು. ಆದರೆ ಆತ ಕ್ಯಾಲಿಫೋರ್ನಿಯಾ ವಿಮಾನ ನಿಲ್ದಾಣದಲ್ಲಿ ಇಳಿದಾಗ ಅದು ಸಂಭವಿಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com