ಭಾರತೀಯ ರಾಷ್ಟ್ರೀಯ ಸೇನೆಯ ಹಿರಿಯ ಈಶ್ವರ್ ಲಾಲ್ ಸಿಂಗ್ ಸಿಂಗಪೂರ್ ನಲ್ಲಿ ನಿಧನ

ಭಾರತೀಯ ರಾಷ್ಟ್ರೀಯ ಸೇನೆಯ ಹಿರಿಯ ಈಶ್ವರ್ ಲಾಲ್ ಸಿಂಗ್ (92) ಸಿಂಗಪೂರ್ ನಲ್ಲಿ ನಿಧನರಾದರು. 
ರಾಜನಾಥ್ ಸಿಂಗ್- ಈಶ್ವರ್ ಲಾಲ್ ಸಿಂಗ್
ರಾಜನಾಥ್ ಸಿಂಗ್- ಈಶ್ವರ್ ಲಾಲ್ ಸಿಂಗ್

ಸಿಂಗಪೂರ್: ಭಾರತೀಯ ರಾಷ್ಟ್ರೀಯ ಸೇನೆಯ ಹಿರಿಯ ಈಶ್ವರ್ ಲಾಲ್ ಸಿಂಗ್ (92) ಸಿಂಗಪೂರ್ ನಲ್ಲಿ ನಿಧನರಾದರು. 

ನೇತಾಜಿ ಸುಭಾಷ್ ಚಂದ್ರ ಬೋಸರೊಟ್ಟಿಗೆ ಇವರು ಎನ್ಐಎ ನಲ್ಲಿ ಸೇವೆ ಸಲ್ಲಿಸಿದ್ದರು. 1943 ರಲ್ಲಿ ಐಎನ್ಎ ಸೇರಿದ್ದ ಸಿಂಗ್, ಬೋಸ್ ಅವರೊಟ್ಟಿಗೆ ನಿಕಟರಾಗಿದ್ದರು. 

ಈಶ್ವರ್ ಲಾಲ್ ಸಿಂಗ್ ಅವರ ನಿಧನವನ್ನು ಘೋಷಿಸುವುದಕ್ಕೆ ದುಃಖವಾಗುತ್ತಿದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಈಶ್ವರ್ ಲಾಲ್ ಸಿಂಗ್ ನಿಧನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂತಾಪ ವ್ಯಕ್ತಪಡಿಸಿದ್ದಾರೆ. 

ಮೇಜರ್ (ನಿವೃತ್ತ) ಈಶ್ವರ್ ಲಾಲ್ ಸಿಂಗ್ ಅವರು ಭಾರತೀಯ ಸ್ವಾತಂತ್ರ್ಯಕ್ಕಾಗಿ ಅತ್ಯಂತ ಶೌರ್ಯದಿಂದ ಹೋರಾಡಿದ್ದರು. 2019 ರ ನವೆಂಬರ್ ನಲ್ಲಿ ಸಿಂಗಪೂರ್ ಗೆ ಭೇಟಿ ನೀಡಿದ್ದಾಗ ಅವರೊಂದಿಗೆ ನಡೆಸಿದ್ದ ಸಂವಹನ ನೆನಪಾಗುತ್ತಿದೆ. ಅವರ ಅಗಲಿಕೆ ನೋವುಂಟು ಮಾಡುತ್ತಿದೆ ಓಂ ಶಾಂತಿ ಎಂದು ರಾಜನಾಥ್ ಸಿಂಗ್ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com