ಲೇಖಕ ಸಲ್ಮಾನ್ ರಶ್ದಿ ಆರೋಗ್ಯದಲ್ಲಿ ಚೇತರಿಕೆ: ವೆಂಟಿಲೇಟರ್ ನಿಂದ ಬಿಡುಗಡೆ!

ನ್ಯೂಯಾರ್ಕ್‌ನಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಚೂರಿ ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಲೇಖಕ ಸಲ್ಮಾನ್ ರಶ್ದಿ ಅವರನ್ನು ನಿನ್ನೆ ರಾತ್ರಿ ವೆಂಟಿಲೇಟರ್‌ನಿಂದ ತೆಗೆಯಲಾಗಿದೆ ಎಂದು ವರದಿಯಾಗಿದೆ.
ಸಲ್ಮಾನ್ ರಶ್ದಿ
ಸಲ್ಮಾನ್ ರಶ್ದಿ

ನ್ಯೂಯಾರ್ಕ್: ನ್ಯೂಯಾರ್ಕ್‌ನಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಚೂರಿ ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಲೇಖಕ ಸಲ್ಮಾನ್ ರಶ್ದಿ ಅವರನ್ನು ನಿನ್ನೆ ರಾತ್ರಿ ವೆಂಟಿಲೇಟರ್‌ನಿಂದ ತೆಗೆಯಲಾಗಿದೆ ಎಂದು ವರದಿಯಾಗಿದೆ.

ಸಲ್ಮಾನ್ ರಶ್ದಿ ಅವರನ್ನು ವೆಂಟಿಲೇಟರ್‌ನಿಂದ ಹೊರತೆಗೆದಿದ್ದು ಸದ್ಯ ಅವರೀಗ ಮಾತನಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ಸಲ್ಮಾನ್ ರಶ್ದಿಯವರನ್ನು ಇರಿದ ಆರೋಪ ಹೊತ್ತಿರುವ 24 ವರ್ಷದ ಹದಿ ಮತರ್, ಕೃತ್ಯದ ಬಗ್ಗೆ  ತಪ್ಪಿತಸ್ಥ ಭಾವನೆ ಇಲ್ಲ ಎಂದು ಒಪ್ಪಿಕೊಂಡಿದ್ದಾನೆ.

ಲೇಖಕರ ಕುತ್ತಿಗೆ ಮತ್ತು ಹೊಟ್ಟೆಗೆ ಸರಿಸುಮಾರು 10 ಬಾರಿ ಇರಿದಿದ್ದಾರೆ ಎಂದು ಪ್ರಾಸಿಕ್ಯೂಟರ್‌ಗಳು ನ್ಯೂಯಾರ್ಕ್ ನ್ಯಾಯಾಲಯದಲ್ಲಿ ಹದಿ ಮತರ್‌ನ ವಿಚಾರಣೆಯ ಸಂದರ್ಭದಲ್ಲಿ ಹೇಳಿದರು. ಹದಿ ಮತರ್ ನ ಸಾಮಾಜಿಕ ಮಾಧ್ಯಮ ಅಕೌಂಟ್ ನ ಪ್ರಾಥಮಿಕ ವಿಮರ್ಶೆಯಲ್ಲಿ, ಹದಿ ಮತರ್ ಶಿಯಾ ಉಗ್ರವಾದ ಮತ್ತು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್(IRGC) ಬಗ್ಗೆ ಸಹಾನುಭೂತಿ ಹೊಂದಿದ್ದಾರೆಂದು ತೋರಿಸಿದೆ.

ಸಲ್ಮಾನ್ ರಶ್ದಿ ಅವರ ಮೇಲಿನ ದಾಳಿಯು ಪ್ರಪಂಚದಾದ್ಯಂತ ಆಘಾತ ಮತ್ತು ಆಕ್ರೋಶವನ್ನು ಎದುರಿಸಿದೆ. ಯುಎಸ್ ಅಧ್ಯಕ್ಷ ಜೋ ಬೈಡೆನ್ ಅವರು ಕೆಟ್ಟ ದಾಳಿಯೆಂದು ಘಟನೆಯನ್ನು ಖಂಡಿಸಿದ್ದಾರೆ. ಬ್ರಿಟಿಷ್ ನಾಯಕ ಬೋರಿಸ್ ಜಾನ್ಸನ್ , ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ದಾಳಿಯನ್ನು ಖಂಡನೀಯ ಮತ್ತು ಹೇಡಿತನ ಎಂದು ಕರೆದಿದ್ದಾರೆ.

ನ್ಯೂಯಾರ್ಕ್ ನಗರದ ಸಮೀಪವಿರುವ ಚೌಟಕ್ವಾ ಸಂಸ್ಥೆಯಲ್ಲಿ ರಶ್ದಿ ಭಾಷಣ ಮಾಡಲು ಹೊರಟಿದ್ದಾಗ ದಾಳಿ ನಡೆಸಲಾಯಿತು.

ರಶ್ದಿಯವರು 1981ರಲ್ಲಿ ಅವರ ಎರಡನೇ ಕಾದಂಬರಿ “ಮಿಡ್ನೈಟ್ಸ್ ಚಿಲ್ಡ್ರನ್” ಮೂಲಕ ಗಮನ ಸೆಳೆದರು, ಇದು ಅಂತರರಾಷ್ಟ್ರೀಯ ಪ್ರಶಂಸೆ ಮತ್ತು ಪ್ರತಿಷ್ಠಿತ ಬೂಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಭಾರತೀಯ ಮೂಲದ ಬ್ರಿಟಿಷ್ ಪ್ರಜೆ – ಕಳೆದ 20 ವರ್ಷಗಳಿಂದ ಯುಎಸ್‌ನಲ್ಲಿ ವಾಸಿಸುತ್ತಿದ್ದಾರೆ. ಸಲ್ಮಾನ್ ರಶ್ದಿ ಅವರು ತಮ್ಮ 1988 ರ ಪುಸ್ತಕ ದಿ ಸೈಟಾನಿಕ್ ವರ್ಸಸ್‌ಗಾಗಿ ದಶಕಗಳಿಂದ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಈ ಕಾದಂಬರಿಯನ್ನು ಕೆಲವು ಧರ್ಮಗುರುಗಳು ಪ್ರವಾದಿ ಮೊಹಮ್ಮದ್‌ಗೆ ಅಗೌರವವೆಂದು ಪರಿಗಣಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com