ನ್ಯೂಯಾರ್ಕ್: ಹಿಂದೂ ದೇವಾಲಯದ ಹೊರಗಿನ ಗಾಂಧಿ ಪ್ರತಿಮೆ ಧ್ವಂಸ

ಪ್ರಚೋದನಾಕಾರಿ ಅಪರಾಧವೊಂದರಲ್ಲಿ ಇದೇ ತಿಂಗಳ ಆರಂಭದಲ್ಲಿ ಧ್ವಂಸಗೊಳಿಸಲಾಗಿದ್ದ ಹಿಂದೂ ದೇವಾಲಯವೊಂದರಲ್ಲಿನ ಮಹಾತ್ಮ ಗಾಂಧಿಯ ಕರಕುಶಲ ಪ್ರತಿಮೆಯನ್ನು ಅಪರಿಚಿತ ದುಷ್ಕರ್ಮಿಗಳು ಸುತ್ತಿಗೆಯಿಂದ ಹೊಡೆದು ನಾಶಪಡಿಸಿದ್ದಾರೆ ಎಂದು ಮಾಧ್ಯಮ ವರದಿಗಳು ಶುಕ್ರವಾರ ತಿಳಿಸಿವೆ.
ಗಾಂಧಿ ಪ್ರತಿಮೆ ಸಾಂದರ್ಭಿಕ ಚಿತ್ರ
ಗಾಂಧಿ ಪ್ರತಿಮೆ ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್:  ಪ್ರಚೋದನಾಕಾರಿ ಅಪರಾಧವೊಂದರಲ್ಲಿ ಇದೇ ತಿಂಗಳ ಆರಂಭದಲ್ಲಿ ಧ್ವಂಸಗೊಳಿಸಲಾಗಿದ್ದ ಹಿಂದೂ ದೇವಾಲಯವೊಂದರಲ್ಲಿನ ಮಹಾತ್ಮ ಗಾಂಧಿಯ ಕರಕುಶಲ ಪ್ರತಿಮೆಯನ್ನು ಅಪರಿಚಿತ ದುಷ್ಕರ್ಮಿಗಳು ಸುತ್ತಿಗೆಯಿಂದ ಹೊಡೆದು ನಾಶಪಡಿಸಿದ್ದಾರೆ ಎಂದು ಮಾಧ್ಯಮ ವರದಿಗಳು ಶುಕ್ರವಾರ ತಿಳಿಸಿವೆ.

ಸಿಬಿಎಸ್ ನ್ಯೂಸ್.ಕಾಮ್ ಪ್ರಕಾರ, ಮಂಗಳವಾರ ವ್ಯಕ್ತಿಯೊಬ್ಬ ಸುತ್ತಿಗೆಯಿಂದ ಮಹಾತ್ಮ ಗಾಂಧಿ ಪ್ರತಿಮೆಯನ್ನು  ಹೊಡೆಯುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲ ನಿಮಿಷಗಳ ನಂತರ, ಆರು ಜನರ ಗುಂಪು ಅದರ ಮೇಲೆ ಕಾಲಿಡುತ್ತದೆ ಮತ್ತು ಅಲ್ಲದೇ, ತೆಗೆದುಕೊಂಡು ಹೋಗುವ ಮೊದಲು ಸುತ್ತಿಗೆಯಿಂದ ಹೊಡೆದಿದ್ದಾರೆ ಎಂದು ಮಾಧ್ಯಮಗಳು ಹೇಳಿವೆ.  ಇದು ತುಂಬಾ ನೋವಿನ ವಿಚಾರವಾಗಿದೆ ಎಂದು ಸೌತ್ ರಿಚ್ಮಂಡ್ ಹಿಲ್ ನಲ್ಲಿರುವ ಶ್ರೀ ತುಳಸಿ ಮಂದಿರ ಸಂಸ್ಥಾಪಕ ಲಖ್ರಾಮ್ ಮಹಾರಾಜ್ ಹೇಳಿರುವುದಾಗಿ ವರದಿ ಹೇಳಿದೆ. 

ಬುಧವಾರ ಬೆಳಗ್ಗೆ ಗಾಂಧಿ ಪ್ರತಿಮೆ ಶಿಥಿಲಗೊಂಡಿರುವುದನ್ನು ಮಹಾರಾಜ್ ಪತ್ತೆ ಮಾಡಿದ್ದಾರೆ. ದೇವಾಲಯದ ಮುಂಭಾಗದಲ್ಲಿ  ನಾಯಿ ಎಂಬ ಪದವನ್ನು ಬರೆಯಲಾಗಿದೆ.  ಎರಡು ವಾರಗಳ ಹಿಂದೆ ಇದೇ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಸಮುದಾಯಕ್ಕೆ ತುಂಬಾ ತೊಂದರೆಯಾಗಿದೆ ಎಂದು ವಿಧಾನಸಭೆ ಸದಸ್ಯೆ ಜೆನಿಫರ್ ರಾಜ್‌ಕುಮಾರ್ ಹೇಳಿರುವುದಾಗಿ ವರದಿಯಲ್ಲಿ ತಿಳಿಸಿದ್ದಾರೆ. 

ಈ ಎರಡು ಘಟನೆಗಳನ್ನು ವಿಚಾರಣೆ ನಡೆಸಿದ ನ್ಯೂಯಾರ್ಕ್ ಪೊಲೀಸ್ ಡಿಪಾರ್ಟ್ ಮೆಂಟ್, ಇದು ಪ್ರಚೋದನಕಾರಿ ಅಪರಾಧವಾಗಿದೆ  ಎಂದು ಮಾಧ್ಯಮಗಳು ವರದಿ ಮಾಡಿದೆ. ಗಾಂಧಿ ಪ್ರತಿಮೆ ಕರಕುಶಲ ವಸ್ತುವಿನಿಂದ ಮಾಡಿದ್ದು, ಸುಮಾರು 4,000 ಅಮೆರಿಕನ್ ಡಾಲರ್ ವೆಚ್ಚವಾಗಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ. ಡಿಸೆಂಬರ್ 2020 ರಲ್ಲಿ, ಖಲಿಸ್ತಾನಿ ಬೆಂಬಲಿಗರು ವಾಷಿಂಗ್ಟನ್ ಡಿಸಿಯಲ್ಲಿ ಭಾರತೀಯ ರಾಯಭಾರ ಕಚೇರಿಯ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆಯನ್ನು ಅಪವಿತ್ರಗೊಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com