ರಷ್ಯಾ: ಭಾರತದ ಪ್ರಮುಖ ನಾಯಕನ ಹತ್ಯೆಗೆ ಸಂಚು ರೂಪಿಸುತ್ತಿದ್ದ ಐಎಸ್ ಆತ್ಮಾಹುತಿ ದಾಳಿಕೋರನ ಬಂಧನ
ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವೀಸ್ (ಎಫ್ ಎಸ್ ಬಿ) ಸೋಮವಾರ (ಆ.22) ರಂದು ಇಸ್ಲಾಮಿಕ್ ಸ್ಟೇಟ್ ಆತ್ಮಾಹುತಿ ದಾಳಿಕೋರನನ್ನು ಬಂಧಿಸಿದೆ.
Published: 22nd August 2022 03:20 PM | Last Updated: 22nd August 2022 04:20 PM | A+A A-

ಬಂಧನಕ್ಕೊಳಗಾಗಿರುವ ಐಎಸ್ ಆತ್ಮಾಹುತಿ ಬಾಂಬರ್
ಮಾಸ್ಕೋ: ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವೀಸ್ (ಎಫ್ ಎಸ್ ಬಿ) ಸೋಮವಾರ (ಆ.22) ರಂದು ಇಸ್ಲಾಮಿಕ್ ಸ್ಟೇಟ್ ಆತ್ಮಾಹುತಿ ದಾಳಿಕೋರನನ್ನು ಬಂಧಿಸಿದ್ದು, ಆತ ಭಾರತದ ಪ್ರಮುಖ ನಾಯಕನ ಹತ್ಯೆಗೆ ಸಂಚು ರೂಪಿಸುತ್ತಿದ್ದದ್ದನ್ನು ರಷ್ಯಾ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ.
ರಷ್ಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ನಿಷೇಧಿತ ಉಗ್ರ ಸಂಘಟನೆಯಾಗಿದ್ದು, ಬಂಧಿತ ಉಗ್ರ ತನ್ನನ್ನು ತಾನು ಸ್ಫೋಟಿಸಿಕೊಳ್ಳುವ ಮೂಲಕ ಭಾರತದ ಆಡಳಿತ ಪಕ್ಷದ ಪ್ರಮುಖನೋರ್ವನನ್ನು ಹತ್ಯೆ ಮಾಡುವ ಯೋಜನೆ ಹೊಂದಿದ್ದ ಎಂದು ಎಫ್ಎಸ್ ಬಿ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ: ಇಸ್ಲಾಮಿಕ್ ಸ್ಟೇಟ್ ಸಂಘಟನೆಯಲ್ಲಿ ಭಾರತೀಯ ಮೂಲದ 66 ಮಂದಿ: ಅಮೆರಿಕ ವರದಿ
ಬಂಧಿತ ಉಗ್ರನನ್ನು ಐಎಸ್ ನಾಯಕರು ಆತ್ಮಾಹುತಿ ಬಾಂಬರ್ ಆಗಿ ಟರ್ಕಿಯಲ್ಲಿ ನೇಮಿಸಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಬೆಳವಣಿಗೆಗಳು ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.