'ಬಿಕಿನಿ ಕಿಲ್ಲರ್' ಕುಖ್ಯಾತಿಯ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಜೈಲಿನಿಂದ ಬಿಡುಗಡೆ!

ಇಬ್ಬರು ಅಮೆರಿಕನ್ ಪ್ರವಾಸಿಗಳನ್ನು ಹತ್ಯೆಗೈದ ಆರೋಪದಲ್ಲಿ 2003ರಿಂದ ನೇಪಾಳದ ಜೈಲಿನಲ್ಲಿದ್ದ ಸೀರಿಯಲ್ ಕಿಲ್ಲರ್ 'ಬಿಕಿನಿ ಕಿಲ್ಲರ್' ಕುಖ್ಯಾತಿಯ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಇಂದು ಅಧಿಕೃತವಾಗಿ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಚಾರ್ಲ್ಸ್ ಶೋಭರಾಜ್ (ಸಂಗ್ರಹ ಚಿತ್ರ)
ಚಾರ್ಲ್ಸ್ ಶೋಭರಾಜ್ (ಸಂಗ್ರಹ ಚಿತ್ರ)

ಕಠ್ಮಂಡು: ಇಬ್ಬರು ಅಮೆರಿಕನ್ ಪ್ರವಾಸಿಗಳನ್ನು ಹತ್ಯೆಗೈದ ಆರೋಪದಲ್ಲಿ 2003ರಿಂದ ನೇಪಾಳದ ಜೈಲಿನಲ್ಲಿದ್ದ ಸೀರಿಯಲ್ ಕಿಲ್ಲರ್ 'ಬಿಕಿನಿ ಕಿಲ್ಲರ್' ಕುಖ್ಯಾತಿಯ ಸರಣಿ ಹಂತಕ ಚಾರ್ಲ್ಸ್ ಶೋಭರಾಜ್ ಇಂದು ಅಧಿಕೃತವಾಗಿ ಜೈಲಿನಿಂದ ಬಿಡುಗಡೆಯಾಗಿದ್ದಾನೆ.

ನೇಪಾಳ ದೇಶದ ಸುಪ್ರೀಂ ಕೋರ್ಟ್‌ನ ಆದೇಶದ ನಂತರ ಕುಖ್ಯಾತ ಫ್ರೆಂಚ್ ಸರಣಿ ಹಂತಕ ಚಾರ್ಲ್ಸ್ ಶೋಬ್ರಾಜ್ ನೇಪಾಳ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ. ಶೋಭರಾಜ್, ಭಾರತೀಯ ಮತ್ತು ವಿಯೆಟ್ನಾಂ ಪೋಷಕರಾದ ಫ್ರೆಂಚ್, ಇವರು ಕೊಲೆ ಆರೋಪದಲ್ಲಿ 2003 ರಿಂದ ಕಠ್ಮಂಡುವಿನ ಜೈಲಿನಲ್ಲಿದ್ದ. ವಂಚನೆ ಮತ್ತು ತಪ್ಪಿಸಿಕೊಳ್ಳುವ ಕೌಶಲ್ಯದಿಂದಾಗಿ "ಬಿಕಿನಿ ಕಿಲ್ಲರ್" ಮತ್ತು "ಸರ್ಪೆಂಟ್" ಎಂಬ ಅಡ್ಡಹೆಸರು ಹೊಂದಿರುವ ಶೋಭರಾಜ್, 1975 ರಲ್ಲಿ ನೇಪಾಳದಲ್ಲಿ ಅಮೇರಿಕನ್ ಮಹಿಳೆ ಕೊನ್ನಿ ಜೋ ಬ್ರೋಂಜಿಚ್ ಅವರ ಹತ್ಯೆಗಾಗಿ 2003 ರಿಂದ ಕಠ್ಮಂಡು ಜೈಲಿನಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿದ್ದ.

2014 ರಲ್ಲಿ, ಕೆನಡಾದ ಬ್ಯಾಕ್‌ಪ್ಯಾಕರ್ ಲಾರೆಂಟ್ ಕ್ಯಾರಿಯರ್ ಅವರನ್ನು ಕೊಂದ ಅಪರಾಧಿ ಶೋಭರಾಜ್ ಗೆ ಎರಡನೇ ಜೀವಾವಧಿ ಶಿಕ್ಷೆಯನ್ನು ನೀಡಲಾಯಿತು. ಅಂದಿನಿಂದ ಈ ಶೋಭರಾಜ್ ನೇಪಾಳದಲ್ಲಿ ಜೀವಾವಧಿ ಎಂದರೆ 20 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಇದೀಗ ಶಿಕ್ಷೆ ಪೂರ್ಣಗೊಂಡ ಹಿನ್ನಲೆಯಲ್ಲಿ ಈತ ಜೈಲಿನಿಂದ ಬಿಡುಗಡೆಯಾಗಿದ್ದಾನೆ ಎನ್ನಲಾಗಿದೆ. 

19 ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಶೋಭರಾಜ್​​ಗೆ ವಯಸ್ಸಾಗಿರುವುದರಿಂದ ಆತನನ್ನು ಬಿಡುಗಡೆ ಮಾಡಲು ಕೋರ್ಟ್ ಆದೇಶಿಸಿದೆ. ಜೈಲಿನಿಂದ ಬಂಧಮುಕ್ತನಾದ 15 ದಿನಗಳಲ್ಲಿ ಆತನನ್ನು ಗಡಿಪಾರು ಮಾಡಬೇಕೆಂದು ಅಲ್ಲಿನ ಉಚ್ಛ ನ್ಯಾಯಾಲಯ ಹೇಳಿದೆ

ಭಾರತ ಮತ್ತು ವಿಯೇಟ್ನಾಮೀಸ್ ದಂಪತಿಗಳ ಮಗ, ಫ್ರಾನ್ಸ್ ಪೌರತ್ವ ಹೊಂದಿರುವ ಚಾರ್ಲ್ಸ್ ಶೋಭರಾಜ್ ನೇಪಾಳಕ್ಕೆ ನಕಲಿ ಪಾಸ್ ಪೋರ್ಟ್ ಬಳಸಿ ಪ್ರವೇಶಿಸಿದ್ದ. 1975ರಲ್ಲಿ ಈತ ಅಮೆರಿಕದ ಪ್ರಜೆಗಳಾದ ಕೋನಿ ಜೋ ಬೊರೊಜಿಂಚ್ (29)ಮತ್ತು ಆತನ ಗರ್ಲ್ ಫ್ರೆಂಡ್ ಕೆನಡಾ ಮೂಲದ ಲೌರೆಂಟ್ ಕಾರೆರ್ (26) ಅವರನ್ನು ಹತ್ಯೆ ಮಾಡಿದ್ದ. ಚಾರ್ಲ್ಸ್ ಫೋಟೊ ನ್ಯೂಸ್ ಪೇಪರ್ ನಲ್ಲಿ ಪ್ರಕಟವಾದ ನಂತರ 2003 ಸೆಪ್ಟೆಂಬರ್ 1ರಂದು ನೇಪಾಳದ ಕ್ಯಾಸಿನೋ ಹೊರಗಡಿ ಇದ್ದ ಆತನನ್ನು ಪೊಲೀಸರು ಬಂಧಿಸಿದ್ದರು. ಬಂಧನದ ನಂತರ ಪೊಲೀಸರು ಆತನ ವಿರುದ್ಧ 1975ರಲ್ಲಿ ಕಠ್ಮಂಡು ಮತ್ತು ಭಕ್ತಪುರ್ ನಲ್ಲಿ ನಡೆದ ಎರಡು ಪ್ರತ್ಯೇಕ ಕೊಲೆ ಪ್ರಕರಣಗಳನ್ನು ದಾಖಲಿಸಿದ್ದರು.

ಚಾರ್ಲ್ಸ್ ಶೋಭಾರಾಜ್​​ಗೆ   ಕಠ್ಮಂಡುವಿನ ಸೆಂಟ್ರಲ್ ಜೈಲಿನಲ್ಲಿ  21 ವರ್ಷ ಜೈಲು ವಿಧಿಸಲಾಗಿತ್ತು. ಯುಎಸ್ ಪ್ರಜೆಯನ್ನು ಹತ್ಯೆ ಮಾಡಿದಕ್ಕಾಗಿ 20 ವರ್ಷಗಳು ಮತ್ತು ನಕಲಿ ಪಾಸ್‌ಪೋರ್ಟ್ ಬಳಸಿದ್ದಕ್ಕಾಗಿ ಒಂದು ವರ್ಷ ಮತ್ತು 2,000 ದಂಡವನ್ನು ವಿಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com