ಹದಗೆಟ್ಟ ಪರಿಸ್ಥಿತಿ; ದಿನನಿತ್ಯದ ಕೋವಿಡ್ ಅಂಕಿ-ಸಂಖ್ಯೆಗಳ ಪ್ರಕಟಣೆ ನಿಲ್ಲಿಸಲಿರುವ ಚೀನಾ 

ಚೀನಾದಲ್ಲಿ ಕೋವಿಡ್-19 ಪರಿಸ್ಥಿತಿ ಹದಗೆಡುತ್ತಿದ್ದು, ಆರೋಗ್ಯ ವ್ಯವಸ್ಥೆ ಕುಸಿತ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ದಿನನಿತ್ಯದ ಕೋವಿಡ್-19 ಅಂಕಿ-ಸಂಖ್ಯೆಗಳ ಪ್ರಕಟಣೆಯನ್ನು ನಿಲ್ಲಿಸಲು ಚೀನಾ ಆರೋಗ್ಯ ಆಯೋಗ ನಿರ್ಧರಿಸಿದೆ.
ಕೋವಿಡ್-19 (ಸಂಗ್ರಹ ಚಿತ್ರ)
ಕೋವಿಡ್-19 (ಸಂಗ್ರಹ ಚಿತ್ರ)

ನವದೆಹಲಿ: ಚೀನಾದಲ್ಲಿ ಕೋವಿಡ್-19 ಪರಿಸ್ಥಿತಿ ಹದಗೆಡುತ್ತಿದ್ದು, ಆರೋಗ್ಯ ವ್ಯವಸ್ಥೆ ಕುಸಿತ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ದಿನನಿತ್ಯದ ಕೋವಿಡ್-19 ಅಂಕಿ-ಸಂಖ್ಯೆಗಳ ಪ್ರಕಟಣೆಯನ್ನು ನಿಲ್ಲಿಸಲು ಚೀನಾ ಆರೋಗ್ಯ ಆಯೋಗ ನಿರ್ಧರಿಸಿದೆ.
 
ಚೀನಾದ್ಯಂತ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಆಸ್ಪತ್ರೆಗಳಲಿ ವಾರ್ಡ್ ಗಳು ಭರ್ತಿಯಾಗಿವೆ. ಔಷಧಗಳ ಕೊರತೆ ಎದುರಾಗಿದೆ. ಇಂದಿನಿಂದ ಕೋವಿಡ್-19 ಸಂಬಂಧಿತ ಮಾಹಿತಿಗಳನ್ನು ದಿನ ನಿತ್ಯ ಪ್ರಕಟಿಸುವುದನ್ನು ನಿಲ್ಲಿಸಲಾಗುವುದು ಎಂದು ಎನ್ ಹೆಚ್ ಸಿ ಹೇಳಿದ್ದು ಇದಕ್ಕಾಗಿ ಸ್ಪಷ್ಟ ಕಾರಣ ನೀಡಿಲ್ಲ.

ಚೀನಾದಲ್ಲಿ ಸೋಂಕು ಹರಡುತ್ತಿರುವ ವೇಗ ಕೇಸ್ ಲೋಡ್ ಗಳನ್ನು ಪತ್ತೆ ಮಾಡುವುದಕ್ಕೆ ಸಾಧ್ಯವಾಗದ ಸ್ಥಿತಿಗೆ ತಲುಪಿದೆ. 

ಎನ್ ಹೆಚ್ ಸಿ ನೀಡಿರುವ ಮಾಹಿತಿಯ ಪ್ರಕಾರ ಚೀನಾದ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರದಿಂದ ಕೋವಿಡ್-19 ಸಂಬಂಧಿತ ಮಾಹಿತಿ ಪ್ರಕಟವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com