ಕೊಲಂಬೋ: ತೀವ್ರ ಆರ್ಥಿಕ ಸಂಕಷ್ಟದಿಂದ ನರಳುತ್ತಿರುವ ನೆರೆಯ ಶ್ರೀಲಂಕಾದಲ್ಲಿ ಜನರ ಸಹನೆಯ ಕಟ್ಟೆ ಒಡೆದಿದೆ. ಅಧ್ಯಕ್ಷ ಸ್ಥಾನಕ್ಕೆ ಗೊಟಬಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನಾಕಾರರು ಅವರ ಅಧಿಕೃತ ನಿವಾಸಕ್ಕೆ ನುಗ್ಗಿದ್ದಾರೆ.
ಜನರ ಆಕ್ರೋಶಕ್ಕೆ ಹೆದರಿ ಗೊಟಬಯ ಅವರು ಅರಮನೆ ತೊರೆದಿದ್ದು, ಇದೀಗ ಪ್ರತಿಭಟನಾಕಾರರು ತಮ್ಮ ಕುಟುಂಬ, ಮಕ್ಕಳೊಂದಿಗೆ ತೆರಳಿ, ಅರಮನೆಯಲ್ಲಿ ಸುತ್ತಾಡುತ್ತಾ, ಎಲ್ಲೆಂದರಲ್ಲಿ ಸ್ವಚ್ಛಂದವಾಗಿ ತಿರುಗಾಡುತ್ತಾ, ಅಲ್ಲಿಯೇ ಊಟ, ಜಿಮ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.
ಅಪಾರ ಪ್ರಮಾಣದಲ್ಲಿ ಅರಮನೆಯತ್ತ ಧಾವಿಸುತ್ತಿರುವ ಜನರು, ಅರಮನೆ ತುಂಬೆಲ್ಲಾ ಓಡಾಡುತ್ತಾ, ಸೆಲ್ಫಿ, ಮೋಜು, ಮಸ್ತಿಯಲ್ಲಿ ತೊಡಗಿದ್ದಾರೆ. ಇದೀಗ ಭ್ರಷ್ಟಾಚಾರದಿಂದ ಮುಕ್ತರಾಗಿದ್ದೇವೆ. ಇದು ಶಾಂತಯುತವಾಗಿದೆ. ಕುಟುಂಬ, ಮಕ್ಕಳೊಂದಿಗೆ ಎಂಜಾಯ್ ಮಾಡುತ್ತಿದ್ದೇವೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
Advertisement