35 ವರ್ಷದ ಮಲ ಮಗಳೊಂದಿಗೆ ಸೇರಿ 'ರಹಸ್ಯ ಮಗು' ಪಡೆದ ಟೆಕ್ ದೈತ್ಯ ಎಲಾನ್ ಮಸ್ಕ್ ತಂದೆ 76 ವರ್ಷದ ಎರೋಲ್ ಮಸ್ಕ್!
ಎಲೋನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ ಅವರು ತಮ್ಮ 35 ವರ್ಷದ ಮಲಮಗಳು ಜನಾ ಬೆಝುಯಿಡೆನ್‌ಹೌಟ್ ಅವರೊಂದಿಗೆ ಸೇರಿ ಎರಡನೇ "ರಹಸ್ಯ" ಮಗುವನ್ನು ಹೊಂದಿದ್ದಾರೆಂದು ಹೇಳಲಾಗಿದೆ.
Published: 15th July 2022 11:37 AM | Last Updated: 15th July 2022 01:19 PM | A+A A-

ಎಲಾನ್ ಮಸ್ತ್ ತಂದೆ ಎರೋಲ್ ಮಸ್ಕ್
ಕೇಪ್ ಟೌನ್: ಎಲೋನ್ ಮಸ್ಕ್ ಅವರ ತಂದೆ ಎರೋಲ್ ಮಸ್ಕ್ ಅವರು ತಮ್ಮ 35 ವರ್ಷದ ಮಲಮಗಳು ಜನಾ ಬೆಝುಯಿಡೆನ್‌ಹೌಟ್ ಅವರೊಂದಿಗೆ ಸೇರಿ ಎರಡನೇ "ರಹಸ್ಯ" ಮಗುವನ್ನು ಹೊಂದಿದ್ದಾರೆಂದು ಹೇಳಲಾಗಿದೆ.
ಈ ಬಗ್ಗೆ ಸ್ವತಃ ಎರೋಲ್ ಮಸ್ಕ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದು, ದಿ ಸನ್‌ಗೆ ನೀಡಿದ ಸಂದರ್ಶನದಲ್ಲಿ ತಾವು ತಮ್ಮ 35 ವರ್ಷದ ಮಲಮಗಳೊಂದಿಗೆ ಸೇರಿ ರಹಸ್ಯ ಮಗುವನ್ನು ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಕುರಿತು ಹೆಮ್ಮೆಯಿಂದಲೇ ಮಾತನಾಡಿರುವ ಎರೋಲ್ ಮಸ್ಕ್, 'ನಾವು ಭೂಮಿಯ ಮೇಲಿರುವ ಏಕೈಕ ವಿಷಯವೆಂದರೆ ಸಂತಾನೋತ್ಪತ್ತಿ ಮಾಡಲು ಎಂದು ಹೇಳಿಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಇಂಜಿನಿಯರ್ ಆಗಿರುವ ಎರೋಲ್ ಮಸ್ಕ್, ಎರಡನೇ ಮಗು ಯೋಜಿತವಲ್ಲದಿದ್ದರೂ, ಅದರ ಜನನದ ನಂತರ ಅವರು Ms ಬೆಝುಡೆನ್‌ಹೌಟ್‌ನೊಂದಿಗೆ ವಾಸಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಎಲಾನ್ ಮಸ್ಕ್ ಗೆ ಟ್ವಿಟರ್ ಮಾರಾಟ; ಅನುಮೋದನೆಗೆ ಆಡಳಿತ ಮಂಡಳಿ ಸರ್ವಾನುಮತದ ಶಿಫಾರಸು
ಈ ರಹಸ್ಯ ಮಗು 2019 ರಲ್ಲಿ ಜನಿಸಿದೆ ಎನ್ನಲಾಗಿದ್ದು, ಎರೋಲ್ ಮಸ್ಕ್ ಮತ್ತು ಬೆಝುಯಿಡೆನ್‌ಹೌಟ್ ಸಹ 2017ರಲ್ಲಿ ಜನಿಸಿದ ಎಲಿಯಟ್ ರಶ್ ಎಂಬ ಐದು ವರ್ಷದ ಮಗುವನ್ನು ಹೊಂದಿದ್ದಾರೆ. ಅವರು ಈಗ ಟೆಸ್ಲಾ CEO ಎಲೋನ್ ಮಸ್ಕ್ ಸೇರಿದಂತೆ ಒಟ್ಟು ಏಳು ಮಕ್ಕಳನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.
ಜಾನಾ ಬೆಝುಯಿಡೆನ್‌ಹೌಟ್ ಎರೋಲ್ ಮಸ್ಕ್‌ನ ಎರಡನೇ ಪತ್ನಿ ಹೈಡೆ ಬೆಜುಡೆನ್‌ಹೌಟ್ ಅವರ ಮಗಳಾಗಿದ್ದು, ಅವರು 1979 ರಲ್ಲಿ ಎಲೋನ್ ಮಸ್ಕ್‌ನ ತಾಯಿ ಮಾಯೆ ಹಾಲ್ಡೆಮನ್ ಮಸ್ಕ್ ಅವರೊಂದಿಗೆ ಬೇರ್ಪಟ್ಟ ನಂತರ ವಿವಾಹವಾದರು. ಈ ಮದುವೆಯಿಂದ ಅವರಿಗೆ ಎಲೋನ್, ಕಿಂಬಾಲ್ ಮತ್ತು ಟೋಸ್ಕಾ ಎಂಬ ಮೂರು ಮಕ್ಕಳಿದ್ದಾರೆ.
ಇದನ್ನೂ ಓದಿ: ಭವಿಷ್ಯದಲ್ಲಿ ಟ್ವಿಟರ್‌ನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುವ ಸುಳಿವು ನೀಡಿದ ಎಲಾನ್ ಮಸ್ಕ್
ಎರೋಲ್ ಮಸ್ಕ್ ಮತ್ತು ಹೈಡೆ ಬೆಜುಡೆನ್‌ಹೌಟ್ ವಿವಾಹವಾಗಿ 18 ವರ್ಷಗಳ ಕಾಲ ಸಂಸಾರ ನಡೆಸಿದ್ದರು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ. Ms ಬೆಜುಡೆನ್‌ಹೌಟ್ ಎರೋಲ್ ಮಸ್ಕ್‌ನ ಮಗುವಿಗೆ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದಾಗ ಮಸ್ಕ್ ಕುಟುಂಬವು "ಆಘಾತ" ಕ್ಕೆ ಒಳಗಾಗಿತ್ತು ಎಂದು ವರದಿಯಲ್ಲಿ ಸೇರಿಸಲಾಗಿದೆ. 'ಅವರು ಇನ್ನೂ ಅದನ್ನು ಇಷ್ಟಪಡುವುದಿಲ್ಲ ... ಅವರು ಇನ್ನೂ ಅದರ ಬಗ್ಗೆ ಸ್ವಲ್ಪ ಅಸಮಾಧಾನಗೊಂಡಿದ್ದಾರೆ, ಏಕೆಂದರೆ ಅವಳು ಅವರ ಸಹೋದರಿ. ಅವರ ಮಲತಂಗಿ ಎಂದು ಕೋಪಗೊಂಡಿದ್ದಾರೆ.
ಅಂತೆಯೇ ಟೆಕ್ ಬಿಲಿಯನೇರ್‌ನಿಂದ ಸಹ-ಸ್ಥಾಪಿತವಾದ ಕೃತಕ ಬುದ್ಧಿಮತ್ತೆ ಕಂಪನಿಯಾದ ನ್ಯೂರಾಲಿಂಕ್‌ನಲ್ಲಿ ಉನ್ನತ ಕಾರ್ಯನಿರ್ವಾಹಕರೊಂದಿಗೆ ಎಲೋನ್ ಮಸ್ಕ್ ಅವಳಿ ಮಕ್ಕಳನ್ನು ಪಡೆದಿದ್ದಾರೆ ಎಂದು ವರದಿಯಾದ ಕೆಲವು ದಿನಗಳ ನಂತರ ಈ ವಿಷಯಗಳು ಹೊರಬಂದಿವೆ.