ಪಾಕಿಸ್ತಾನ: ಲಾಹೋರ್ ನಲ್ಲಿ ಅರಿವಳಿಕೆ ಕೊರತೆ; ನೂರಾರು ಶಸ್ತ್ರಚಿಕಿತ್ಸೆ ಮುಂದೂಡಿಕೆ
ಪಾಕಿಸ್ತಾನದ ಆರ್ಥಿಕತೆ ತೀವ್ರವಾಗಿ ಕುಸಿಯುತ್ತಿದ್ದು, ಲಾಹೋರ್ ನಲ್ಲಿ ಅರವಳಿಕೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ನೂರಾರು ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗಿದೆ.
Published: 25th July 2022 04:56 PM | Last Updated: 25th July 2022 06:10 PM | A+A A-

(ಸಾಂಕೇತಿಕ ಚಿತ್ರ)
ಇಸ್ಲಾಮಾಬಾದ್: ಪಾಕಿಸ್ತಾನದ ಆರ್ಥಿಕತೆ ತೀವ್ರವಾಗಿ ಕುಸಿಯುತ್ತಿದ್ದು, ಲಾಹೋರ್ ನಲ್ಲಿ ಅರವಳಿಕೆ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ನೂರಾರು ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗಿದೆ.
ಪರಿಣಾಮ ತುರ್ತಾಗಿ ಶಸ್ತ್ರಚಿಕಿತ್ಸೆಯಾಗಬೇಕಿರುವ ಅನೇಕ ರೋಗಿಗಳ ಜೀವಕ್ಕೆ ಅಪಾಯ ಎದುರಾಗಿದೆ.
ಅಲ್ಲಿನ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿದ್ದು, ಲಾಹೋರ್ ನಲ್ಲಿ ಅಷ್ಟೇ ಅಲ್ಲದೇ ಎಲ್ಲಾ ಪ್ರಮುಖ ಸರ್ಕಾರಿ ಆಸ್ಪತ್ರೆಗಳಲ್ಲಿ ಇನೆ ಡ್ರಗ್ಸೋಫ್ಲುರಾ ಕೊರತೆ ಎದುರಾಗಿದ್ದು, ಎಲ್ಲಾ ಪ್ರಮುಖ ಆಸ್ಪತ್ರೆಗಳೂ ಈ ಔಷಧ ಉತ್ಪಾದನೆಗೆ ಶ್ರಮಿಸುತ್ತಿವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾಟಕೀಯ ಮರುಚುನಾವಣೆ ನಂತರ ಪಂಜಾಬ್ ಸಿಎಂ ಆಗಿ ಪಾಕ್ ಪ್ರಧಾನಿ ಪುತ್ರ ಹಮ್ಜಾ ಷರೀಫ್ ಪ್ರಮಾಣ
ಫೆಡರಲ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ ಡಿಎ) ಐಸೊಫ್ಲುರೇನ್ ಔಷಧವನ್ನು ಸಾಮಾನ್ಯ ಅರಿವಳಿಕೆಯನ್ನು ಪ್ರಚೋದಿಸಲು ಮತ್ತು ನಿರ್ವಹಿಸಲು ಅನುಮೋದಿಸಿದೆ.
ಡಾಲರ್ ಎದುರು ಪಾಕಿಸ್ತಾನದ ರೂಪಾಯಿ ತೀವ್ರ ಕುಸಿತಗೊಂಡ ಹಿನ್ನೆಲೆಯಲ್ಲಿ ಮಾರಾಟಗಾರರು ಔಷಧಗಳ ಪೂರೈಕೆಯನ್ನು ನಿಲ್ಲಿಸಿದ್ದಾರೆ.