ಪಾಕಿಸ್ತಾನದಲ್ಲಿ ಗಗನಕ್ಕೇರಿದ ಪೆಟ್ರೋಲ್, ಡೀಸೆಲ್ ಬೆಲೆ; ಪ್ರತಿ ಲೀಟರ್ ಗೆ 233.89 ರೂ.!

ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದ್ದು, ಗುರುವಾರ ಪೆಟ್ರೋಲ್ ಬೆಲೆ ಒಂದು ಲೀಟರ್‌ಗೆ 24 ರೂಪಾಯಿ ಏರಿಕೆಯಾಗಿದ್ದು,  ಈಗ ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 209.86 ರಿಂದ 233.89 ರೂ.ಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರಿದ್ದು, ಗುರುವಾರ ಪೆಟ್ರೋಲ್ ಬೆಲೆ ಒಂದು ಲೀಟರ್‌ಗೆ 24 ರೂಪಾಯಿ ಏರಿಕೆಯಾಗಿದ್ದು,  ಈಗ ಪಾಕಿಸ್ತಾನದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 209.86 ರಿಂದ 233.89 ರೂ.ಗೆ ಏರಿಕೆಯಾಗಿದೆ. ಕಳೆದ ಮೂರು ದಿನಗಳಲ್ಲಿ ಮೂರನೇ ಬಾರಿ ಪೆಟ್ರೋಲ್ ಬೆಲೆ ಹೆಚ್ಚಿಸಲಾಗಿದೆ.

ಇಸ್ಲಾಮಾಬಾದ್‌ನಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್, ಹೊಸ ಬೆಲೆಗಳು ಜೂನ್ 15 ರ ಮಧ್ಯರಾತ್ರಿಯಿಂದ ಜಾರಿಗೆ ಬಂದಿವೆ ಎಂದು ಹೇಳಿದ್ದಾರೆ.

ಇನ್ನು ಮುಂದೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸಬ್ಸಿಡಿಗಳನ್ನು ಭರಿಸುವ ಸ್ಥಿತಿಯಲ್ಲಿ ಸರ್ಕಾರವಿಲ್ಲ ಎಂದು ಹೇಳಿದ ಮಿಫ್ತಾ ಇಸ್ಮಾಯಿಲ್ ಅವರು, ಪೆಟ್ರೋಲ್ ಬೆಲೆಯನ್ನು 24.03 ರೂಪಾಯಿಗಳಷ್ಟು ಹೆಚ್ಚಿಸಲಾಗಿದೆ. ಇದರಿಂದ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 233.89 ರೂ. ಗೆ ತಲುಪಿದೆ ಎಂದರು.

ಅದೇ ರೀತಿ ಪಾಕಿಸ್ತಾನ ಜೂನ್ 15 ರಂದು ಡೀಸೆಲ್ ಮೇಲೆ 16.3 ರೂ. ಏರಿಸಿದ್ದು, ಈಗ ಡೀಸೆಲ್ ಬೆಲೆ 204.15 ರಿಂದ 263.31 ರೂ. ಆಗಿದೆ. ಕಳೆದ 20 ದಿನಗಳಲ್ಲಿ ಇದು ಮೂರನೇ ಹೆಚ್ಚಳವಾಗಿದೆ. ಸೀಮೆಎಣ್ಣೆ ಬೆಲೆ 29.49 ರೂ. ಏರಿಕೆಯಾಗಿದ್ದು, 181.94 ರೂ. ಇದ್ದ ಬೆಲೆ 211.43 ರೂ.ಗೆ ಏರಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com