ಇರಾನ್ ಹಿಜಾಬ್ ವಿರೋಧಿ ಪ್ರತಿಭಟನೆ: ಭದ್ರತಾ ಪಡೆಗಳಿಂದ ಕನಿಷ್ಠ 326 ಮಂದಿಯ ಬರ್ಬರ ಹತ್ಯೆ!

ನೈತಿಕ ಪೊಲೀಸರ ಕಸ್ಟಡಿಯಲ್ಲಿದ್ದ ಮಹ್ಸಾ ಅಮಿನಿನ ಸಾವಿನ ನಂತರ ತೀವ್ರಗೊಂಡ ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ನಿರತವಾಗಿರುವ ಇರಾನ್‌ನ ಭದ್ರತಾ ಪಡೆಗಳು ಕನಿಷ್ಠ 326 ಜನರನ್ನು ಹತ್ಯೆ ಮಾಡಿದೆ ಎಂದು ಇರಾನ್ ಮಾನವ ಹಕ್ಕುಗಳು ತಿಳಿಸಿದೆ.
ಪ್ರತಿಭಟನೆಯ ಚಿತ್ರ
ಪ್ರತಿಭಟನೆಯ ಚಿತ್ರ

ಪ್ಯಾರಿಸ್: ನೈತಿಕ ಪೊಲೀಸರ ಕಸ್ಟಡಿಯಲ್ಲಿದ್ದ ಮಹ್ಸಾ ಅಮಿನಿನ ಸಾವಿನ ನಂತರ ತೀವ್ರಗೊಂಡ ಪ್ರತಿಭಟನೆಗಳನ್ನು ಹತ್ತಿಕ್ಕುವಲ್ಲಿ ನಿರತವಾಗಿರುವ ಇರಾನ್‌ನ ಭದ್ರತಾ ಪಡೆಗಳು ಕನಿಷ್ಠ 326 ಜನರನ್ನು ಹತ್ಯೆ ಮಾಡಿದೆ ಎಂದು ಇರಾನ್ ಮಾನವ ಹಕ್ಕುಗಳು ತಿಳಿಸಿದೆ.

ಇಸ್ಲಾಮಿಕ್ ಗಣರಾಜ್ಯದಲ್ಲಿ ಸೆಪ್ಟಂಬರ್ 16ರಂದು ಅಮಿನಿಯ ಸಾವಿನ ಬಗ್ಗೆ ಪ್ರತಿಭಟನೆಗಳು ತೀವ್ರವಾಗಿದ್ದವು. ಬೀದಿಗಿಳಿದ ಮಹಿಳೆಯರು ಬುರ್ಕಾ ಮತ್ತು ತಮ್ಮ ತಲೆಕೂದಲನ್ನು ಕತ್ತರಿಸಿಕೊಂಡು ಪ್ರತಿಭಟನೆ ಆರಂಭಿಸಿದರು. ಇದಾದ ಮೂರು ದಿನಗಳ ನಂತರ ಕಟ್ಟುನಿಟ್ಟಾದ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ್ದಕ್ಕಾಗಿ ನೂರಾರು ಮಹಿಳೆಯರ ಹಾಗೂ ಪುರುಷರನ್ನು ಬಂಧಿಸಲಾಯಿತು.

ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಯಲ್ಲಿ 43 ಮಕ್ಕಳು ಮತ್ತು 25 ಮಹಿಳೆಯರು ಸೇರಿದಂತೆ ಕನಿಷ್ಠ 326 ಜನರು ಭದ್ರತಾ ಪಡೆಗಳಿಂದ ಹತ್ಯೆಯಾಗಿದ್ದಾರೆ ಎಂದು ಓಸ್ಲೋ ಮೂಲದ ಇರಾನ್ ಮಹಿಳಾ ಹಕ್ಕುಗಳ ಗುಂಪು ತನ್ನ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದೆ.

ಹತ್ಯೆಗಳ ಸಂಖ್ಯೆ ಪಾಕಿಸ್ತಾನದೊಂದಿಗಿನ ಇರಾನ್‌ನ ಆಗ್ನೇಯ ಗಡಿಯಲ್ಲಿರುವ ಸಿಸ್ತಾನ್-ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಹತ್ಯೆಯಾದ ಕನಿಷ್ಠ 123 ಜನರನ್ನು ಒಳಗೊಂಡಿದ್ದು ಈ ಹಿಂದಿನ ಅಂಕಿಅಂಶಗಳಿಗಿಂತ ಈ ಬಾರಿ 118 ಮಂದಿ ಸಾವನ್ನಪ್ಪಿದ್ದಾರೆ.

ಸೆಪ್ಟಂಬರ್ 30ರಂದು ಸಿಸ್ತಾನ್-ಬಲೂಚಿಸ್ತಾನ್‌ನ ರಾಜಧಾನಿ ಜಹೇದಾನ್‌ನಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಇದನ್ನು ಪ್ರತಿಭಟನಾಕಾರರು 'ಬ್ಲಡಿ ಫ್ರೈಡೇ' ಎಂದು ಕರೆಯುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com