ಹಿಜಾಬ್ ಧರಿಸದೆ ಸ್ಪರ್ಧಿಸಿದ ಅಥ್ಲೀಟ್ ಎಲ್ನಾಜ್ ರೆಕಾಬಿಗೆ ಇರಾನ್‌ನಲ್ಲಿ ಭವ್ಯ ಸ್ವಾಗತ, ವಿಡಿಯೋ ವೈರಲ್!

ಕ್ರೀಡಾಕೂಟದಲ್ಲಿ ಹಿಜಾಬ್ ಧರಿಸದೆ ಸ್ಪರ್ಧಿಸುವ ಮೂಲಕ ಸಂಚಲನ ಮೂಡಿಸಿದ್ದ ಇರಾನ್ ಪರ್ವತಾರೋಹಿಯೊಬ್ಬರು ಕಳೆದ ರಾತ್ರಿ ಟೆಹ್ರಾನ್‌ಗೆ ಆಗಮಿಸಿದ್ದು ಆಟಗಾರ್ತಿಯ ನಡೆಯನ್ನು ಶ್ಲಾಘಿಸಿದ ಬೆಂಬಲಿಗರು ವೀರೋಚಿತ ಸ್ವಾಗತವನ್ನು ನೀಡಿದರು.
ಎಲ್ನಾಜ್ ರೆಕಾಬಿ
ಎಲ್ನಾಜ್ ರೆಕಾಬಿ

ಪ್ಯಾರಿಸ್: ಕ್ರೀಡಾಕೂಟದಲ್ಲಿ ಹಿಜಾಬ್ ಧರಿಸದೆ ಸ್ಪರ್ಧಿಸುವ ಮೂಲಕ ಸಂಚಲನ ಮೂಡಿಸಿದ್ದ ಇರಾನ್ ಪರ್ವತಾರೋಹಿಯೊಬ್ಬರು ಕಳೆದ ರಾತ್ರಿ ಟೆಹ್ರಾನ್‌ಗೆ ಆಗಮಿಸಿದ್ದು ಆಟಗಾರ್ತಿಯ ನಡೆಯನ್ನು ಶ್ಲಾಘಿಸಿದ ಬೆಂಬಲಿಗರು ವೀರೋಚಿತ ಸ್ವಾಗತವನ್ನು ನೀಡಿದರು.

ಒಂದು ತಿಂಗಳ ಹಿಂದೆ ಮಹ್ಸಾ ಅಮಿನಿಯ ಸಾವಿನ ನಂತರ ಮಹಿಳಾ ನೇತೃತ್ವದ ಪ್ರತಿಭಟನೆಗಳಿಂದ ಇರಾನ್ ನಲ್ಲಿ ಇನ್ನು ಪ್ರಕ್ಷುಬ್ದ ವಾತಾವರಣ ಇದೆ. ಇದರ ಮಧ್ಯೆ ಇರಾನ್ ಆಟಗಾರ್ತಿ ಎಲ್ನಾಜ್ ರೆಕಾಬಿ ದಕ್ಷಿಣ ಕೊರಿಯಾದಲ್ಲಿ ನಡೆದ ಸ್ಪರ್ಧೆಯ ನಂತರ ಟೆಹ್ರಾನ್ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದರು.

ವಿಮಾನ ನಿಲ್ದಾಣದಲ್ಲಿ ಏನಾಯಿತು ಎಂಬುದನ್ನು ರೇಕಾಬಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದು ಆಕಸ್ಮಿಕವಾಗಿ ನಾನು ಧರಿಸಿದ್ದ ಹಿಜಾಬ್ ಜಾರಿಬಿದ್ದಿದೆ. ಇದಕ್ಕೆ ನಾನು ಕ್ಷಮೆಯಾಚಿಸುತ್ತೇನೆ. ಕ್ರೀಡಾಪಟುಗಳು ಸೇರಿದಂತೆ ಎಲ್ಲಾ ಇರಾನಿನ ಮಹಿಳೆಯರು ಹಿಜಾಬ್ ಅನ್ನು ಧರಿಸಬೇಕು ಎಂದು ಆಟಗಾರ್ತಿ ಒತ್ತಾಯಿಸಿದ್ದಾರೆ. ಇನ್ನು ಇರಾನ್ ಅಧಿಕಾರಿಗಳ ಒತ್ತಡದಿಂದಾಗಿ ರೆಕಾಬಿ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಹಿಜಾಬ್ ವಿರೋಧಿ ಹೋರಾಟಗಾರರು ಹೇಳಿದ್ದಾರೆ.

ಇಮಾಮ್ ಖೊಮೇನಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ನ ಹೊರಗೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಬೆಂಬಲಿಗರು 'ಎಲ್ನಾಜ್ ಈಸ್ ಎ ಹೀರೋ' ಎಂದು ಘೋಷಣೆ ಕೂಗಿದರು. ಇನ್ನು ಚಪ್ಪಾಳೆ ತಟ್ಟುವ ಮೂಲಕ ಆಕೆಗೆ ಸ್ವಾಗತ ಕೂಗಿದ ಅವರು ಇದೆಲ್ಲವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು ವಿಡಿಯೋ ವೈರಲ್ ಆಗಿದೆ.

ಇರಾನ್ ನಲ್ಲಿನ ಹಿಜಾಬ್ ವಿರೋಧಿ ಹೋರಾಟಕ್ಕೆ ಭಾರತೀಯ ಸೆಲೆಬ್ರಿಟಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಇರಾನ್‌ನ ಯುವತಿ ಮೃತ ಮಹ್ಸಾ ಅಮಿನಿಗೆ ಹೋಲಿಸಿಕೊಂಡಿದ್ದ ನಟಿ ಊರ್ವಶಿ ರೌಟೇಲಾ ಅವರು ಮಹ್ಸಾ ಸಾವಿನ ವಿರುದ್ಧ ಹಾಗೂ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಇರಾನ್ ಮಹಿಳೆಯರನ್ನು ಬೆಂಬಲಿಸಿ 'ತಲೆ ಕೂದಲು ಕತ್ತರಿಸುವ' ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com