ಏಷ್ಯನ್ ಶ್ರೀಮಂತರ ಪಟ್ಟಿ 2022: ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ -ಪತ್ನಿ ಅಕ್ಷತಾ ಮೂರ್ತಿಗೆ ಸ್ಥಾನ

ಇಂಗ್ಲೆಂಡಿನ 'ಏಷ್ಯಾದ ಅತಿ ಶ್ರೀಮಂತರು 2022'ರ ಪಟ್ಟಿಯಲ್ಲಿ ಹಿಂದುಜಾ ಕುಟುಂಬ ಅಗ್ರ ಸ್ಥಾನದಲ್ಲಿದ್ದರೆ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಸ್ಥಾನ ಪಡೆದಿದ್ದಾರೆ.
ಅಕ್ಷತಾ ಮೂರ್ತಿ-ರಿಷಿ ಸುನಕ್
ಅಕ್ಷತಾ ಮೂರ್ತಿ-ರಿಷಿ ಸುನಕ್

ಲಂಡನ್: ಇಂಗ್ಲೆಂಡಿನ 'ಏಷ್ಯಾದ ಅತಿ ಶ್ರೀಮಂತರು 2022'ರ ಪಟ್ಟಿಯಲ್ಲಿ ಹಿಂದುಜಾ ಕುಟುಂಬ ಅಗ್ರ ಸ್ಥಾನದಲ್ಲಿದ್ದರೆ ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಸ್ಥಾನ ಪಡೆದಿದ್ದಾರೆ.

ಭಾರತದ ಐಟಿ ದಿಗ್ಗದ ನಾರಾಯಣ ಮೂರ್ತಿಯವರ ಮಗಳು ಅಕ್ಷತಾ ಮೂರ್ತಿ ಮತ್ತು ಅವರ ಪತಿ ರಿಷಿ ಸುನಕ್ 17ನೇ ಸ್ಥಾನದಲ್ಲಿದ್ದು ಅವರ ಸಂಪತ್ತಿನ ಮೌಲ್ಯ ಅಂದಾಜು 790 ಮಿಲಿಯನ್ ಪೌಂಡ್ ಆಗಿದೆ. ಈ ಬಾರಿ ಏಷ್ಯಾದ ಅತಿ ಶ್ರೀಮಂತರ ಪಟ್ಟಿಯಲ್ಲಿರುವವರ ಒಟ್ಟಾರೆ ಸಂಪತ್ತಿನ ಮೌಲ್ಯ 113.2 ಬಿಲಿಯನ್ ಪೌಂಡ್ ಆಗಿದ್ದು ಕಳೆದ ವರ್ಷಕ್ಕಿಂತ 13.5 ಬಿಲಿಯನ್ ಪೌಂಡ್ ಹೆಚ್ಚಾಗಿದೆ.

ಪಟ್ಟಿಯಲ್ಲಿ ಹಿಂದುಜಾ ಕುಟುಂಬ ಉನ್ನತ ಸ್ಥಾನದಲ್ಲಿದ್ದು, ಸತತ ಎಂಟನೇ ಬಾರಿ ಸ್ಥಾನವನ್ನು ಅಲಂಕರಿಸಿದೆ. ಅವರ ಅಂದಾಜು ಆಸ್ತಿ ಮೌಲ್ಯ 30.5 ಬಿಲಿಯನ್ ಪೌಂಡ್ ಆಗಿದ್ದು ಶೇಕಡಾ 3 ಬಿಲಿಯನ್ ಪೌಂಡ್ ನಷ್ಟು ಹೆಚ್ಚಾಗಿದೆ. 

2022ನೇ ಸಾಲಿನ ಏಷ್ಯಾದ ಅತಿ ಶ್ರೀಮಂತರ ಪಟ್ಟಿಯ ಪ್ರತಿಯನ್ನು ಲಂಡನ್ ಮೇಯರ್ ಸಾದಿಕ್ ಖಾನ್ ಹಿಂದುಜಾ ಗ್ರೂಪ್ ನ ಸಹ ಸಂಸ್ಥಾಪಕ ಗೋಪಿಚಂದ ಹಿಂದುಜಾ ಪುತ್ರಿ ರಿತು ಛಾಬ್ರಿಯಾ ಮೊನ್ನೆ ಬುಧವಾರ ರಾತ್ರಿ ವೆಸ್ಟ್ ಮಿನ್ಟರ್ ಪಾರ್ಕ್ ಪ್ಲಾಜಾದಲ್ಲಿ ನಡೆದ 24ನೇ ವಾರ್ಷಿಕ ಏಷ್ಯಾ ಉದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಸ್ತುತಪಡಿಸಿದರು.

ಹಿಂದೂಜಾ ಗ್ರೂಪ್ ಭಾರತೀಯ ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆಯಾಗಿದೆ. ಹನ್ನೊಂದು ವಲಯಗಳಲ್ಲಿ ಗುಂಪು ಪ್ರಸ್ತುತವಾಗಿದೆ. ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿ ಆಲಿವರ್ ಡೌಡೆನ್, ಸಂಸದ, ಡಚಿ ಆಫ್ ಲ್ಯಾಂಕಾಸ್ಟರ್‌ನ ಚಾನ್ಸೆಲರ್, "ಪ್ರತಿ ವರ್ಷ, ಬ್ರಿಟಿಷ್ ಏಷ್ಯನ್ ಸಮುದಾಯವು ಎತ್ತರದಲ್ಲಿ ಬೆಳೆಯುವುದನ್ನು ನಾವು ನೋಡುತ್ತೇವೆ, ಇದು ವೈಯಕ್ತಿಕವಾಗಿ ನನಗೆ ಆಶ್ಚರ್ಯವೇನಿಲ್ಲ. ನನ್ನ ಜೀವನದುದ್ದಕ್ಕೂ, ನಾನು ಬ್ರಿಟಿಷ್ ಏಷ್ಯನ್ ಸಮುದಾಯದ ಕಠಿಣ ಪರಿಶ್ರಮ, ದೃಢತೆ ಮತ್ತು ಉದ್ಯಮಶೀಲತೆಯನ್ನು ನೇರವಾಗಿ ನೋಡಿದ್ದೇನೆ. ನನ್ನ ಇತ್ತೀಚಿನ ಕೆಲಸದಲ್ಲಿ, ನನಗೆ ಬ್ರಿಟಿಷ್ ಏಷ್ಯನ್ ಬಾಸ್ ಇದ್ದಾರೆ, ನನ್ನ ಉತ್ತಮ ಸ್ನೇಹಿತ ರಿಷಿ ಸುನಕ್, ಯುನೈಟೆಡ್ ಕಿಂಗ್‌ಡಮ್‌ನ ಮೊದಲ ಬ್ರಿಟಿಷ್ ಏಷ್ಯಾದ ಪ್ರಧಾನ ಮಂತ್ರಿಯಾಗಿದ್ದಾರೆ ಎಂದು ಡೌಡೆನ್ ಹೇಳಿದರು. 

ರಿಷ್ ಸುನಕ್ ಅವರು ಲಂಡನ್ ನ 10 ಡೌನಿಂಗ್ ಸ್ಟ್ರೀಟ್‌ ನಲ್ಲಿ ಅಕ್ಟೋಬರ್ 25 ರಂದು ಇಂಗ್ಲೆಂಡ್ ನ ಮೊದಲ ಭಾರತೀಯ ಮೂಲದ ಪ್ರಧಾನ ಮಂತ್ರಿಯಾದರು. 42 ವರ್ಷ ವಯಸ್ಸಿನ ಹೂಡಿಕೆ ಬ್ಯಾಂಕರ್ ಆಗಿ ಮಾರ್ಪಟ್ಟಿರುವ ರಾಜಕಾರಣಿ ರಿಷಿ ಸುನಕ್ ಕಳೆದ 210 ವರ್ಷಗಳಲ್ಲಿ ಅತ್ಯಂತ ಕಿರಿಯ ಬ್ರಿಟಿಷ್ ಪ್ರಧಾನಿ ಮತ್ತು ಇಂಗ್ಲೆಂಡ್ ನ ಮೊದಲ ಹಿಂದೂ ಪ್ರಧಾನ ಮಂತ್ರಿಯಾಗಿದ್ದಾರೆ. 

ಲಕ್ಷ್ಮಿ ಮಿತ್ತಲ್ ಮತ್ತು ಅವರ ಪುತ್ರ ಆದಿತ್ಯ (12.8 ಬಿಲಿಯನ್ ಪೌಂಡ್) ಮತ್ತು ಪ್ರಕಾಶ್ ಲೋಹಿಯಾ ಮತ್ತು ಕುಟುಂಬ (8.8 ಬಿಲಿಯನ್ ಪೌಂಡ್) ಮತ್ತು ನಿರ್ಮಲ್ ಸೇಥಿಯಾ (6.5 ಬಿಲಿಯನ್ ಪೌಂಡ್) ಪಟ್ಟಿಯಲ್ಲಿ ಇತರ ಶ್ರೀಮಂತರಾಗಿದ್ದಾರೆ.

ಏಷ್ಯನ್ ಮಾರ್ಕೆಟಿಂಗ್ ಗ್ರೂಪ್ (AMG) ನ ಕಾರ್ಯನಿರ್ವಾಹಕ ಸಂಪಾದಕ ಮತ್ತು ಈವೆಂಟ್‌ನ ನಿರೂಪಕ ಶೈಲೇಶ್ ಆರ್ ಸೋಲಂಕಿ, ಏಷ್ಯನ್ ಶ್ರೀಮಂತ ಪಟ್ಟಿಯನ್ನು ತಜ್ಞರ ತಂಡವು ಎಚ್ಚರಿಕೆಯಿಂದ ಸಂಗ್ರಹಿಸಿದೆ. ಇದು ಬ್ರಿಟನ್‌ನಲ್ಲಿ ಏಷ್ಯಾದ ಸಂಪತ್ತಿಗೆ ನಿರ್ಣಾಯಕ ಮಾರ್ಗದರ್ಶಿಯಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com