ಬ್ರಿಟನ್ ಮತ್ತು ಚೀನಾ ನಡುವಿನ ಸುವರ್ಣಯುಗ ಅಂತ್ಯ: ರಿಷಿ ಸುನಕ್

ಯು.ಕೆ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ಚೀನಾ ತನ್ನ ಸರ್ವಾಧಿಕಾರಿ ಆಳ್ವಿಕೆಯೊಂದಿಗೆ ವ್ಯವಸ್ಥಿತ ಸವಾಲನ್ನು ಒಡ್ಡುತ್ತಿರುವುದರಿಂದ ಅದರ ಕಡೆಗಿನ ಮಾರ್ಗವನ್ನು ಬದಲಾವಣೆ ಮಾಡುವ ಸಮಯ ಬಂದಿದೆ ಎಂದು ಯು.ಕೆ ಪ್ರಧಾನಿ ರಿಷಿ ಸುನಾಕ್ ಹೇಳಿದ್ದಾರೆ.
ರಿಷಿ ಸುನಕ್
ರಿಷಿ ಸುನಕ್

ಲಂಡನ್: ಯುನೈಟೆಡ್ ಕಿಂಗ್ ಡಮ್ ಮತ್ತು ಚೀನಾ ನಡುವಿನ ಇದುವರೆಗಿನ ಸ್ವರ್ಣ ಯುಗ ಮುಗಿಯಿತು. ಯು.ಕೆ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ಚೀನಾ ತನ್ನ ಸರ್ವಾಧಿಕಾರಿ ಆಳ್ವಿಕೆಯೊಂದಿಗೆ ವ್ಯವಸ್ಥಿತ ಸವಾಲನ್ನು ಒಡ್ಡುತ್ತಿರುವುದರಿಂದ ಅದರ ಕಡೆಗಿನ ಮಾರ್ಗವನ್ನು ಬದಲಾವಣೆ ಮಾಡುವ ಸಮಯ ಬಂದಿದೆ ಎಂದು ಯು.ಕೆ ಪ್ರಧಾನಿ ರಿಷಿ ಸುನಾಕ್ ಹೇಳಿದ್ದಾರೆ.

ಶಾಂಘೈ ಪ್ರತಿಭಟನೆಗಳನ್ನು ವರದಿ ಮಾಡುವಾಗ ಬಿಬಿಸಿ ಪತ್ರಕರ್ತರೊಬ್ಬರಿಗೆ ಥಳಿಸಿದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ಸರ್ಕಾರ ಚೀನಾವನ್ನು ಖಂಡಿಸಿತ್ತು. ಇದರ ಬೆನ್ನಲ್ಲೇ ಮಾತನಾಡಿರುವ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್, ಇಂಗ್ಲೆಂಡ್​​ನ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ಚೀನಾ ವ್ಯವಸ್ಥಿತ ಸವಾಲನ್ನು ಒಡ್ಡಿದೆ. ಚೀನಾದೊಂದಿಗಿನ ಸಂಬಂಧಗಳ ಸುವರ್ಣ ಯುಗ ಮುಕ್ತಾಯವಾಗಿದೆ ಎಂದು ಎಚ್ಚರಿಸಿದ್ದಾರೆ.

ವಿದೇಶಾಂಗ ನೀತಿಯ ಕುರಿತಾದ ತಮ್ಮ ಮೊದಲ ಪ್ರಮುಖ ಭಾಷಣದಲ್ಲಿ ಮಾತನಾಡಿದ ರಿಷಿ ಸುನಕ್, ಚೀನಾವು ನಮ್ಮ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ವ್ಯವಸ್ಥಿತ ಸವಾಲನ್ನು ಒಡ್ಡುತ್ತಿದೆ. ವಿಶ್ವ ವ್ಯವಹಾರಗಳಲ್ಲಿ ಜಾಗತಿಕ ಆರ್ಥಿಕ ಸ್ಥಿರತೆ ಅಥವಾ ಹವಾಮಾನ ಬದಲಾವಣೆಯಂತಹ ಸಮಸ್ಯೆಗಳಿಗೆ ಚೀನಾದ ಪ್ರಾಮುಖ್ಯತೆಯನ್ನು ನಾವು ಸುಲಭವಾಗಿ ನಿರ್ಲಕ್ಷಿಲು ಸಾಧ್ಯವಿಲ್ಲ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ಜಪಾನ್ ಮತ್ತು ಇತರ ಅನೇಕರು ಇದನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸ್ಪಷ್ಟವಾಗಿ ಹೇಳುತ್ತೇನೆ, ವ್ಯಾಪಾರವು ಸಾಮಾಜಿಕ ಮತ್ತು ರಾಜಕೀಯ ಸುಧಾರಣೆಗೆ ಕಾರಣವಾಗುತ್ತದೆ ಎಂಬ ಕಲ್ಪನೆಯ ಜೊತೆಗೆ ‘ಸುವರ್ಣ ಯುಗ’ ಎಂದು ಕರೆಯಲ್ಪಡುವ ಯು.ಕೆ-ಚೀನಾ ಸಂಬಂಧ ಮುಗಿಯಿತು. ನಿರಂಕುಶ ಅಧಿಕಾರದ ಕಡೆಗೆ ಹೆಚ್ಚಿನ ವೇಗದಲ್ಲಿ ಸಾಗುತ್ತಿರುವ ಚೀನಾವು ನಮ್ಮ ಮೌಲ್ಯಗಳು ಮತ್ತು ಹಿತಾಸಕ್ತಿಗಳಿಗೆ ವ್ಯವಸ್ಥಿತ ಸವಾಲನ್ನು ಒಡ್ಡುತ್ತದೆ ಎಂದು ನಾವು ಗುರುತಿಸುತ್ತೇವೆ” ಯುಕೆ ಪ್ರಧಾನಿ ತಮ್ಮ ಭಾಷಣದಲ್ಲಿ ಹೇಳಿದರು.

ಚೀನಾದಲ್ಲಿ ಸದ್ಯ ಲಾಕ್ ಡೌನ್ ಹೇರಿರುವ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಮಾತನಾಡಿದ ರಿಷಿ ಸುನಾಕ್, ಜನರ ಸಮಸ್ಯೆಗಳನ್ನು ಕೇಳುವ ಬದಲು ಚೀನಾ ಸರ್ಕಾರವು ಮತ್ತಷ್ಟು ದಮನಕಾರಿ ನಡೆಯನ್ನು ಆಯ್ಕೆ ಮಾಡಿದೆ ಎಂದು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com