ನ್ಯೂಕ್ಲಿಯರ್ ಘಟಕ
ವಿದೇಶ
ರಷ್ಯಾ ವಿರುದ್ಧ ಉಕ್ರೇನ್ ನ್ಯೂಕ್ಲಿಯರ್ ಘಟಕದ ಮುಖ್ಯಸ್ಥರ ಅಪಹರಣ ಆರೋಪ
ಉಕ್ರೇನ್ ನ ನ್ಯೂಕ್ಲಿಯರ್ ಘಟಕದ ಮುಖ್ಯಸ್ಥರನ್ನು ರಷ್ಯಾ ಅಪರಹರಣ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಮಾಸ್ಕೋ: ಉಕ್ರೇನ್ ನ ನ್ಯೂಕ್ಲಿಯರ್ ಘಟಕದ ಮುಖ್ಯಸ್ಥರನ್ನು ರಷ್ಯಾ ಅಪರಹರಣ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಯೂರೋಪ್ ನ ಅತಿ ದೊಡ್ಡ ಪರಮಾಣು ವಿದ್ಯುತ್ ಸ್ಥಾವರವನ್ನು ಈಗ ರಷ್ಯಾ ಆಕ್ರಮಿಸಿಕೊಂಡಿದ್ದು, ರಷ್ಯಾ ಸೇನಾಪಡೆಗಳು ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಪ್ರಧಾನ ನಿರ್ದೇಶಕ ಇಹೋರ್ ಮುರಶೋವ್ ಅವರನ್ನು ಶುಕ್ರವಾರ ಸಂಜೆ ಅಪಹರಣ ಮಾಡಿವೆ ಎಂದು ಉಕ್ರೇನ್ ಸರ್ಕಾರಿ ಪರಮಾಣು ಕಂಪನಿ ಎನರ್ಗೋಟಮ್ ಹೇಳಿದೆ.
ಮುರಶೋವ್ ಅವರ ಕಾರನ್ನು ರಷ್ಯಾದ ಪಡೆಗಳು ತಡೆದು, ಕಣ್ಣಿಗೆ ಬಟ್ಟೆ ಕಟ್ಟು, ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಪರಮಾಣು ಕಂಪನಿ ಎನರ್ಗೋಟಮ್ ಆರೋಪಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ