ಮಾನವ ವಿಕಾಸದ ಬಗ್ಗೆ ಆವಿಷ್ಕಾರ: ಸ್ವೀಡನ್ ನ ಸ್ವಾಂಟೆ ಪಾಬೊಗೆ ವೈದ್ಯಕೀಯ ನೊಬೆಲ್

ಅಳಿವಿನಂಚಿನಲ್ಲಿರುವ ಹೋಮಿನಿನ್‌ಗಳು ಮತ್ತು ಮಾನವ ವಿಕಸನದ ಕುರಿತ  ಸಂಶೋಧನೆಗಳಿಗಾಗಿ ಸ್ವೀಡನ್ ವಿಜ್ಞಾನಿ ಸ್ವಾಂಟೆ ಪಾಬೊ ಅವರಿಗೆ ವೈದ್ಯಕೀಯ ನೊಬೆಲ್ ಪುರಸ್ಕಾರ ಸಂದಿದೆ.
ಸ್ವಾಂಟೆ ಪಾಬೊ
ಸ್ವಾಂಟೆ ಪಾಬೊ

ಸ್ಟಾಕ್‌ಹೋಮ್: ಅಳಿವಿನಂಚಿನಲ್ಲಿರುವ ಹೋಮಿನಿನ್‌ಗಳು ಮತ್ತು ಮಾನವ ವಿಕಸನದ ಕುರಿತ  ಸಂಶೋಧನೆಗಳಿಗಾಗಿ ಸ್ವೀಡನ್ ವಿಜ್ಞಾನಿ ಸ್ವಾಂಟೆ ಪಾಬೊ ಅವರಿಗೆ 2022ನೇ ಸಾಲಿನ ವೈದ್ಯಕೀಯ ನೊಬೆಲ್ ಪುರಸ್ಕಾರ ಸಂದಿದೆ.

ಅಳಿವಿನಂಚಿನಲ್ಲಿರುವ ಹೋಮಿನಿನ್‌ಗಳು ಮತ್ತುಮಾನವ ವಿಕಸನದ ಕುರಿತು ಸ್ವಾಂಟೆ ಪಾಬೊ ನಡೆಸಿರುವ ಸಂಶೋಧನೆಯು ಮನುಷ್ಯನ ದೇಹದೊಳಗಿನ ಪ್ರತಿಕಾಯ ವ್ಯವಸ್ಥೆಯ ಕುರಿತು ಪ್ರಮುಖ ಒಳನೋಟಗಳನ್ನು ಒದಗಿಸುತ್ತದೆ ಎಂದು ನೊಬೆಲ್ ಪ್ರಶಸ್ತಿ ಸಮಿತಿ ಹೇಳಿದೆ. 

ನಿಯಾಂಡರ್ತಲಸ್‌ಗಳಿಂದ ಹೋಮೋ ಸೇಫಿಯನ್ಸ್‌ಗಳಿಗೆ ವಂಶವಾಹಿಗಳ ಹರಿವು ಸಂಭವಿಸಿದೆ ಎಂಬುದನ್ನು ಪಾಬೊ ಹಾಗೂ ಅವರ ತಂಡ ಪತ್ತೆಹಚ್ಚಿದೆ. ಸಹಬಾಳ್ವೆಯ ಕಾಲಘಟ್ಟದಲ್ಲಿ ಇವರು ಒಟ್ಟಿಗೆ ಮಕ್ಕಳನ್ನು ಹೊಂದಿದ್ದರು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟಿದ್ದಾರೆ ಎಂದು ನೊಬೆಲ್‌ ಸಮಿತಿ ಮುಖ್ಯಸ್ಥ ಆನಾ ವೆಡೆಲ್‌ ತಿಳಿಸಿದ್ದಾರೆ.

ಸ್ವಾಂಟೆ ಪಾಬೋ ಅವರು ಮ್ಯಾಕ್ಸ್ ಪ್ಲ್ಯಾಂಕ್ ಇನ್ಸ್ಟಿಟ್ಯೂಟ್ ಫಾರ್ ಎವಲ್ಯೂಷನರಿ ಆಂಥ್ರೊಪಾಲಜಿಯ ನಿರ್ದೇಶಕರಾಗಿದ್ದು, ಅವರ ತಂದೆ ಸೂನ್‌ ಬರ್ಗ್‌ಸ್ಟ್ರಾಮ್‌ ಕೂಡ ವೈದ್ಯಕೀಯ ವಿಭಾಗದಲ್ಲಿ ನೊಬೆಲ್‌ ಪ್ರಶಸ್ತಿ ಪಡೆದಿದ್ದರು. 1982ರಲ್ಲಿ ಅವರಿಗೆ ಈ ಪುರಸ್ಕಾರ ಒಲಿದಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com