ಭಾರತದ ಕೆಮ್ಮಿನ ಸಿರಪ್ ಸೇವನೆ ಬಳಿಕ 66 ಮಕ್ಕಳ ಸಾವು, ಔಷಧಿ ಪರೀಕ್ಷಿಸಲಾಗುತ್ತಿದೆ ಎಂದ WHO

ಭಾರತದಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ನಾಲ್ಕು ಕೆಮ್ಮು ಮತ್ತು ಶೀತ ಸಿರಪ್‌ಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಎಚ್ಚರಿಕೆ ನೀಡಿದ್ದು, ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಅವು ಸಂಬಂಧಿಸಿರಬಹುದು ಎಂದು ಎಚ್ಚರಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಭಾರತದಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ನಾಲ್ಕು ಕೆಮ್ಮು ಮತ್ತು ಶೀತ ಸಿರಪ್‌ಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಬುಧವಾರ ಎಚ್ಚರಿಕೆ ನೀಡಿದ್ದು, ಗ್ಯಾಂಬಿಯಾದಲ್ಲಿ 66 ಮಕ್ಕಳ ಸಾವಿಗೆ ಅವು ಸಂಬಂಧಿಸಿರಬಹುದು ಎಂದು ಎಚ್ಚರಿಸಿದೆ.

ನಾಲ್ಕು ಉತ್ಪನ್ನಗಳ ಪ್ರತಿ ಮಾದರಿಗಳ ಪ್ರಯೋಗಾಲಯ ವಿಶ್ಲೇಷಣೆಯು ಅವುಗಳು ಸ್ವೀಕಾರಾರ್ಹವಲ್ಲದ ಪ್ರಮಾಣದ ಡೈಥಿಲೀನ್ ಗ್ಲೈಕಾಲ್ ಮತ್ತು ಎಥಿಲೀನ್ ಗ್ಲೈಕಾಲ್ ಅನ್ನು ಮಾಲಿನ್ಯಕಾರಕಗಳಾಗಿ ಒಳಗೊಂಡಿವೆ ಎಂದು ಖಚಿತಪಡಿಸುತ್ತದೆ ಎಂದು ಡಬ್ಲ್ಯುಎಚ್‌ಒ ವೈದ್ಯಕೀಯ ಉತ್ಪನ್ನ ಎಚ್ಚರಿಕೆಯಲ್ಲಿ ತಿಳಿಸಿದೆ.

ಭಾರತದಲ್ಲಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ 4 ಕೆಮ್ಮು ಹಾಗೂ ಶೀತದ ಸಿರಪ್‌ಗಳ (Cough Syrup) ಕುರಿತು ವಿಶ್ವ ಆರೋಗ್ಯ ಸಂಸ್ಥೆ (WHO) ಬುಧವಾರ ಎಚ್ಚರಿಕೆ ನೀಡಿದೆ. ಈ ಸಿರಪ್‌ಗಳು ಆಫ್ರಿಕಾ ಖಂಡದ ಗ್ಯಾಂಬಿಯಾದಲ್ಲಿ (Gambia) 66 ಮಕ್ಕಳ ಸಾವಿಗೆ ಸಂಬಂಧಪಟ್ಟಿವೆ ಎಂದು ತಿಳಿಸಿದೆ. ಈ ಸಿರಪ್‌ಗಳ ಮಾದರಿಗಳನ್ನು ಸಂಗ್ರಹಿಸಿ ಈಗಾಗಲೇ ಪ್ರಯೋಗಾಲಯಗಳಲ್ಲಿ ಪರೀಕ್ಷೆಯನ್ನು ನಡೆಸಲಾಗಿದೆ. ಅವುಗಳ ವಿಶ್ಲೇಷಣೆಯಲ್ಲಿ ಹಾನಿಕಾರಕ ಅಂಶಗಳು ಒಳಗೊಂಡಿರುವುದು ಕಂಡುಬಂದಿರುವುದಾಗಿ ತಿಳಿಸಿದೆ.

4 ಉತ್ಪನ್ನಗಳ ಮಾದರಿಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದಾಗ ಅವು ಸ್ವೀಕಾರಾರ್ಹವಲ್ಲದ ಪ್ರಮಾಣದಲ್ಲಿ ಡೈಥಿಲೀನ್ ಗ್ಲೈಕೋಲ್ ಹಾಗೂ ಎಥಿಲೀನ್ ಗ್ಲೈಕೋಲ್ ಅನ್ನು ಮಾಲಿನ್ಯಕಾರಕಗಳಾಗಿ ಬಳಸಲಾಗಿದೆ ಎಂಬುದು ಖಚಿತವಾಗಿದೆ ಎಂದು ಡಬ್ಲ್ಯುಹೆಚ್‌ಒ ಎಚ್ಚರಿಕೆಯಲ್ಲಿ ತಿಳಿಸಿದೆ. 

ಸದ್ಯ ಈ ಉತ್ಪನ್ನಗಳನ್ನು ಬಳಸಿರುವುದರ ಅಡ್ಡ ಪರಿಣಾಮ ಗ್ಯಾಂಬಿಯಾದಲ್ಲಿ ಮಾತ್ರವೇ ಇಲ್ಲಿಯವರೆಗೆ ಕಂಡುಬಂದಿದೆ. ಈ ಉತ್ಪನ್ನಗಳನ್ನು ಇತರ ದೇಶಗಳಿಗೂ ವಿತರಿಸಲಾಗಿದೆ ಎಂಬುದು ತಿಳಿದುಬಂದಿದೆ.

ಈ ಕುರಿತು ಮಾತನಾಡಿರುವ ಡಬ್ಲ್ಯುಎಚ್‌ಒ (WHO) ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, 'ನಾಲ್ಕು ಶೀತ ಮತ್ತು ಕೆಮ್ಮು ಸಿರಪ್‌ಗಳು “ತೀವ್ರವಾದ ಮೂತ್ರಪಿಂಡದ ತೊಂದರೆಗಳು ಮತ್ತು ಮಕ್ಕಳಲ್ಲಿ 66 ಸಾವುಗಳೊಂದಿಗೆ ಸಂಭಾವ್ಯವಾಗಿ ಸಂಬಂಧ ಹೊಂದಿವೆ. ಈ ಜೀವಗಳ ನಷ್ಟವು ಅವರ ಕುಟುಂಬಗಳಿಗೆ ಹೃದಯ ವಿದ್ರಾವಕವಾಗಿದೆ ಎಂದು ಹೇಳಿದ್ದಾರೆ.ಡಬ್ಲ್ಯುಎಚ್‌ಒ ಕೂಡ “ಭಾರತದಲ್ಲಿನ ಕಂಪನಿ ಮತ್ತು ನಿಯಂತ್ರಕ ಅಧಿಕಾರಿಗಳೊಂದಿಗೆ ಹೆಚ್ಚಿನ ತನಿಖೆ ನಡೆಸುತ್ತಿದೆ ಎಂದು ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com