ವಿಶ್ವಸಂಸ್ಥೆಯ ತುರ್ತು ಸಾಮಾನ್ಯ ಸಭೆ: ರಷ್ಯಾವನ್ನು 'ಭಯೋತ್ಪಾದಕ ರಾಷ್ಟ್ರ' ಎಂದು ಖಂಡಿಸಿದ ಉಕ್ರೇನ್

ಪಾಶ್ಚಿಮಾತ್ಯ ಶಕ್ತಿಗಳು ರಷ್ಯಾವನ್ನು ಪ್ರತ್ಯೇಕವಾಗಿಡಬೇಕೆಂದು ಹೇಳುತ್ತಿರುವಾಗ, ಉಕ್ರೇನ್ ಸೋಮವಾರ ನಡೆದ ತುರ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರಷ್ಯಾವನ್ನು "ಭಯೋತ್ಪಾದಕ ದೇಶ" ಎಂದು ಖಂಡಿಸಿ ಘೋಷಿಸಿದೆ.
ನಿನ್ನೆ ಉಕ್ರೇನ್‌ನ ಕೈವ್‌ನಲ್ಲಿ ರಷ್ಯಾದ ಶೆಲ್ ದಾಳಿಯ ದೃಶ್ಯವನ್ನು ಪೊಲೀಸರು ಪರಿಶೀಲಿಸುತ್ತಾರೆ
ನಿನ್ನೆ ಉಕ್ರೇನ್‌ನ ಕೈವ್‌ನಲ್ಲಿ ರಷ್ಯಾದ ಶೆಲ್ ದಾಳಿಯ ದೃಶ್ಯವನ್ನು ಪೊಲೀಸರು ಪರಿಶೀಲಿಸುತ್ತಾರೆ

ಯುನೈಟೆಡ್ ನೇಷನ್ಸ್: ಪಾಶ್ಚಿಮಾತ್ಯ ಶಕ್ತಿಗಳು ರಷ್ಯಾವನ್ನು ಪ್ರತ್ಯೇಕವಾಗಿಡಬೇಕೆಂದು ಹೇಳುತ್ತಿರುವಾಗ, ಉಕ್ರೇನ್ ಸೋಮವಾರ ನಡೆದ ತುರ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರಷ್ಯಾವನ್ನು "ಭಯೋತ್ಪಾದಕ ದೇಶ" ಎಂದು ಖಂಡಿಸಿ ಘೋಷಿಸಿದೆ.

ರಷ್ಯಾ ಮತ್ತೆ ಭಯೋತ್ಪಾದಕ ದೇಶ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ. ಅದನ್ನು ಪ್ರಬಲವಾದ ರೀತಿಯಲ್ಲಿ ತಡೆಯಬೇಕು ಎಂದು ವಿಶ್ವಸಂಸ್ಥೆಗೆ ಉಕ್ರೇನ್‌ನ ರಾಯಭಾರಿ ಸರ್ಗಿ ಕಿಸ್ಲಿತ್ಸ್ಯ ಒತ್ತಾಯಿಸಿದ್ದಾರೆ. ರಷ್ಯಾ ದಾಳಿಯಲ್ಲಿ ಅವರ ಕುಟುಂಬವೇ ಸಿಲುಕಿದ್ದನ್ನು ವಿವರಿಸಿದರು.

ದುರದೃಷ್ಟವಶಾತ್, ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಅಸ್ಥಿರ ಮತ್ತು ಹುಚ್ಚುತನದ ಸರ್ವಾಧಿಕಾರವು ಇರುವವರೆಗೂ ನೀವು ಸ್ಥಿರ ಮತ್ತು ವಿವೇಕಯುತ ಶಾಂತಿ ರಾಷ್ಟ್ರಕ್ಕಾಗಿ ಕರೆ ನೀಡಲು ಸಾಧ್ಯವಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ರಷ್ಯಾದ ವಾಸಿಲಿ ನೆಬೆನ್ಜ್ಯಾ ಅವರು ಕ್ಷಿಪಣಿ ದಾಳಿಯನ್ನು ನೇರವಾಗಿ ಉಲ್ಲೇಖಿಸದೆ ಉಕ್ರೇನಿಯನ್ ಪ್ರದೇಶಗಳನ್ನು ತಮ್ಮ ದೇಶ ಸ್ವಾಧೀನಪಡಿಸಿಕೊಂಡದ್ದನ್ನು ಸಮರ್ಥಿಸಿಕೊಂಡರು. 

ಪೂರ್ವ ಉಕ್ರೇನ್‌ನಲ್ಲಿ ನಮ್ಮ ಸಹೋದರ ಸಹೋದರಿಯರನ್ನು ರಕ್ಷಿಸಲು ನಾವು ಪ್ರಯತ್ನಿಸುತ್ತಿರುವಾಗ ನಮ್ಮ ಮೇಲೆ ಆರೋಪ ಮಾಡಲಾಗುತ್ತಿದೆ ಎಂದರು. 

ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನಕ್ಕೆ ಮುನ್ನ ಅದರ ಮುಖ್ಯಸ್ಥ ಆಂಟೋನಿಯೊ ಗುಟೆರೆಸ್ ರಷ್ಯಾದ ದಾಳಿಯನ್ನು "ಯುದ್ಧದ ಸ್ವೀಕಾರಾರ್ಹವಲ್ಲದ ಉಲ್ಬಣ" ಎಂದು ವಿವರಿಸಿದ್ದಾರೆ. ಈ ಮಧ್ಯೆ, ಅಮೆರಿಕ ಅಧ್ಯಕ್ಷ ಜೋ ಬಿಡೆನ್ ರಷ್ಯಾ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಯುದ್ಧದ ಸಂಪೂರ್ಣ ಕ್ರೂರತೆ ಪ್ರದರ್ಶಿಸಿದ್ದಾರೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com