ನ್ಯೂಯಾರ್ಕ್ ನಲ್ಲಿ ದೀಪಾವಳಿ ಹಬ್ಬಕ್ಕೆ ಶಾಲೆಗಳಿಗೆ ರಜೆ ಘೋಷಣೆ

ಮುಂದಿನ ವರ್ಷ ಅಂದರೆ 2023 ರಿಂದ ನ್ಯೂಯಾರ್ಕ್ ನಗರದ ಸರ್ಕಾರಿ ಶಾಲೆಗಳಿಗೆ ದೀಪಾವಳಿ ಹಬ್ಬದಂದು ಸಾರ್ವಜನಿಕ ರಜೆ ನೀಡಲಾಗುವುದು ಎಂದು ಮೇಯರ್ ಎರಿಕ್ ಆಡಮ್ಸ್ ಅವರು ಗುರುವಾರ ಘೋಷಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್: ಮುಂದಿನ ವರ್ಷ ಅಂದರೆ 2023 ರಿಂದ ನ್ಯೂಯಾರ್ಕ್ ನಗರದ ಸರ್ಕಾರಿ ಶಾಲೆಗಳಿಗೆ ದೀಪಾವಳಿ ಹಬ್ಬದಂದು ಸಾರ್ವಜನಿಕ ರಜೆ ನೀಡಲಾಗುವುದು ಎಂದು ಮೇಯರ್ ಎರಿಕ್ ಆಡಮ್ಸ್ ಅವರು ಗುರುವಾರ ಘೋಷಿಸಿದ್ದಾರೆ.

"ನಾವು ದೀಪಾವಳಿ ಎಂದರೇನು ಎಂಬುದರ ಕುರಿತು ಕಲಿಯಲು ಮಕ್ಕಳನ್ನು ಪ್ರೋತ್ಸಾಹಿಸುತ್ತೇವೆ ಎಂದು ಆಡಮ್ಸ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನ್ಯೂಯಾರ್ಕ್ ಅಸೆಂಬ್ಲಿ ಸದಸ್ಯೆ ಜೆನಿಫರ್ ರಾಜ್‌ಕುಮಾರ್ ಅವರು, "ಬೆಳಕಿನ ಹಬ್ಬವಾದ ದೀಪಾವಳಿಯನ್ನು ಆಚರಿಸುವ ಹಿಂದೂ, ಬೌದ್ಧ, ಸಿಖ್ ಮತ್ತು ಜೈನ ಧರ್ಮಗಳ 200,000 ಕ್ಕೂ ಹೆಚ್ಚು ನ್ಯೂಯಾರ್ಕರನ್ನು ಗುರುತಿಸುವ ಸಮಯ ಬಂದಿದೆ" ಎಂದು ಹೇಳಿದರು.

ಇದು ಭಾರತೀಯ-ಅಮೆರಿಕನ್ ಸಮುದಾಯದ ಬಹುದಿನಗಳ ಬೇಡಿಕೆಯಾಗಿತ್ತು. ಈ ಮನ್ನಣೆಯು ನ್ಯೂಯಾರ್ಕ್ ನಗರದಲ್ಲಿನ ವೈವಿಧ್ಯತೆ ಮತ್ತು ಬಹುತ್ವಕ್ಕೆ ಆಳವಾದ ಅರ್ಥವನ್ನು ನೀಡುತ್ತದೆ ಮತ್ತು ಎಲ್ಲಾ ವರ್ಗದ ಜನರಿಗೆ ಭಾರತೀಯ ನೀತಿ ಮತ್ತು ಪರಂಪರೆಯನ್ನು ಅನುಭವಿಸಲು, ಆಚರಿಸಲು ಮತ್ತು ಆನಂದಿಸಲು ಅನುವು ಮಾಡಿಕೊಡುತ್ತದೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲ್ ಜನರಲ್ ರಣಧೀರ್ ಜೈಸ್ವಾಲ್ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com