ಚೀನಾದಲ್ಲಿ ಷಿ ಜಿನ್ಪಿಂಗ್ ಪಾರುಪತ್ಯ ಖಾತ್ರಿ, ಲೀ ಕೆಕಿಯಾಂಗ್ ನ 2ನೇ ಸ್ಥಾನಕ್ಕೆ ಕತ್ತರಿ! 

ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದಲ್ಲಿ ಅಧ್ಯಕ್ಷ ಷಿ ಜಿನ್ಪಿಂಗ್ ಅವರ ಪರಮಾಧಿಕಾರ ಮುಂದುವರೆದಿದ್ದು, ಮೂರನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತಗೊಂಡಿದೆ.
ಶಿ ಜಿನ್ಪಿಂಗ್
ಶಿ ಜಿನ್ಪಿಂಗ್

ಬೀಜಿಂಗ್: ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದಲ್ಲಿ ಅಧ್ಯಕ್ಷ ಷಿ ಜಿನ್ಪಿಂಗ್ ಅವರ ಪರಮಾಧಿಕಾರ ಮುಂದುವರೆದಿದ್ದು, ಮೂರನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತಗೊಂಡಿದೆ.

ಪಕ್ಷದ ಕಾಂಗ್ರೆಸ್ 2 ನೇ ಪ್ರಬಲ, ಹಿರಿಯ ನಾಯಕನಾಗಿದ್ದ ಲೀ ಕೆಕಿಯಾಂಗ್ ಅವರನ್ನು ಹಿರಿಯ ನಾಯಕತ್ವದಿಂದ ತೆಗೆದುಹಾಕಿದೆ. ಲೀ ಕೆಕಿಯಾಂಗ್ ಮಾರುಕಟ್ಟೆ ಆಧಾರಿತ ಸುಧಾರಣೆಗಳ ಪ್ರತಿಪಾದಕರಾಗಿದ್ದು, ಷಿ ತತ್ವಗಳಿಗೆ ವಿರುದ್ಧವಾದ ಆಲೋಚನೆಗಳನ್ನು ಹೊಂದಿರುವ ನಾಯಕರಾಗಿದ್ದಾರೆ. 

ಸಪ್ತಾಹ ಸಭೆ ಶನಿವಾರ ಮುಕ್ತಾಯಗೊಂಡಿದ್ದು, ಆರ್ಥಿಕತೆಗೆ ಷಿ ಜಿನ್ಪಿಂಗ್ ಅವರ ಪ್ರಮುಖ ನೀತಿ ಉಪಕ್ರಮಗಳು ಸಭೆಯಲ್ಲಿ ಚರ್ಚೆಯಾಗಿದ್ದು, ವಿಶ್ಲೇಷಕರು ಈ ಸಭೆಯಲ್ಲಿ ಷಿ ಜಿನ್ಪಿಂಗ್ ಅವರ ಪರಮಾಧಿಕಾರಕ್ಕೆ ಬ್ರೇಕ್ ಬೀಳುವ ಸಾಧ್ಯತೆಗಳನ್ನು ಎದುರು ನೋಡುತ್ತಿದ್ದರು ಆದರೆ ಶನಿವಾರ ಅಂತ್ಯಗೊಂಡ ಸಭೆಯಲ್ಲಿ ಅಂತಹ ಯಾವುದೇ ಲಕ್ಷಗಣಗಳೂ ಗೋಚರಿಸಲಿಲ್ಲ. ಇತ್ತ ಲೀ ಕೆಕಿಯಾಂಗ್ ಅವರನ್ನು 2ನೇ ಪ್ರಭಾವಿ ಹುದ್ದೆಯಿಂದ ಕೆಳಗಿಳಿಸಿದ್ದೂ ಅನಿರೀಕ್ಷಿತವೇನು ಆಗಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com