ಕರಾಳ ಶುಕ್ರವಾರ: ಮಸೀದಿಯಲ್ಲಿ ಭೀಕರ ಸ್ಫೋಟ; ಹಿರಿಯ ಅಫ್ಘಾನ್ ಧರ್ಮಗುರು ಸೇರಿ 18 ಮಂದಿ ಸಾವು!

ಪಶ್ಚಿಮ ಅಫ್ಘಾನಿಸ್ತಾನದ ಜನನಿಬಿಡ ಮಸೀದಿಯೊಂದರಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಪ್ರಮುಖ ಧರ್ಮಗುರು ಸೇರಿದಂತೆ 18 ಮಂದಿ ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲೆ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಸ್ಫೋಟದ ಸ್ಥಳ
ಸ್ಫೋಟದ ಸ್ಥಳ

ಹೆರಾತ್: ಪಶ್ಚಿಮ ಅಫ್ಘಾನಿಸ್ತಾನದ ಜನನಿಬಿಡ ಮಸೀದಿಯೊಂದರಲ್ಲಿ ಶುಕ್ರವಾರ ಸಂಭವಿಸಿದ ಸ್ಫೋಟದಲ್ಲಿ ಪ್ರಮುಖ ಧರ್ಮಗುರು ಸೇರಿದಂತೆ 18 ಮಂದಿ ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲೆ ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆಯ ಸಮಯದಲ್ಲಿ ಪಶ್ಚಿಮ ನಗರವಾದ ಹೆರಾತ್‌ನಲ್ಲಿರುವ ಗುಜರ್ಗಾ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ. ಪ್ರತಿ ಶುಕ್ರವಾರ ಮುಸ್ಲಿಂ ಧಾರ್ಮಿಕ ವಾರವಾಗಿದ್ದು ಮಸೀದಿಗಳು, ಪ್ರಾರ್ಥನಾ ಸ್ಥಳಗಳಲ್ಲಿ ಹೆಚ್ಚು ಜನಸಂದಣಿ ಇರುತ್ತದೆ.

ಅಫ್ಘಾನಿಸ್ತಾನದ ಪಾಶ್ಚಿಮಾತ್ಯ ಬೆಂಬಲಿತ ಸರ್ಕಾರಗಳ ವಿರುದ್ಧದ ಟೀಕೆಯಿಂದಾಗಿ ಅಫ್ಘಾನಿಸ್ತಾನದಾದ್ಯಂತ ಹೆಸರುವಾಸಿಯಾಗಿದ್ದ ಪ್ರಮುಖ ಧರ್ಮಗುರು ಮುಜಿಬ್-ಉಲ್ ರೆಹಮಾನ್ ಅನ್ಸಾರಿ ಅವರು ಸ್ಪೋಟದಲ್ಲಿ ಮೃತಪಟ್ಟಿದ್ದಾರೆ.

ಅನ್ಸಾರಿ ಅವರು ತಾಲಿಬಾನ್‌ಗೆ ನಿಕಟವರ್ತಿಯಾಗಿದ್ದು ಅವರ ಸಾವನ್ನು ಮುಖ್ಯ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಖಚಿತಪಡಿಸಿದ್ದಾರೆ.

ಅಫ್ಘಾನಿಸ್ತಾನದ ಆಂತರಿಕ ಸಚಿವಾಲಯದ ವಕ್ತಾರರು ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿದ್ದು ಹಲವು ಗಾಯಗೊಂಡಿದ್ದಾರೆ ಎಂದು ಹೇಳಿದರು. ಇನ್ನು ಸ್ಫೋಟದ ಹೊಣೆಗಾರಿಕೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.

ಈ ಹಿಂದಿನ ಮಸೀದಿ ದಾಳಿಗಳನ್ನು ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಗುಂಪು ಹೊತ್ತುಕೊಂಡಿತ್ತು. ಈ ಸಂಘಟನೆ ತಾಲಿಬಾನ್ ಅನ್ನು ಗುರಿಯಾಗಿಸಿಕೊಂಡು ಅಫ್ಘಾನಿಸ್ತಾನದಲ್ಲಿ ಧಾರ್ಮಿಕ ಮತ್ತು ಜನಾಂಗೀಯ ಅಲ್ಪಸಂಖ್ಯಾತರ ವಿರುದ್ಧ ಸರಣಿ ದಾಳಿಗಳನ್ನು ನಡೆಸುತ್ತಿದೆ.

ಹೆರಾತ್ ಮಸೀದಿಯು ಸುನ್ನಿ ಮುಸ್ಲಿಂರ ಬಾಹುಳ್ಯದಲ್ಲಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರದ ದಿನಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಹಲವಾರು ಮಸೀದಿಗಳ ಮೇಲೆ ಆತ್ಮಹುತಿ ದಾಳಿ ಮಾಡಿದೆ. ಇಸ್ಲಾಮಿಕ್ ಸ್ಟೇಟ್ ಬೆಂಬಲಿಗರು ಸುನ್ನಿಗಳು ಮತ್ತು ಶಿಯಾಗಳನ್ನು ನಾಸ್ತಿಕರು ಎಂದು ಪರಿಗಣಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com