ಸೆಪ್ಟೆಂಬರ್ 19ಕ್ಕೆ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅಂತ್ಯಕ್ರಿಯೆ

ನಿನ್ನೆ ವಯೋ ಸಹಜ ಕಾಯಿಲೆಯಿಂದ ಮೃತಪಟ್ಟ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಅಂತ್ಯಕ್ರಿಯೆ ಸೆಪ್ಟೆಂಬರ್ 19 ರಂದು ಸೆಂಟ್ರಲ್ ಲಂಡನ್ ನ ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ ಭಾರೀ ಜನಸ್ತೋಮದ ನಡುವೆ ನಡೆಯುವ ಸಾಧ್ಯತೆಯಿದೆ.
ರಾಣಿ ಎಲಿಜಬೆತ್
ರಾಣಿ ಎಲಿಜಬೆತ್

ಲಂಡನ್: ನಿನ್ನೆ ವಯೋ ಸಹಜ ಕಾಯಿಲೆಯಿಂದ ಮೃತಪಟ್ಟ ಬ್ರಿಟನ್ ರಾಣಿ ಎರಡನೇ ಎಲಿಜಬೆತ್ ಅವರ ಅಂತ್ಯಕ್ರಿಯೆ ಸೆಪ್ಟೆಂಬರ್ 19 ರಂದು ಸೆಂಟ್ರಲ್ ಲಂಡನ್ ನ ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ ಭಾರೀ ಜನಸ್ತೋಮದ ನಡುವೆ ನಡೆಯುವ ಸಾಧ್ಯತೆಯಿದೆ.

ಎರಡು ನಿಮಿಷ ಮೌನಾಚರಣೆಯ ಮೂಲಕ ರಾಣಿಯ ಪಾರ್ಥಿವ ಶರೀರ ಇರಿಸಿದ ಶವಪೆಟ್ಟಿಗೆಯನ್ನು ಫಿರಂಗಿಯಲ್ಲಿ ಅಬ್ಬೆಗೆ ಕೊಂಡೊಯ್ಯುವುದರಿಂದ ರಾಜಮನೆತನದ ಹಿರಿಯ ಸದಸ್ಯರು, ಅದರ ಹಿಂದೆ ನಡೆಯುವ ಸಾಧ್ಯತೆಯಿದೆ.

ನಂತರ ರಾಣಿಯ ಶವಪೆಟ್ಟಿಗೆಯನ್ನು ವಿಂಡ್ಸರ್ ಕ್ಯಾಸಲ್‌ಗೆ ಕೊಂಡೊಯ್ದು,  6ನೇ  ಕಿಂಗ್ ಜಾರ್ಜ್ ಸ್ಮಾರಕ ಪ್ರಾರ್ಥನಾ ಮಂದಿರದಲ್ಲಿ ಪತಿ ಪ್ರಿನ್ಸ್ ಫಿಲಿಪ್ ಸೇರಿದಂತೆ ಸಹೋಧರಿ ಮಾರ್ಗರೇಟ್, ತಾಯಿ ಎಲಿಜಬೆತ್ ಮತ್ತು ತಂದೆ 5ನೇ ಜಾರ್ಜ್ ಅವರ ಸಮಾಧಿಯೊಂದಿಗೆ ರಾಣಿಯ ಸಮಾಧಿ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 

ಬ್ರಿಟನ್ ಇತಿಹಾಸದಲ್ಲಿ ಅತ್ಯಂತ ಹೆಚ್ಚಿನ ದಿನ ಆಳ್ವಿಕೆ ನಡೆಸಿದ ಎರಡನೇ ಎಲಿಜಬೆತ್ ರಾಣಿ 96ನೇ ವಯಸ್ಸಿನಲ್ಲಿ ಗುರುವಾರ ನಿಧನರಾದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com