ರಷ್ಯಾ ನಾಚಿಕೆಯಿಲ್ಲದೆ ಉಕ್ರೇನ್ ನಲ್ಲಿ ವಿಶ್ವಸಂಸ್ಥೆ ನಿಯಮ ಉಲ್ಲಂಘನೆ ಮಾಡಿದೆ: ಬೈಡೆನ್
ಅಮೇರಿಕ ಅಧ್ಯಕ್ಷ ಜೋ ಬೈಡನ್ ವಿಶ್ವಸಂಸ್ಥೆಯಲ್ಲಿ ಮಾತನಾಡಿದ್ದು, ರಷ್ಯಾ ಉಕ್ರೇನ್ ನಲ್ಲಿ ನಾಚಿಕೆಯಿಲ್ಲದೇ ವಿಶ್ವಸಂಸ್ಥೆ ನಿಯಮ ಉಲ್ಲಂಘನೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Published: 22nd September 2022 12:42 AM | Last Updated: 22nd September 2022 01:18 PM | A+A A-

ಅಮೆರಿಕ ಅಧ್ಯಕ್ಷ ಜೋ ಬೈಡೆನ್
ವಿಶ್ವಸಂಸ್ಥೆ: ಅಮೇರಿಕ ಅಧ್ಯಕ್ಷ ಜೋ ಬೈಡನ್ ವಿಶ್ವಸಂಸ್ಥೆಯಲ್ಲಿ ಮಾತನಾಡಿದ್ದು, ರಷ್ಯಾ ಉಕ್ರೇನ್ ನಲ್ಲಿ ನಾಚಿಕೆಯಿಲ್ಲದೇ ವಿಶ್ವಸಂಸ್ಥೆ ನಿಯಮ ಉಲ್ಲಂಘನೆ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಉಕ್ರೇನ್ ನ ಪ್ರತಿರೋಧವನ್ನು ಬೆಂಬಲಿಸುವಂತೆ ಜಾಗತಿಕ ಸಮುದಾಯಕ್ಕೆ ಬೈಡೆನ್ ಕರೆ ನೀಡಿದ್ದಾರೆ.
7 ತಿಂಗಳಿಂದ ರಷ್ಯಾದ ಅತಿಕ್ರಮಣವನ್ನು ಖಂಡಿಸಿರುವ ಬೈಡೆನ್, ನಾಗರಿಕರೆಡೆಗೆ ರಷ್ಯಾದ ದೌರ್ಜನ್ಯ ಹಾಗೂ ಉಕ್ರೇನ್ ಹಾಗೂ ಅದರ ಸಂಸ್ಕೃತಿಯನ್ನು ನಾಶ ಮಾಡುವ ಯತ್ನ ಗಾಬರಿ ಹುಟ್ಟಿಸುತ್ತದೆ.
ಇನ್ನು ಪುಟಿನ್ ಅವರ ಇತ್ತೀಚಿನ ಹೇಳಿಕೆಗಳ ಬಗ್ಗೆಯೂ ಮಾತನಾಡಿರುವ ಬೈಡೆನ್, ಪುಟಿನ್ ಯುರೋಪ್ ಗೆ ಹೊಸದಾಗಿ ಅಣು ಬೆದರಿಕೆ ಹಾಕಿದ್ದು, ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣ ಮಾಡದಿರುವುದಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿರುವ ರಾಷ್ಟ್ರದ ನಾಯಕರಾಗಿ ಪುಟಿನ್ ಅವರ ಈ ರೀತಿಯ ಹೇಳಿಕೆಗಳು ರಷ್ಯಾಗೆ ತನ್ನ ಜವಾಬ್ದಾರಿಯೆಡೆಗೆ ಅಜಾಗರೂಕ ನಿರ್ಲಕ್ಷ್ಯವನ್ನು ತೋರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾಗಶಃ ಸೇನಾ ಸನ್ನದ್ಧತೆಗೆ ರಷ್ಯಾ ಅಧ್ಯಕ್ಷ ಪುಟಿನ್ ಆದೇಶ
ಇನ್ನು ಉಕ್ರೇನ್ ನಲ್ಲಿ ಒತ್ತಾಯಪೂರ್ವಕವಾಗಿ ವಶಕ್ಕೆ ಪಡೆದಿರುವ ಪ್ರಾಂತ್ಯದಲ್ಲಿ ಈ ವಾರದಲ್ಲಿ "ಜನಾಭಿಪ್ರಾಯ"ವನ್ನು ನಿಗದಿಪಡಿಸಿರುವ ರಷ್ಯಾದ ನಡೆಯನ್ನೂ ಬೈಡೆನ್ ಟೀಕಿಸಿದ್ದಾರೆ.