ಇನ್ನು ಮುಂದೆ ಅವರು ನಮ್ಮವರೇ; ಉಕ್ರೇನ್ ನ 4 ಪ್ರದೇಶ ಸ್ವಾಧೀನಪಡಿಸಿಕೊಂಡ ಬಗ್ಗೆ ಪುಟಿನ್ ಘೋಷಣೆ

ಉಕ್ರೇನ್ ನಿಂದ ವಶಪಡಿಸಿಕೊಂಡ ನಾಲ್ಕು ಪ್ರದೇಶಗಳನ್ನು ಅಧಿಕೃತವಾಗಿ ಸ್ವಾಧೀನಪಡಿಸಿಕೊಂಡಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದಾರೆ.
ವ್ಲಾಡಿಮಿರ್ ಪುಟಿನ್
ವ್ಲಾಡಿಮಿರ್ ಪುಟಿನ್

ಮಾಸ್ಕೊ: ಉಕ್ರೇನ್ ನಿಂದ ವಶಪಡಿಸಿಕೊಂಡ ನಾಲ್ಕು ಪ್ರದೇಶಗಳನ್ನು ಅಧಿಕೃತವಾಗಿ ಸ್ವಾಧೀನಪಡಿಸಿಕೊಂಡಿರುವುದಾಗಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಘೋಷಿಸಿದ್ದಾರೆ.

ಉಕ್ರೇನ್‌ನ ಖೆರ್ಸನ್, ಝಪೊರಿಝಿಯಾ, ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳನ್ನು ಔಪಚಾರಿಕವಾಗಿ ಸ್ವಾಧೀನಪಡಿಸಿಕೊಂಡಿದ್ದು ರಷ್ಯಾದ ನಾಲ್ಕು ಹೊಸ ಪ್ರದೇಶಗಳು ಇವೆ ಎಂದು ಪುಟಿನ್ ಘೋಷಿಸಿದರು.

ಉಕ್ರೇನ್‌ನೊಂದಿಗಿನ ಏಳು ತಿಂಗಳ ಸಂಘರ್ಷದ ಸಮಯದಲ್ಲಿ ನಾಲ್ಕು ಪ್ರದೇಶಗಳನ್ನು ಮಾಸ್ಕೋದ ಪಡೆಗಳು ಭಾಗಶಃ ವಶಪಡಿಸಿಕೊಂಡಿದ್ದವು. ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹಣೆಗಳನ್ನು ನಡೆಸಿದ ನಂತರ ರಷ್ಯಾ ಸ್ವಾಧೀನಪಡಿಸಿಕೊಂಡಿತು. ಇದೇ ವೇಳೆ ಪಾಶ್ಚಿಮಾತ್ಯ ಸರ್ಕಾರಗಳು ಮತ್ತು ಕೀವ್, ಇದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಹೇಳಿವೆ.

ನಾಲ್ಕು ಮಾಸ್ಕೋ ಆಕ್ರಮಿತ ಉಕ್ರೇನಿಯನ್ ಪ್ರದೇಶಗಳ ಜನರು ಶಾಶ್ವತವಾಗಿ ನಮ್ಮ ನಾಗರಿಕರು ಎಂದು ಪುಟಿನ್ ಹೇಳಿದ್ದಾರೆ. ನಾನು ಕೀವ್ ಆಡಳಿತ ಮತ್ತು ಪಶ್ಚಿಮದಲ್ಲಿ ಅದರ ನಾಯಕರಿಗೆ ಇದನ್ನು ಹೇಳಲು ಬಯಸುತ್ತೇನೆ. ಲುಗಾನ್ಸ್ಕ್, ಡೊನೆಟ್ಸ್ಕ್, ಖೆರ್ಸನ್ ಮತ್ತು ಝಪೊರಿಝಿಯಾ (ಪ್ರದೇಶಗಳು) ನಲ್ಲಿ ವಾಸಿಸುವ ಜನರು ಶಾಶ್ವತವಾಗಿ ನಮ್ಮ ನಾಗರಿಕರಾಗುತ್ತಿದ್ದಾರೆ. ರಷ್ಯಾ ಸೇರಲು ಅವರು ನಿಸ್ಸಂದಿಗ್ಧವಾದ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.

ಇದು ಎಂಟು ವರ್ಷಗಳ ಹಿಂದೆ ನಡೆದ ಘಟನೆಗಳನ್ನು ಹೋಲುತ್ತದೆ. ದಕ್ಷಿಣ ಉಕ್ರೇನಿನ ಪರ್ಯಾಯ ದ್ವೀಪವಾಗಿದ್ದ ಕ್ರಿಮಿಯಾವನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿತ್ತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com