ಮ್ಯಾನ್ಮಾರ್: ಪ್ರತಿಭಟನಾಕಾರರ ಮೇಲೆ ವೈಮಾನಿಕ ದಾಳಿ; ಮಕ್ಕಳು ಸೇರಿ 100 ಮಂದಿ ದಾರುಣ ಸಾವು

ಮ್ಯಾನ್ಮಾರ್ ಮಿಲಿಟರಿ ಆಡಳಿತ ವಿರೋಧಿಸಿ ದಂಗೆ ಎದ್ದಿದ್ದ ಜನರ ಮೇಲೆ ನಡೆಸಿದ ವೈಮಾನಿಕ ದಾಳಿಯಿಂದ  ಮಂಗಳವಾರ ಮ್ಯಾನ್ಮಾರ್‌ನಲ್ಲಿ ಮಕ್ಕಳು ಸೇರಿದಂತೆ 100ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಾಳಿಯನ್ನು ಅಮೆರಿಕ ಹಾಗೂ ಹಲವಾರು ದೇಶಗಳು ಬಲವಾಗಿ ಖಂಡಿಸಿವೆ.
ಮ್ಯಾನ್ಮಾರ್  ನಲ್ಲಿ ವೈಮಾನಿಕ ದಾಳಿ
ಮ್ಯಾನ್ಮಾರ್ ನಲ್ಲಿ ವೈಮಾನಿಕ ದಾಳಿ

ಬ್ಯಾಂಕಾಕ್: ಮ್ಯಾನ್ಮಾರ್ ಮಿಲಿಟರಿ ಆಡಳಿತ ವಿರೋಧಿಸಿ ದಂಗೆ ಎದ್ದಿದ್ದ ಜನರ ಮೇಲೆ ನಡೆಸಿದ ವೈಮಾನಿಕ ದಾಳಿಯಿಂದ  ಮಂಗಳವಾರ ಮಧ್ಯ ಮ್ಯಾನ್ಮಾರ್‌ನಲ್ಲಿ ಮಕ್ಕಳು ಸೇರಿದಂತೆ 100ಕ್ಕೂ ಅಧಿಕ ಜನ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಾಳಿಯನ್ನು ಅಮೆರಿಕ ಹಾಗೂ ಹಲವಾರು ದೇಶಗಳು ಬಲವಾಗಿ ಖಂಡಿಸಿವೆ.

ಮ್ಯಾನ್ಮಾರ್‌ನಲ್ಲಿ ಆಂಗ್ ಸಾನ್ ಸೂಕಿ ನೇತೃತ್ವದ ಚುನಾಯಿತ ಸರ್ಕಾರ ಪದ್ಯಚುತಗೊಳಿಸಿ 2021ರ ಫೆಬ್ರುವರಿಯಲ್ಲಿ ಸೇನೆ ಅಧಿಕಾರಿ ಹಿಡಿದಿತ್ತು. ಅಲ್ಲದೆ ಜನರ ಪ್ರತಿಭಟನೆ ಹತ್ತಿಕ್ಕಲು ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ. ಈವರೆಗೆ ಮಿಲಿಟರಿ ದಾಳಿಗೆ 3,000ಕ್ಕೂ ಹೆಚ್ಚು ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ದೇಶದ ಎರಡನೇ ದೊಡ್ಡ ನಗರವಾದ ಮ್ಯಾಂಡಲೆಯ ಉತ್ತರಕ್ಕೆ ಸುಮಾರು 110 ಕಿ.ಮೀ. ದೂರದಲ್ಲಿನ ಸಾಗಯಿಂಗ್ ಪ್ರಾಂತ್ಯದ ಪಝಿಗಿ ಗ್ರಾಮದಲ್ಲಿ ಸೇನೆ ವಿರುದ್ಧ ಚಳವಳಿಯ ಕಾರ್ಯಕ್ರಮಕ್ಕಾಗಿ ಸೇರಿದ್ದ ಜನರ ಗುಂಪಿನ ಮೇಲೆ ವೈಮಾನಿಕ ಬಾಂಬ್ ದಾಳಿ ನಡೆಸಲಾಗಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಭಾಗದ ಮುಖ್ಯಸ್ಥ ವೋಲ್ಕರ್ ಟರ್ಕ್ ಅವರು ವೈಮಾನಿಕ ದಾಳಿಯಿಂದ ನನಗೆ ಗಾಬರಿಯಾಗಿದೆ. ವಿಶ್ವದ ಎಲ್ಲಾ ದೇಶಗಳು ದಾಳಿಯ ಹೊಣೆಗಾರರನ್ನು ಖಂಡಿಸಿ ನ್ಯಾಯಕ್ಕೆ ಒತ್ತಾಯಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com