ಮೊಜಾಂಬಿಕಾ ದೇಶಕ್ಕೆ ಭಾರತದ ವಿದೇಶಾಂಗ ಸಚಿವ ಮೊದಲ ಭೇಟಿ! ‘ಮೇಡ್ ಇನ್ ಇಂಡಿಯಾ’ ರೈಲಿನಲ್ಲಿ ಎಸ್ ಜೈಶಂಕರ್ ಸವಾರಿ

ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು (External Affairs Minister S Jaishankar) ಮೊಜಾಂಬಿಕಾ (Mozambique) ಪ್ರವಾಸದಲ್ಲಿದ್ದು, ನಿನ್ನೆ ಗುರುವಾರ ‘ಮೇಡ್ ಇನ್ ಇಂಡಿಯಾ’ (Made in India) ರೈಲಿನಲ್ಲಿ ಸವಾರಿ ಮಾಡಿದರು. 
‘ಮೇಡ್ ಇನ್ ಇಂಡಿಯಾ’ ರೈಲಿನಲ್ಲಿ ಎಸ್ ಜೈಶಂಕರ್ ಸವಾರಿ
‘ಮೇಡ್ ಇನ್ ಇಂಡಿಯಾ’ ರೈಲಿನಲ್ಲಿ ಎಸ್ ಜೈಶಂಕರ್ ಸವಾರಿ

ಮಾಪುಟೊ: ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮೊಜಾಂಬಿಕಾ ಪ್ರವಾಸದಲ್ಲಿದ್ದು, ನಿನ್ನೆ ಗುರುವಾರ ‘ಮೇಡ್ ಇನ್ ಇಂಡಿಯಾ’ ರೈಲಿನಲ್ಲಿ ಸಂಚಾರ ಮಾಡಿದರು. 

ಭಾರತದಲ್ಲಿ ತಯಾರಿಸಿದ ರೈಲಿನಲ್ಲಿ (Train) ಸವಾರಿ ಮಾಡಿದರು. ರೈಲ್ವೆ ಜಾಲಗಳಲ್ಲಿ ವಿದ್ಯುತ್ ಬಳಕೆ ಮತ್ತು ಜಲಮಾರ್ಗ ಸಂಪರ್ಕವನ್ನು ವಿಸ್ತರಿಸಲು ಸಹಾಯ ಮಾಡುವಲ್ಲಿ ಭಾರತದ ಪಾಲುದಾರಿಕೆಯ ಬಗ್ಗೆ ಮೊಜಾಂಬಿಕಾ ಸಾರಿಗೆ ಸಚಿವರೊಂದಿಗೆ ಚರ್ಚಿಸಿದರು. ಜೈಶಂಕರ್ ಅವರು ಮೂರು ದಿನಗಳ ಭೇಟಿಗಾಗಿ ಗುರುವಾರ ಮೊಜಾಂಬಿಕ್‌ನ ರಾಜಧಾನಿಗೆ ಆಗಮಿಸಿದರು ಮತ್ತು ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಲು ಆಫ್ರಿಕನ್ ದೇಶದ ಸಂಸತ್ತಿನ ಅಧ್ಯಕ್ಷರನ್ನು ಭೇಟಿ ಮಾಡಿದರು. ಏಪ್ರಿಲ್ 13 ರಿಂದ 15 ರವರೆಗೆ ಅವರ ಮೊಜಾಂಬಿಕಾ ಭೇಟಿಯು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವರೊಬ್ಬರು ಆ ದೇಶಕ್ಕೆ ನೀಡಿರುವ ಮೊದಲ ಭೇಟಿಯಾಗಿದೆ.

ಮೊಜಾಂಬಿಕ ಸಾರಿಗೆ ಮತ್ತು ಸಂವಹನ ಸಚಿವರು ಮತ್ತು ಮೊಜಾಂಬಿಕ ಬಂದರು ಮತ್ತು ರೈಲು ಪ್ರಾಧಿಕಾರದ ಅಧ್ಯಕ್ಷ ಮೇಟಿಯುಸ್ ಮಗಲಾ ಅವರ ಜೊತೆ ನಡೆಸಿದ ಹಸಿರು ಸಾರಿಗೆ ಸಂಭಾಷಣೆ ಅದ್ಭುತವಾಗಿದೆ. ರೈಲು ಜಾಲಗಳು, ವಿದ್ಯುತ್ ಚಲನಶೀಲತೆ ಮತ್ತು ಜಲಮಾರ್ಗಗಳ ಸಂಪರ್ಕವನ್ನು ವಿಸ್ತರಿಸುವ ಕುರಿತು ಮಾತನಾಡಿದೆವು. ಈ ನಿಟ್ಟಿನಲ್ಲಿ ಭಾರತವು ವಿಶ್ವಾಸಾರ್ಹ ಪಾಲುದಾರ ರಾಷ್ಟ್ರವಾಗಿದೆ” ಎಂದು ಸಚಿವ ಜೈಶಂಕರ್ ಟ್ವೀಟ್ ಮಾಡಿದ್ದಾರೆ.

“ಮೊಜಾಂಬಿಕನ್ ಸಾರಿಗೆ ಸಚಿವ ಮೇಟಿಯುಸ್ ಮಾಗಾಲಾ ಅವರೊಂದಿಗೆ ಮಾಪುಟೊದಿಂದ ಮಚಾವಾಗೆ ‘ಮೇಡ್ ಇನ್ ಇಂಡಿಯಾ’ ರೈಲಿನಲ್ಲಿ ಜೈಶಂಕರ್ ಸವಾರಿ ಮಾಡಿದರು. ಸಿಎಂಡಿ ರೈಟ್ಸ್ (CMD RITES) ರಾಹುಲ್ ಮಿಥಾಲ್ ಅವರು ಪ್ರಯಾಣದಲ್ಲಿ ನಮ್ಮೊಂದಿಗೆ ಸೇರಿಕೊಂಡಿದ್ದನ್ನು ಶ್ಲಾಘಿಸಿ” ಜೈಶಂಕರ್ ಅವರು ಟ್ವೀಟ್ ಮಾಡಿದ್ದಾರೆ. ಅವರು ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಿದರು ಮತ್ತು ದೇವಸ್ಥಾನಕ್ಕೆ ಭೇಟಿ ನೀಡಿದರು.

“ಇಂದು ಸಂಜೆ ಮಾಪುಟೋದಲ್ಲಿರುವ ಶ್ರೀ ವಿಶ್ವಂಭರ ಮಹಾದೇವ ಮಂದಿರದಲ್ಲಿ (Shree Vishvambhar Mahadev Mandir) ಪ್ರಾರ್ಥನೆಯನ್ನು ಸಲ್ಲಿಸಿದೆ. ಅಲ್ಲಿನ ಭಾರತೀಯ ಸಮುದಾಯದೊಂದಿಗೆ ಸಂವಹನ ನಡೆಸಲು ತುಂಬಾ ಸಂತೋಷವಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಜೈಶಂಕರ್ ಅವರು ಉಗಾಂಡಾದಿಂದ ಮಾಪುಟೊಗೆ ಆಗಮಿಸಿದರು. ಅಲ್ಲಿ ಅವರು ಅಧ್ಯಕ್ಷ ಯೊವೆರಿ ಮುಸೆವೆನಿ ಸೇರಿದಂತೆ ದೇಶದ ಉನ್ನತ ನಾಯಕರೊಂದಿಗೆ ಮಾತುಕತೆ ನಡೆಸಿದರು ಮತ್ತು ವ್ಯಾಪಾರ, ಮೂಲಸೌಕರ್ಯ, ಇಂಧನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಸಂಭವನೀಯ ಸಹಕಾರದ ಕುರಿತು ಚರ್ಚಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com