
ಇಸ್ಲಾಮಾಬಾದ್: ಭಾರತೀಯ ಚಾನೆಲ್‌ಗಳನ್ನು ಪ್ರಸಾರ ಮಾಡುವುದನ್ನು ನಿಲ್ಲಿಸುವಂತೆ ಪಾಕಿಸ್ತಾನದ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (ಪಿಇಎಂಆರ್‌ಎ) ಶುಕ್ರವಾರ ದೇಶದಾದ್ಯಂತ ಸ್ಥಳೀಯ ಕೇಬಲ್ ಟಿವಿ ಆಪರೇಟರ್‌ಗಳಿಗೆ ಆದೇಶಿಸಿದೆ.
ತನ್ನ ಆದೇಶಗಳನ್ನು ಉಲ್ಲಂಘಿಸುವುದು ಕಂಡುಬಂದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಅದು ಎಚ್ಚರಿಸಿದೆ.
ಹೇಳಿಕೆಯೊಂದರಲ್ಲಿ, ಈ ಹಿಂದೆ ಹಲವಾರು ಆಪರೇಟರ್‌ಗಳು ತಾನು ಮತ್ತು ಸುಪ್ರೀಂ ಕೋರ್ಟ್ ನಿಗದಿಪಡಿಸಿದ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ಪಿಇಎಂಆರ್‌ಎ ಉಲ್ಲೇಖಿಸಿದೆ.
ಶುಕ್ರವಾರ, ಭಾರತೀಯ ಚಾನೆಲ್‌ಗಳನ್ನು ಪ್ರಸಾರ ಮಾಡುವ ಕೇಬಲ್ ಆಪರೇಟರ್‌ಗಳ ಮೇಲೆ ಕ್ರಮ ಕೈಗೊಳ್ಳುವಂತೆ ಪಿಇಎಂಆರ್‌ಎ ತನ್ನ ಪ್ರಾದೇಶಿಕ ಕಚೇರಿಗಳಿಗೆ ಆದೇಶಿಸಿದೆ.
'ಪಿಇಎಂಆರ್‌ಎ ಪರವಾನಗಿ ನೀಡಿರುವುದನ್ನು ಹೊರತುಪಡಿಸಿ ಬೇರೆ ಯಾವುದೇ ಚಾನೆಲ್ ಅನ್ನು ಕೇಬಲ್ ಟಿವಿ ನೆಟ್‌ವರ್ಕ್‌ಗಳಲ್ಲಿ ವಿತರಿಸಲು ಅನುಮತಿ ನೀಡಲಾಗುವುದಿಲ್ಲ ಮತ್ತು ಇನ್ನು ಮುಂದೆ ಯಾವುದೇ ಆಪರೇಟರ್‌ಗಳು ಈ ಆದೇಶಗಳನ್ನು ಉಲ್ಲಂಘಿಸಿದರೆ ಪಿಇಎಂಆರ್‌ಎ ಕಾನೂನಿನ ಪ್ರಕಾರ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗುವುದು' ಎಂದು ಪ್ರಾಧಿಕಾರವು ಹೇಳಿಕೆಯಲ್ಲಿ ತಿಳಿಸಿದೆ.
ಕರಾಚಿ ಪ್ರಾದೇಶಿಕ ಕಚೇರಿಯು ವಿವಿಧ ಪ್ರದೇಶಗಳಲ್ಲಿ ಹಠಾತ್ ತಪಾಸಣೆಗಳನ್ನು ನಡೆಸಿತು ಮತ್ತು ಕೇಬಲ್ ಆಪರೇಟರ್‌ಗಳಾದ ಡಿಜಿಟಲ್ ಕೇಬಲ್ ನೆಟ್‌ವರ್ಕ್, ಹೋಮ್ ಮೀಡಿಯಾ ಕಮ್ಯುನಿಕೇಷನ್ಸ್ (ಪ್ರೈ) ಲಿಮಿಟೆಡ್, ಶಹಜೈಬ್ ಕೇಬಲ್ ನೆಟ್‌ವರ್ಕ್ ಮತ್ತು ಸ್ಕೈ ಕೇಬಲ್ ವಿಷನ್ ಮೇಲೆ ದಾಳಿ ನಡೆಸಿತು.
ಪಾಕಿಸ್ತಾನದ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ ಕಾನೂನು ಜಾರಿ ತಂಡಗಳು ಸಿಂಧ್‌ನ ಹೈದರಾಬಾದ್ ಮತ್ತು ಪಂಜಾಬ್‌ನ ಮುಲ್ತಾನ್ ಪ್ರದೇಶದಲ್ಲಿ ಇದೇ ರೀತಿಯ ದಾಳಿಗಳನ್ನು ನಡೆಸಿವೆ. ಅಲ್ಲದೆ, ಅಕ್ರಮವಾಗಿ ಅಳವಡಿಸಲಾಗಿದ್ದ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ನಿಯಮ ಉಲ್ಲಂಘಿಸಿದವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಪಾಕಿಸ್ತಾನವು ಈ ಹಿಂದೆ ಹಲವು ಬಾರಿ ಭಾರತೀಯ ಚಲನಚಿತ್ರಗಳು ಮತ್ತು ಟಿವಿ ಚಾನೆಲ್‌ಗಳನ್ನು ನಿಷೇಧಿಸಿದೆ.
1965 ರ ಯುದ್ಧದ ನಂತರ ಭಾರತೀಯ ಚಲನಚಿತ್ರಗಳನ್ನು ಮೊದಲ ಬಾರಿಗೆ ನಿಷೇಧಿಸಿತು. ಇದು ದಶಕಗಳವರೆಗೆ ಮುಂದುವರೆಯಿತು. ಆದರೆ, ಅಂತಿಮವಾಗಿ ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ ಸುಧಾರಣೆಯ ನಂತರ 2008ರಲ್ಲಿ ಈ ನಿಯಮವನ್ನು ತೆಗೆದುಹಾಕಲಾಯಿತು.
ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ನಂತರ 2016 ರಲ್ಲಿ ಪಾಕಿಸ್ತಾನದಲ್ಲಿ ಭಾರತೀಯ ಚಾನೆಲ್‌ಗಳ ಪ್ರಸಾರದ ಮೇಲೆ ನಿಷೇಧ ವಿಧಿಸಲಾಯಿತು.
ಲಾಹೋರ್ ಹೈಕೋರ್ಟ್ 2018ರಲ್ಲಿ ಭಾರತೀಯ ಚಾನೆಲ್‌ಗಳ ಮೇಲಿನ ನಿಷೇಧದ ವಿರುದ್ಧ ತೀರ್ಪು ನೀಡಿತು. ಆದರೆ, ಸುಪ್ರೀಂ ಕೋರ್ಟ್ ಅಕ್ಟೋಬರ್ 2018ರಲ್ಲಿ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿತು ಮತ್ತು ಅದನ್ನು ಪುನಃ ವಿಧಿಸಿತು.
ದ್ವಿಪಕ್ಷೀಯ ನಿಷೇಧ ನೀತಿಯು ಎರಡು ರಾಷ್ಟ್ರಗಳ ನಡುವಿನ ಸಾಂಸ್ಕೃತಿಕ ಸಂಬಂಧಗಳನ್ನು ಅಡ್ಡಿಪಡಿಸುತ್ತದೆ. ಇದು ಉಭಯ ದೇಶಗಳ ನಡುವಿನ ಸಂಬಂಧಗಳ ಪ್ರಮುಖ ಅಂಶವಾಗಿದೆ.
Advertisement