ನ್ಯೂಯಾರ್ಕ್ ನಲ್ಲಿ ಹಸಿವಿನಿಂದ ಬಳಲುತ್ತಿರುವ ಮಹಿಳೆ ಹೈದರಾಬಾದ್ ಗೆ ಮರಳಲು ರೆಡಿ: ಭಾರತೀಯ ರಾಯಭಾರಿ ಕಚೇರಿ

ಕಳೆದ ವಾರ ಅಮೆರಿಕದ ಬೀದಿಗಳಲ್ಲಿ ಹಸಿವಿನಿಂದ ಬಳಲುತ್ತಿದ್ದ ಹೈದರಾಬಾದ್ ಮಹಿಳೆಯನ್ನು ಸಂಪರ್ಕಿಸಿರುವುದಾಗಿ ಚಿಕಾಗೋದಲ್ಲಿರುವ ಭಾರತದ ರಾಯಭಾರಿ ಕಚೇರಿ ತಿಳಿಸಿದೆ.
ಸೈಯದಾ ಜೈದಿ
ಸೈಯದಾ ಜೈದಿ
Updated on

ನ್ಯೂಯಾರ್ಕ್: ಕಳೆದ ವಾರ ಅಮೆರಿಕದ ಬೀದಿಗಳಲ್ಲಿ ಹಸಿವಿನಿಂದ ಬಳಲುತ್ತಿದ್ದ ಹೈದರಾಬಾದ್ ಮಹಿಳೆಯನ್ನು ಸಂಪರ್ಕಿಸಿರುವುದಾಗಿ ಚಿಕಾಗೋದಲ್ಲಿರುವ ಭಾರತದ ರಾಯಭಾರಿ ಕಚೇರಿ ತಿಳಿಸಿದೆ.

ಎರಡು ವರ್ಷಗಳ ಹಿಂದೆ ಸ್ನಾತಕೋತ್ತರ ಪದವಿ ಪಡೆಯಲು ಯುಎಸ್‌ಗೆ ತೆರಳಿದ್ದ 37 ವರ್ಷದ ಸೈಯದಾ ಲುಲು ಮಿನ್ಹಾಜ್ ಜೈದಿ ಅವರು ಕಳೆದ ವಾರ ಚಿಕಾಗೋದ ಬೀದಿಗಳಲ್ಲಿ "ಖಿನ್ನತೆ" ಮತ್ತು ಹಸಿವಿನಿಂದ ಬಳಲುತ್ತಿದ್ದರು. ಸೈಯದಾ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ನಾವು ಸೈಯದಾ ಜೈದಿ ಅವರನ್ನು ಸಂಪರ್ಕಿಸಿದ್ದೇವೆ. ಅವರಿಗೆ ವೈದ್ಯಕೀಯ ನೆರವು ಮತ್ತು ಭಾರತಕ್ಕೆ ಪ್ರಯಾಣ ಸೇರಿದಂತೆ ಸಹಾಯ ನೀಡಲು ಸಂತೋಷವಾಗಿದೆ. ಆಕೆ ಸದೃಢವಾಗಿದ್ದಾರೆ. ಅಲ್ಲದೆ ಭಾರತದಲ್ಲಿನ ತನ್ನ ತಾಯಿಯೊಂದಿಗೆ ಮಾತನಾಡಿದ್ದಾಳೆ ಎಂದು ಚಿಕಾಗೋದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಟ್ವೀಟ್ ಮಾಡಿದೆ.

ಭಾರತಕ್ಕೆ ಮರಳುವ ವಿಷಯವನ್ನು ನಾನು ಪ್ರಸ್ತಾಪಿಸಿದ್ದು ಅದಕ್ಕೆ ಆಕೆ ಇನ್ನೂ ಪ್ರತಿಕ್ರಿಯಿಸಿಲ್ಲ. ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ನಾವು ಸಿದ್ಧರಿದ್ದೇವೆ ಎಂದು ಟ್ವೀಟ್ ಹೇಳಿದೆ.

ಡೆಟ್ರಾಯಿಟ್‌ನ ಟ್ರೈನ್ ವಿಶ್ವವಿದ್ಯಾನಿಲಯದಿಂದ ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದ ಜೈದಿ, ಹೈದರಾಬಾದ್‌ನ ಹೊರವಲಯದಲ್ಲಿರುವ ಮೆಡ್ಚಲ್ ಜಿಲ್ಲೆಯ ಮೌಲಾ ಅಲಿ ನಿವಾಸಿ. ಆಕೆಯ ತಾಯಿ ಸೈಯದಾ ವಹಾಜ್ ಫಾತಿಮಾ ಅವರು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ತಮ್ಮ ಮಗಳನ್ನು ಶೀಘ್ರವಾಗಿ ಭಾರತಕ್ಕೆ ಹಿಂದಿರುಗಲು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದರು.

ಕಳೆದ ಎರಡು ತಿಂಗಳಿಂದ ಕುಟುಂಬದೊಂದಿಗೆ ಸಂಪರ್ಕದಲ್ಲಿಲ್ಲ ಎಂದು ಫಾತಿಮಾ ಸಚಿವರಿಗೆ ಪತ್ರ ಬರೆದಿದ್ದಾರೆ.

ವಹಾಜ್ ಫಾತಿಮಾ ಅವರು ಪತ್ರದಲ್ಲಿ, ಇತ್ತೀಚೆಗೆ ಇಬ್ಬರು ಹೈದರಾಬಾದಿ ಯುವಕರ ಮೂಲಕ ನನ್ನ ಮಗಳು ತೀವ್ರ ಖಿನ್ನತೆಗೆ ಒಳಗಾಗಿದ್ದಾಳೆ. ಆಕೆಯ ಎಲ್ಲಾ ವಸ್ತುಗಳನ್ನು ಕಳವು ಮಾಡಲಾಗಿದೆ. ಇದರಿಂದಾಗಿ ಅವಳು ಹಸಿವಿನಿಂದ ಬಳಲುತ್ತಿದ್ದು ಚಿಕಾಗೋದ ಬೀದಿಗಳಲ್ಲಿ ಓಡಾಡುತ್ತಿದ್ದಾಳೆ ಎಂದು ಬರೆಯಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com