ಪಾಕ್‌ ಗೆಳೆಯನ ಮದುವೆಯಾದ ಭಾರತದ ಮಹಿಳೆ ಅಂಜು ವೀಸಾ ಅವಧಿ ವಿಸ್ತರಿಸಿದ ಪಾಕ್ ಸರ್ಕಾರ!

ಪಾಕಿಸ್ತಾನಕ್ಕೆ ಪರಾರಿಯಾಗಿ ತನ್ನ ಫೇಸ್‌ಬುಕ್‌ ಪ್ರಿಯಕರನನ್ನು ಮದುವೆಯಾಗಿದ್ದ ಭಾರತ ಮೂಲದ ವಿವಾಹಿತ ಮಹಿಳೆ ಅಂಜು ಅವರ ವೀಸಾ ಅವಧಿಯನ್ನು ಅಲ್ಲಿನ ಸರ್ಕಾರ ಒಂದು ವರ್ಷ ವಿಸ್ತರಿಸಿದೆ ಎಂದು ತಿಳಿದುಬಂದಿದೆ.
ಅಂಜು ಹಾಗೂ ನಸ್ರುಲ್ಲಾ
ಅಂಜು ಹಾಗೂ ನಸ್ರುಲ್ಲಾ

ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ಪರಾರಿಯಾಗಿ ತನ್ನ ಫೇಸ್‌ಬುಕ್‌ ಪ್ರಿಯಕರನನ್ನು ಮದುವೆಯಾಗಿದ್ದ ಭಾರತ ಮೂಲದ ವಿವಾಹಿತ ಮಹಿಳೆ ಅಂಜು ಅವರ ವೀಸಾ ಅವಧಿಯನ್ನು ಅಲ್ಲಿನ ಸರ್ಕಾರ ಒಂದು ವರ್ಷ ವಿಸ್ತರಿಸಿದೆ ಎಂದು ತಿಳಿದುಬಂದಿದೆ.

ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಫೇಸ್‌ಬುಕ್ ಸ್ನೇಹಿತನನ್ನು ಮದುವೆಯಾಗಲು ಖೈಬರ್ ಪಖ್ತುನ್‌ಖ್ವಾ ಪ್ರಾಂತ್ಯದ ದೂರದ ಹಳ್ಳಿಗೆ ಪ್ರಯಾಣಿಸಿದ್ದ 34 ವರ್ಷದ ಇಬ್ಬರು ಮಕ್ಕಳ ಭಾರತೀಯ ತಾಯಿ ಅಂಜು ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಇಸ್ಲಾಂಗೆ ಮತಾಂತರಗೊಂಡು ಬಳಿಕ ಫಾತಿಮಾ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಬಳಿಕ ತನ್ನ ಫೇಸ್ ಬುಕ್ ಪ್ರೇಮಿ 29 ವರ್ಷದ ನಸ್ರುಲ್ಲಾನನ್ನು ಜುಲೈ 25 ರಂದು ವಿವಾಹವಾಗಿದ್ದಳು. ಈ ನುಸ್ರುಲ್ಲಾ ಮನೆ ಪ್ರಾಂತ್ಯದ ಅಪ್ಪರ್ ದಿರ್ ಜಿಲ್ಲೆಯಲ್ಲಿದೆ. ಇದೀಗ ಭಾರತದ ಅಂಜು ವೀಸಾವನ್ನು ಪಾಕಿಸ್ತಾನ ಸರ್ಕಾರ ಒಂದು ವರ್ಷಗಳ ಕಾಲ ವಿಸ್ತರಿಸಿದೆ ಎಂದು ಆಕೆಯ ಪಾಕಿಸ್ತಾನದ ಪತಿ ನುಸ್ರುಲ್ಲಾ ಮಂಗಳವಾರ ಹೇಳಿದ್ದಾರೆ.

ಅಂಜು ಅವರ ವೀಸಾವನ್ನು ಮೊದಲು 2 ತಿಂಗಳವರೆಗೆ ವಿಸ್ತರಿಸಲಾಗಿತ್ತು. ಇದೀಗ ನಮ್ಮ ಮದುವೆಯ ನಂತರ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ. ಆಕೆಯ ಮೂಲ ಒಂದು ತಿಂಗಳ ವೀಸಾ ಆಗಸ್ಟ್ 20 ರಂದು ಮುಕ್ತಾಯಗೊಳ್ಳಲಿದೆ. ಆಂತರಿಕ ಸಚಿವಾಲಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದ ನಂತರ ನನ್ನ ಪತ್ನಿ ಅಂಜು ಅವರ ವೀಸಾವನ್ನು ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ. ಪಾಕಿಸ್ತಾನದ ಎಲ್ಲಾ ಸಂಸ್ಥೆಗಳು ನಮ್ಮೊಂದಿಗೆ ಸಹಕರಿಸುತ್ತಿವೆ ಎಂದು ನುಸ್ರುಲ್ಲಾ ಹೇಳಿದ್ದಾರೆ.

ಭಾರತದ ಅಂಜು ಕಥೆಯು 30 ವರ್ಷದ ಪಾಕಿಸ್ತಾನಿ ಮೂಲದ ನಾಲ್ಕು ಮಕ್ಕಳ ತಾಯಿ ಸೀಮಾ ಗುಲಾಮ್ ಹೈದರ್ ಅವರ ಕಥೆಯನ್ನು ಹೋಲುತ್ತದೆ, ಅವರು 2019 ರಲ್ಲಿ PUBG ಆಡುವಾಗ ಸಂಪರ್ಕಕ್ಕೆ ಬಂದ 22 ವರ್ಷದ ಹಿಂದೂ ವ್ಯಕ್ತಿ ಸಚಿನ್ ಮೀನಾ ಅವರೊಂದಿಗೆ ವಾಸಿಸಲು ಭಾರತಕ್ಕೆ ನುಸುಳಿ ಇದೀಗ ವಿವಾಹವಾಗಿದ್ದಾರೆ.

ಅಂಜು ರಾಜಸ್ಥಾನದಲ್ಲಿರುವ ಅರವಿಂದ್ ಅವರನ್ನು ಮದುವೆಯಾಗಿದ್ದಾರೆ. ಅವರಿಗೆ 15 ವರ್ಷದ ಮಗಳು ಮತ್ತು ಆರು ವರ್ಷದ ಮಗ ಇದ್ದಾರೆ. ಅಂಜು ಮತ್ತು ನುಸ್ರುಲ್ಲಾ ಇಬ್ಬರು 2019 ರಲ್ಲಿ ಫೇಸ್‌ಬುಕ್‌ನಲ್ಲಿ ಸ್ನೇಹಿತರಾಗಿದ್ದರು. ಉತ್ತರ ಪ್ರದೇಶದ ಕೈಲೋರ್ ಗ್ರಾಮದಲ್ಲಿ ಜನಿಸಿ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ಅಂಜು, ಭಾರತದಿಂದ ವಾಘಾ-ಅಟ್ಟಾರಿ ಗಡಿಯ ಮೂಲಕ ಕಾನೂನುಬದ್ಧವಾಗಿ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸಿದ್ದರು. ಅಲ್ಲಿಗೆ ತೆರಳಿದ ಬಳಿಕ ಆಕೆಗೆ 30-ದಿನಗಳ ವೀಸಾವನ್ನು ನೀಡಲಾಯಿತು, ಇದು ಅಪ್ಪರ್ ದಿರ್‌ಗೆ ಮಾತ್ರ ಮಾನ್ಯ ಮಾಡಿತ್ತು.

ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಫೇಸ್‌ಬುಕ್ ಸ್ನೇಹಿತನನ್ನು ಮದುವೆಯಾಗಲು ಖೈಬರ್ ಪಖ್ತುನ್‌ಖ್ವಾ ಪ್ರಾಂತ್ಯದ ದೂರದ ಹಳ್ಳಿಗೆ ಪ್ರಯಾಣಿಸಿದ್ದ 34 ವರ್ಷದ ಇಬ್ಬರು ಮಕ್ಕಳ ಭಾರತೀಯ ತಾಯಿ ಅಂಜು ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಇಸ್ಲಾಂಗೆ ಮತಾಂತರಗೊಂಡು ಬಳಿಕ ಫಾತಿಮಾ ಎಂದು ಹೆಸರು ಬದಲಿಸಿಕೊಂಡಿದ್ದಾರೆ. ಬಳಿಕ ತನ್ನ ಫೇಸ್ ಬುಕ್ ಪ್ರೇಮಿ 29 ವರ್ಷದ ನಸ್ರುಲ್ಲಾನನ್ನು ಜುಲೈ 25 ರಂದು ವಿವಾಹವಾಗಿದ್ದಳು. ಕಳೆದ ತಿಂಗಳು, ರಿಯಲ್ ಎಸ್ಟೇಟ್ ಕಂಪನಿಯೊಂದು ದಂಪತಿಗೆ ಖೈಬರ್ ಪಖ್ತುಂಖ್ವಾದಲ್ಲಿ ಒಂದು ನಿವೇಶನವನ್ನು ಉಡುಗೊರೆಯಾಗಿ ನೀಡಿದ್ದು ಮಾತ್ರವಲ್ಲದೇ ಅವರಿಗೆ ಚೆಕ್ ಕೂಡ ನೀಡಿತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com