ಟಿಐಎಫ್ಎಫ್ ನಿಂದ ಹೊರಬಿದ್ದ ಪಂಜಾಬ್ 95

ಹನಿ ತ್ರೆಹಾನ್ ನಿರ್ದೇಶನದ ಮಾನವ ಹಕ್ಕುಗಳ ಕಾರ್ಯಕರ್ತರಾದ ಜಸ್ವಂತ್ ಸಿಂಗ್ ಖಲ್ರಾ ಅವರ ಜೀವನಾಧಾರಿತ ಪಂಜಾಬ್ 95 ಸಿನಿಮಾ ಟಿಐಎಫ್ಎಫ್ ನಿಂದ ಹೊರಬಿದ್ದಿದೆ. 
ಪಂಜಾಬ್ 95
ಪಂಜಾಬ್ 95

ನವದೆಹಲಿ: ಹನಿ ತ್ರೆಹಾನ್ ನಿರ್ದೇಶನದ ಮಾನವ ಹಕ್ಕುಗಳ ಕಾರ್ಯಕರ್ತರಾದ ಜಸ್ವಂತ್ ಸಿಂಗ್ ಖಲ್ರಾ ಅವರ ಜೀವನಾಧಾರಿತ ಪಂಜಾಬ್ 95 ಸಿನಿಮಾ ಟಿಐಎಫ್ಎಫ್ ನಿಂದ ಹೊರಬಿದ್ದಿದೆ. 

ಮುಂದಿನ ತಿಂಗಳು ಟೊರೊಂಟೋ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಟಿಐಎಫ್ಎಫ್) ಆರಂಭವಾಗಲಿದ್ದು, ಜಾಗತಿಕ ಮಟ್ಟದ ಚಲನಚಿತ್ರೋತ್ಸವದಿಂದ ಸಿನಿಮಾ ಹೊರಬಿದ್ದಿದೆ 
 
ದಲ್ಜಿತ್ ದೊಸಾಂಜ್ ಖಲ್ರಾ ಪಾತ್ರ ನಿರ್ವಹಿಸಿದ್ದು, ಸೆ.11 ರಂದು ಗಾಲಾ ಪ್ರೆಸೆಂಟೇಷನ್ಸ್ ವಿಭಾಗದಲ್ಲಿ ತೆರೆ ಕಾಣಬೇಕಿತ್ತು. ಆದರೆ ಟಿಐಎಫ್ಎಫ್ ವೆಬ್ ಸೈಟ್ ನಲ್ಲಿ ಇದರ ಉಲ್ಲೇಖವೇ ಇಲ್ಲವಾಗಿದೆ. 

ಈ ಬಗ್ಗೆ ಟಿಐಎಫ್ಎಫ್ ವಕ್ತಾರರ ಹೇಳಿಕೆಯನ್ನು ಉಲ್ಲೇಖಿಸಿ ಬ್ರಿಟನ್ ಮೂಲದ ಸಂಸ್ಥೆಯೊಂದು ವರದಿ ಪ್ರಕಟಿಸಿದ್ದು, ಪಂಜಾಬ್ 95 ಟಿಐಎಫ್ಎಫ್ ನ ಭಾಗವಾಗಿಲ್ಲ ಎಂದು ಹೇಳಿದ್ದಾರೆ.

ಚಲನಚಿತ್ರೋತ್ಸವ ಸಮಿತಿ ನಿರ್ಧಾರದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಪಿಟಿಐ ಸಂಪರ್ಕಿಸಿದಾಗ ಟ್ರೆಹಾನ್ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ರೋನಿ ಸ್ಕ್ರೂವಾಲಾ ಅವರ ಬ್ಯಾನರ್ ಆರ್‌ಎಸ್‌ವಿಪಿ ಮೂವೀಸ್ ನಿರ್ಮಿಸಿದ ಈ ಚಿತ್ರದಲ್ಲಿ ಅರ್ಜುನ್ ರಾಮ್‌ಪಾಲ್ ಮತ್ತು ಕೊಹ್ರಾ ನಟ ಸುವೀಂದರ್ ವಿಕ್ಕಿ ಕೂಡ ನಟಿಸಿದ್ದಾರೆ.

1984 ರಿಂದ 1994 ರವರೆಗಿನ 10 ವರ್ಷಗಳ ಅವಧಿಯಲ್ಲಿ ಪಂಜಾಬ್‌ನಲ್ಲಿ ಸಾವಿರಾರು ಅಪರಿಚಿತ ಶವಗಳ ಅಂತ್ಯಕ್ರಿಯೆಯನ್ನು ಖಲ್ರಾ ತನಿಖೆ ಮಾಡಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com