ಪಾಕಿಸ್ತಾನ: ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನ ಸ್ಫೋಟಿಸಿದ ಉಗ್ರರು; 11 ಕಾರ್ಮಿಕರು ಸಾವು

ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಉತ್ತರ ವಜಿರಿಸ್ತಾನ್ ಜಿಲ್ಲೆಯಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಕನಿಷ್ಠ 11 ಕಾರ್ಮಿಕರು ಸಾವಿಗೀಡಾಗಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ಪೇಶಾವರ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಉತ್ತರ ವಜಿರಿಸ್ತಾನ್ ಜಿಲ್ಲೆಯಲ್ಲಿನ ಭಯೋತ್ಪಾದಕರ ದಾಳಿಯಲ್ಲಿ ಕನಿಷ್ಠ 11 ಕಾರ್ಮಿಕರು ಸಾವಿಗೀಡಾಗಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.

ಶನಿವಾರ ಶಾವಾಲ್ ತೆಹಸಿಲ್‌ನ ಗುಲ್ ಮೀರ್ ಕೋಟ್ ಬಳಿ ಭಯೋತ್ಪಾದಕರು 16 ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನವನ್ನು ಸ್ಫೋಟಿಸಿದ್ದಾರೆ ಎಂದು ಡೆಪ್ಯುಟಿ ಕಮಿಷನರ್ ರೆಹಾನ್ ಗುಲ್ ಖಟ್ಟಕ್ ಹೇಳಿರುವುದಾಗಿ ಜಿಯೋ ನ್ಯೂಸ್ ವರದಿ ಮಾಡಿದೆ.

ನಿರ್ಮಾಣ ಹಂತದ ಸರ್ಕಾರಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 11 ಕಾರ್ಮಿಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ ಮತ್ತು ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಮೂವರು ನಾಪತ್ತೆಯಾಗಿದ್ದಾರೆ ಎಂದು ಖಟ್ಟಕ್ ಹೇಳಿದ್ದಾರೆ.

ಮಕಿನ್ ಮತ್ತು ವಾನಾದ ದಕ್ಷಿಣ ವಜಿರಿಸ್ತಾನ್ ತಹಸಿಲ್‌ಗೆ ಸೇರಿದ ಗಾಯಾಳುಗಳು ಮತ್ತು ಮೃತರ ದೇಹಗಳನ್ನು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ನಾಪತ್ತೆಯಾಗಿರುವ ಕಾರ್ಮಿಕರನ್ನು ಗುರುತಿಸಿ ಪತ್ತೆ ಹಚ್ಚುವ ಪ್ರಯತ್ನ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಮಧ್ಯೆ, ಶನಿವಾರ ಮುಂಜಾನೆ, ಮೇಲಿನ ದಕ್ಷಿಣ ವಜಿರಿಸ್ತಾನದ ಮಕಿನ್ ತೆಹ್ಸಿಲ್‌ನಲ್ಲಿ ದುಷ್ಕರ್ಮಿಗಳು ವಾಹನದ ಮೇಲೆ ರಾಕೆಟ್ ಗುಂಡು ಹಾರಿಸಿದ ನಂತರ ಬಾಂಬ್ ನಿಷ್ಕ್ರಿಯ ದಳದ ನಾಲ್ವರು ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com