ಸೌದಿ ಗಡಿ ಭದ್ರತಾ ಪಡೆಯಿಂದ ಗುಂಡಿನ ದಾಳಿ; ಇಥಿಯೋಪಿಯಾದ ನೂರಾರು ವಲಸಿಗರ ಸಾವು: ವರದಿ

ಸೌದಿ ಗಡಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಇಥಿಯೋಪಿಯಾದ ನೂರಾರು ವಲಸಿಗರ ಸಾವನ್ನಪ್ಪಿದ್ದಾರೆ ಎಂದು ವರದಿಯೊಂದು ಹೇಳಿದೆ. 
ವಲಸಿಗರ ಮೇಲೆ ಸೌದಿ ಭದ್ರತಾ ಪಡೆಗಳ ದಾಳಿ
ವಲಸಿಗರ ಮೇಲೆ ಸೌದಿ ಭದ್ರತಾ ಪಡೆಗಳ ದಾಳಿ

ನವದೆಹಲಿ: ಸೌದಿ ಗಡಿ ಭದ್ರತಾ ಪಡೆಗಳು ನಡೆಸಿದ ಗುಂಡಿನ ದಾಳಿಯಲ್ಲಿ ಇಥಿಯೋಪಿಯಾದ ನೂರಾರು ವಲಸಿಗರ ಸಾವನ್ನಪ್ಪಿದ್ದಾರೆ ಎಂದು ವರದಿಯೊಂದು ಹೇಳಿದೆ. 

ಮಾನವ ಹಕ್ಕು ವಿಚಕ್ಷಣಾ ಸಂಸ್ಥೆ (Human Rights Watch) ಈ ಬಗ್ಗೆ ವರದಿ ಮಾಡಿದ್ದು, 'ಯೆಮನ್‌ ಮಾರ್ಗವಾಗಿ ಸೌದಿ ಅರೇಬಿಯಾ ಗಡಿ ದಾಟಲು ಪ್ರಯತ್ನಿಸಿದ ಇಥಿಯೋಪಿಯಾ ವಲಸಿಗರ ಮೇಲೆ ಸೌದಿ ಗಡಿ ಭದ್ರತಾ ಪಡೆ ದಾಳಿ ನಡೆಸಿದ್ದು, ದಾಳಿಯಲ್ಲಿ, ಕಳೆದ ವರ್ಷದಿಂದ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಂಘಟನೆ ಸೋಮವಾರ ಆರೋಪಿಸಿದೆ.

ನ್ಯೂಯಾರ್ಕ್‌ ಮೂಲದ 'ಹ್ಯೂಮನ್‌ ರೈಟ್ಸ್‌ ವಾಚ್‌' (Human Rights Watch) ಎಂಬ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಮಾಡಿರುವ ಈ ಆರೊಪದ ಬಗ್ಗೆ ಸೌದಿ ಅರೇಬಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸೌದಿ ರಕ್ಷಣಾ ಸಿಬ್ಬಂದಿ ನೂರಾರು ನಿರಾಶ್ರಿತರನ್ನು ಗಡಿ ಪ್ರದೇಶಗಳಲ್ಲಿ ಹತ್ಯೆ ಮಾಡಿದ್ದಾರೆ. ಸೌದಿಯ ಖ್ಯಾತಿಯನ್ನು ಹೆಚ್ಚಿಸುವುದಕ್ಕಾಗಿ ವೃತ್ತಿಪರ ಗಾಲ್ಫ್‌, ಫುಟ್‌ಬಾಲ್‌ ಆಟಗಾರರನ್ನು, ಕ್ಲಬ್‌ಗಳನ್ನು ಖರೀದಿಸಲು ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲು ನೂರಾರು ಕೋಟಿ ಖರ್ಚು ಮಾಡುಲಾಗುತ್ತದೆ. ಆದರೆ, ಆ ಮೂಲಕ ಇಂತಹ ಭಯಾನಕ ಅಪರಾಧಗಳ ಮೇಲಿನ ಗಮನವನ್ನು ತಿರುಗಿಸಬಾರದು' ಎಂದು ಎನ್‌ಜಿಒ ತನ್ನ ವರದಿಯಲ್ಲಿ ಹೇಳಿದೆ.

2015 ರಲ್ಲಿ, ಸೌದಿ ಅಧಿಕಾರಿಗಳು ಹುತಿಗಳನ್ನು ಉರುಳಿಸಲು ಒಕ್ಕೂಟವನ್ನು ಸಜ್ಜುಗೊಳಿಸಿದ್ದರು, ಅವರು ಹಿಂದಿನ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಸರ್ಕಾರದಿಂದ ಯೆಮೆನ್ ರಾಜಧಾನಿ ಸನಾವನ್ನು ವಶಪಡಿಸಿಕೊಂಡಿದ್ದರು.

ಸೌದಿ ಅರೇಬಿಯಾ ಮತ್ತು ಯೆಮನ್‌ನಲ್ಲಿ ಇಥಿಯೋಪಿಯನ್‌ ನಿರಾಶ್ರಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ದಶಕದಿಂದಲೂ ದಾಖಲಿಸುತ್ತಿರುವುದಾಗಿ ಹೇಳಿಕೊಂಡಿರುವ ಎನ್‌ಜಿಒ, ಇತ್ತೀಚಿನ ಹತ್ಯೆ ಕೃತ್ಯಗಳು 'ವ್ಯಾಪಕ ಮತ್ತು ವ್ಯವಸ್ಥಿತ' ಎಂಬಂತೆ ತೋರುತ್ತಿವೆ. ಇದು ಮಾನವೀಯತೆಗೆ ವಿರುದ್ಧವಾದ ಅಪರಾಧಗಳಿಗೆ ಕಾರಣವಾಗಬಹುದು. ಮಹಿಳೆಯರು, ಪುರುಷರು ಮತ್ತು ಮಕ್ಕಳು ಪರ್ವತದ ಭೂದೃಶ್ಯದಾದ್ಯಂತ ತೀವ್ರವಾಗಿ ಗಾಯಗೊಂಡಿದ್ದಾರೆ, ಅವರು ಛಿದ್ರಗೊಂಡಿದ್ದಾರೆ ಅಥವಾ ಈಗಾಗಲೇ ಸತ್ತಿದ್ದಾರೆ ಎಂದು ಅದು ಕಳವಳ ವ್ಯಕ್ತಪಡಿಸಿದೆ.

ಮೂಲಗಳ ಪ್ರಕಾರ ಸೌದಿ ಅರೇಬಿಯಾದ ದಕ್ಷಿಣ ಮತ್ತು ಯೆಮನ್‌ನ ಉತ್ತರ ಗಡಿ ಪ್ರದೇಶದಲ್ಲಿ ಸೌದಿ ರಕ್ಷಣಾ ಪಡೆಗಳು ನಡೆಸಿದ ಶೆಲ್‌ ಹಾಗೂ ಲಘು ಶಸ್ತ್ರಾಸ್ತ್ರ ದಾಳಿಯಿಂದಾಗಿ ಸುಮಾರು 430 ವಲಸಿಗರು ಮೃತಪಟ್ಟಿದ್ದಾರೆ ಎಂದು ಕಳೆದ ವರ್ಷ ವಿಶ್ವಸಂಸ್ಥೆ ಆತಂಕ ವ್ಯಕ್ತಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com