ಇಸ್ರೇಲ್-ಹಮಾಸ್ ಸಂಘರ್ಷ: ಗಾಜಾದಲ್ಲಿ 1 ಲಕ್ಷಕ್ಕೂ ಅಧಿಕ ಕಟ್ಟಡಗಳ ನಾಶ

ಇಸ್ರೇಲ್-ಹಮಾಸ್ ಸಂಘರ್ಷದಿಂದಾಗಿ ಗಾಜಾಪಟ್ಟಿಯಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಕಟ್ಟಡಗಳು ಧ್ವಂಸವಾಗಿವೆ ಎಂದು ಹೇಳಲಾಗಿದೆ.
ಗಾಜಾಪಟ್ಟಿಯಲ್ಲಿ ಇಸ್ರೇಲ್ ದಾಳಿ
ಗಾಜಾಪಟ್ಟಿಯಲ್ಲಿ ಇಸ್ರೇಲ್ ದಾಳಿ

ಟೆಲ್ ಅವೀವ್: ಇಸ್ರೇಲ್-ಹಮಾಸ್ ಸಂಘರ್ಷದಿಂದಾಗಿ ಗಾಜಾಪಟ್ಟಿಯಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ಕಟ್ಟಡಗಳು ಧ್ವಂಸವಾಗಿವೆ ಎಂದು ಹೇಳಲಾಗಿದೆ.

ಈ ಬಗ್ಗೆ ಸುದ್ದಿಸಂಸ್ಥೆ ಬಿಬಿಸಿ ವರದಿ ಮಾಡಿದ್ದು, ಇಸ್ರೇಲ್ ಮತ್ತು ಹಮಾಸ್ ನಡುವೆ ತಾತ್ಕಾಲಿಕ ಕದನ ವಿರಾಮ ಪ್ರಾರಂಭವಾಗುವ ಮೊದಲು, ಉತ್ತರ ಗಾಜಾದಾದ್ಯಂತ ವಿನಾಶದ ವ್ಯಾಪ್ತಿಯನ್ನು ನಿಯೋಜಿಸಿದ ಹೊಸ ಉಪಗ್ರಹ ಚಿತ್ರಗಳು ಬಹಿರಂಗಪಡಿಸಿವೆ ಎಂದು ಹೇಳಲಾಗಿದೆ.

ವಾರಗಟ್ಟಲೆ ಇಸ್ರೇಲಿ ವೈಮಾನಿಕ ದಾಳಿಗಳು ಮತ್ತು ನೆಲದ ಮೇಲಿನ ಇಸ್ರೇಲಿ ಸೈನಿಕರು ನಡೆಸಿದ ದಾಳಿ ನಂತರ, ಕದನ ವಿರಾಮ ಜಾರಿಗೆ ಬರುವ ಮುನ್ನ ಕಳೆದ ಗುರುವಾರ ಉಪಗ್ರಹ ಚಿತ್ರಗಳನ್ನು ತೆಗೆದುಕೊಳ್ಳಲಾಗಿದೆ. ಪ್ರತ್ಯೇಕ ಉಪಗ್ರಹ ದತ್ತಾಂಶ ವಿಶ್ಲೇಷಣೆಯು ಗಾಜಾದಾದ್ಯಂತ ಸಂಭವಿಸಿರುವ ವಿನಾಶದ ವಿವರಣೆ ನೀಡಿದೆ.

ಡ್ರೋನ್ ವಿಡಿಯೋ ಮತ್ತು ಪರಿಶೀಲಿಸಿದ ವೀಡಿಯೋ ಕಟ್ಟಡಗಳು ಮತ್ತು ಸಂಪೂರ್ಣ ನೆರೆಹೊರೆಗಳು ಅವಶೇಷಗಳಾಗಿ ಕುಸಿದಿರುವುದನ್ನು ತೋರಿಸುತ್ತವೆ. ಉತ್ತರ ಗಾಜಾವು ಇಸ್ರೇಲಿ ಸೇನಾಪಡೆಯ ಆಕ್ರಮಣದ ಕೇಂದ್ರಬಿಂದುವಾಗಿದೆ. ವ್ಯಾಪಕ ಹಾನಿ ಇಡೀ ಗಾಜಾಪಟ್ಟಿಯಾದ್ಯಂತ ವ್ಯಾಪಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com