ವಿದೇಶ
ಒತ್ತೆಯಾಳು ಬಿಡುಗಡೆ ಮಾತುಕತೆ ವಿಫಲ: ಕತಾರ್ ನಿಂದ ಸಂಧಾನ ತಂಡವನ್ನು ವಾಪಸ್ ಕರೆಸಿಕೊಂಡ ಇಸ್ರೇಲ್
ಇಸ್ರೇಲ್ ಹಾಗೂ ಹಮಾಸ್ ಕದನ ವಿರಾಮವನ್ನು ಮುಂದುವರೆಸುವ ಸಂಬಂಧ ಅಂತಾರಾಷ್ಟ್ರೀಯ ಮಟ್ಟದ ಮಧ್ಯಸ್ಥಿಕೆ ಮಾತುಕತೆ ತಿರಸ್ಕರಿಸಿವೆ.
ಗಾಜಾ: ಇಸ್ರೇಲ್ ಹಾಗೂ ಹಮಾಸ್ ಕದನ ವಿರಾಮವನ್ನು ಮುಂದುವರೆಸುವ ಸಂಬಂಧ ಅಂತಾರಾಷ್ಟ್ರೀಯ ಮಟ್ಟದ ಮಧ್ಯಸ್ಥಿಕೆ ಮಾತುಕತೆ ತಿರಸ್ಕರಿಸಿವೆ.
ಶನಿವಾರ (ಡಿ.02) ರಂದು ಗಾಜಾದಲ್ಲಿನ ಟಾರ್ಗೆಟ್ ಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸುವ ಮೂಲಕ ಕದನ ವಿರಾಮಕ್ಕೆ ಅಂತ್ಯ ಹಾಡಲಾಗಿದೆ.
ಶುಕ್ರವಾರದ ಆರಂಭದಲ್ಲಿ ಯುದ್ಧವಿರಾಮ ಉಲ್ಲಂಘನೆಯಾಗಿದ್ದು, ಮತ್ತೆ ಗಾಜಾ- ಇಸ್ರೇಲ್ ನಡುವೆ ಯುದ್ಧ ಪುನರಾರಂಭವಾಗಿದ್ದು ಹಮಾಸ್ ಸರ್ಕಾರದ ಮಾಹಿತಿಯ ಪ್ರಕಾರ ಕದನ ವಿರಾಮ ಉಲ್ಲಂಘನೆ ಬಳಿಕ 240 ಜನರು ಸಾವನ್ನಪ್ಪಿದ್ದಾರೆ.
ವಿಶ್ವಸಂಸ್ಥೆಯ ಪ್ರಕಾರ, ಎಂಟು ವಾರಗಳ ಯುದ್ಧದ ಅವಧಿಯಲ್ಲಿ ಗಾಜಾದಲ್ಲಿ ಅಂದಾಜು 1.7 ಮಿಲಿಯನ್ ಜನರು ಅಂದರೆ ಜನಸಂಖ್ಯೆಯ ಸುಮಾರು 80 ಪ್ರತಿಶತದಷ್ಟು ಜನರು, ಸ್ಥಳಾಂತರಗೊಂಡಿದ್ದಾರೆ. ಈ ನಡುವೆ ಯುಎಸ್ ಈಜಿಪ್ಟ್ ಬೆಂಬಲಿತ, ಕತಾರ್ ಮಧ್ಯಸ್ಥಿಕೆಯ ಕದನ ವಿರಾಮ ಮಾತುಕತೆಯೂ ವಿಫಲಗೊಂಡಿದ್ದು, ಆದರೆ ಶನಿವಾರ ಇಸ್ರೇಲ್ ತನ್ನ ಸಮಾಲೋಚಕರನ್ನು ದೋಹಾದಿಂದ ಹಿಂತೆಗೆದುಕೊಳ್ಳುತ್ತಿದೆ ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ